ಮಾಗಡಿ: ಕಳ್ಳರೆಲ್ಲರೂ ಒಂದೆಡೆ ಸೇರಿ ಧರ್ಮ ಯುದ್ದ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಯುದ್ಧದ ರೀತಿ ಬಿಂಬಿಸುತ್ತಿದ್ದು ಅವರಿಗೆ ಜನರೇ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಶಾಸಕ ಬಾಲಕೃಷ್ಣ ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸಬೇಕೆಂದು ಶಾಸಕ ಮುನಿರತ್ನ, ಮಾಜಿ ಸಚಿವ ಯೋಗೇಶ್ವರ್, ಮಾಜಿ ಶಾಸಕ ಎ.ಮಂಜುನಾಥ್, ಮಾಜಿ ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಒಂದೆಡೆ ಸೇರಿ ಪಾಂಡವರು-ಕೌರವರ ಯುದ್ಧ ಎಂದು ಹೇಳುತ್ತಿದ್ದಾರೆ. ಚರ್ಚೆಗೆ ಬರಲಿ ಯಾರ ಪಾಂಡವರು ಕೌರವರೂ ಎಂಬುದು ತಿಳಿಯುತ್ತದೆ. ಕಳ್ಳರೆಲ್ಲರೂ ಒಂದೆಡೆ ಸೇರಿ ಧರ್ಮ ಯುದ್ದ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.ರಾಜರಾಜೇಶ್ವರಿ ಕ್ಷೇತ್ರದಲ್ಲಿ ವೋಟರ್ ಐಡಿ ಪ್ರಕರಣ ಇತ್ಯರ್ಥವಾದ ಮೇಲೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಮುನಿರತ್ನಗೆ ಟಿಕೆಟ್ ಬೇಡ ಎಂದಿದ್ದರು. ಆಗ ಸುರೇಶ್ ನಿಮ್ಮ ಪರ ನಿಂತು ಚುನಾವಣೆ ಗೆಲ್ಲಿಸಿದ್ದಾರೆ. ಆ ಋಣ ನಿಮ್ಮ ಮೇಲಿದೆ. ಈಗ ಸುರೇಶ್ ಅವರನ್ನೇ ಸೋಲಿಸಲೆಂದು ಬಾಯಿ ಬಡೆದುಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು.ಡಾಕ್ಟರ್‌ಗೆ ಕೋಟಿಗಟ್ಟಲೆ ಹಣ ಎಲ್ಲಿಂದ ಬಂದಿತ್ತು:
ಸರ್ಕಾರಿ ಆಸ್ಪತ್ರೆ ವೈದ್ಯರಾಗಿದ್ದ ಡಾ.ಮಂಜುನಾಥ್ ಅವರಿಗೆ 50 ಕೋಟಿ ಆಸ್ತಿ ಹಾಗೂ ಅವರ ಪತ್ನಿ ಹೆಸರಿನಲ್ಲಿ 50 ಕೋಟಿ ಆಸ್ತಿ ಎಲ್ಲಿಂದ ಬಂತು. ಅವರು ವೈದ್ಯಕೀಯ ವೃತ್ತಿಯನ್ನೇ ಮಾಡಿದರೆ ಕೋಟಿಗಟ್ಟಲೆ ಹಣ ಎಲ್ಲಿಂದ ಬಂದಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣೆಯಲ್ಲಿ 250 ಕೋಟಿ ತೋರಿಸಿದ್ದಾರೆ. ಅವರ ಜಮೀನಿನಲ್ಲಿ ಆಲೂಗಡ್ಡೆ ತರಕಾರಿ ಬೆಳೆದು ಕೋಟಿಗಟ್ಟಲೆ ಹಣ ಮಾಡಿದ್ದಾರಾ, ಅವರು ನಡೆಸುತ್ತಿರುವ ಚಾನೆಲ್‌ನಿಂದ ಬರುತ್ತಿದೆಯಾ, ಸಾವಿರಾರು ಕೋಟಿ ಒಡೆಯರಾಗಿರುವ ಕುಮಾರಸ್ವಾಮಿ ಕಾಂಗ್ರೆಸ್‌ನವರು ಲೂಟಿಕೋರರು ಎಂದು ಹೇಳುತ್ತಾರೆ. ಇವರಿಗೆ ಎಲ್ಲಿಂದ ಅಷ್ಟು ಹಣ ಬಂದಿದೆ? ಹಾಸನ ಹುಟ್ಟೂರು, ರಾಮನಗರ ರಾಜಕೀಯ ಜನ್ಮ ನೀಡಿದ ಸ್ಥಳ, ರಾಮನಗರ, ಚನ್ನಪಟ್ಟಣ ನನ್ನ ಎರಡು ಕಣ್ಣು ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಈಗ ರಾಮನಗರ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಇವರ ರಾಜಕೀಯ ಟೂರಿಂಗ್ ಟಾಕೀಸ್ ಇದ್ದ ಹಾಗೆ ಎಂದು ಕುಮಾರಸ್ವಾಮಿ ವಿರುದ್ಧ ಶಾಸಕ ಬಾಲಕೃಷ್ಣ ವಾಗ್ದಾಳಿ ನಡೆಸಿದರು.ಕಾರ್ಯಕರ್ತರು ತಮ್ಮ ಬೂತಿನಲ್ಲಿ ಹೆಚ್ಚಿನ ಲೀಡ್ ಕೊಟ್ಟು ಸಂಸದ ಡಿ.ಕೆ.ಸುರೇಶ್ ಅವರ ಕೈ ಬಲಪಡಿಸಬೇಕು ಎಂದು ತಿಳಿಸಿದರು. (ಈ ಫೋಟೋ ಲೀಡ್‌ಗೆ ಬಳಸಿ)
ಫೋಟೊ 6ಮಾಗಡಿ1 :ಮಾಗಡಿಯಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸಿದರು.