ಎಲೆಮರೆ ಕಾಯಿಯಂತಿದ್ದ ಕಲಾವಿದ ನಮಗೆ ಆದರ್ಶ

KannadaprabhaNewsNetwork |  
Published : Aug 04, 2025, 12:30 AM IST
ಹಾರಿವಾಳ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಸಾಧನೆ ಮಾಡಿ ಎಲೆಮರೆ ಕಾಯಿಯಂತೆ ಬದುಕುತ್ತಿರುವ ಜಾನಪದ ಹಿರಿಯ ಕಲಾವಿದ ಬಸವರಾಜ ಹಾರಿವಾಳ ನಿಸ್ವಾರ್ಥ ಭಾವದಿಂದ ಇಡೀ ಜೀವನವನ್ನು ಸಮಾಜಮುಖಿ ಕಾರ್ಯಕ್ಕೆ ಮುಡಿಪಾಗಿಟ್ಟಿದ್ದಾರೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಸಾಧನೆ ಮಾಡಿ ಎಲೆಮರೆ ಕಾಯಿಯಂತೆ ಬದುಕುತ್ತಿರುವ ಜಾನಪದ ಹಿರಿಯ ಕಲಾವಿದ ಬಸವರಾಜ ಹಾರಿವಾಳ ನಿಸ್ವಾರ್ಥ ಭಾವದಿಂದ ಇಡೀ ಜೀವನವನ್ನು ಸಮಾಜಮುಖಿ ಕಾರ್ಯಕ್ಕೆ ಮುಡಿಪಾಗಿಟ್ಟಿದ್ದಾರೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ಭಾನುವಾರ ಹಿರಿಯ ಜಾನಪದ ಕಲಾವಿದ ಬಸವರಾಜ ಹಾರಿವಾಳ ಅವರ 50ನೇ ವರ್ಷದ ವಿವಾಹ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಬಸವರಾಜ ಹಾರಿವಾಳ ಅವರ ನಿಸ್ವಾರ್ಥ ಸೇವೆ, ಸಮ್ಮಾನಗಳಿಂದ ಬಸವನಬಾಗೇವಾಡಿ ಮಾತ್ರವಲ್ಲ, ವಿಜಯಪುರ ಜಿಲ್ಲೆಗೆ ಕೀರ್ತಿ ಬಂದಿದೆ. ಇವರಿಗೆ ಬಂದಿರುವ ಕೀರ್ತಿ ಈ ನೆಲದ ನಮ್ಮೆಲ್ಲರಿಗೂ ಸಂದ ಗೌರವವಾಗಿದೆ ಎಂದರು.ಲಾವಣಿ, ಹಂತಿಪದಗಳಂಥ ಜಾನಪದ ಪರಂಪರೆ ಕೊಂಡಿಗಳನ್ನು ಕಟ್ಟುವಲ್ಲಿ ಬಸವರಾಜ ಹಾರಿವಾಳ ಅವರ ಕೊಡುಗೆ ಅನುಪಮ. ಜಾತಿ, ಮತ ಪಂಥಗಳನ್ನು ನೋಡದೇ ಇಡೀ ಸಮುದಾಯದ ಹಿತಚಿಂತನೆ ಮೂಲಕ ಬಸವಾದಿ ಶರಣರು ಕಂಡ ಜಾತ್ಯಾತೀತ ಸೇವೆ ಅನುಕರಣೀಯವಾಗಿದೆ. ಇಂದಿನ ತಲೆಮಾರಿನವರು 50 ವರ್ಷ ಬದುಕುವುದೇ ಅಪರೂಪ. ಸದಾ ಸಮಾಜಮುಖಿ ಚಿಂತನೆಯ ಜೀವನ ನಡೆಸಿದ ಬಸವರಾಜ ಅವರು 50ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ ಎಂದು ಶುಭ ಹಾರೈಸಿದರು.ಬಸವನಬಾಗೇವಾಡಿ ಕೀರ್ತಿ ಹೆಚ್ಚಿಸುವಲ್ಲಿ ಸಮಾಜಮುಖಿ ಕಾರ್ಯದಿಂದಲೇ ಹೆಸರಾದ ಸಂಗಪ್ಪ ಹಾರಿವಾಳ ಹಾಗೂ ಸಂಗಪ್ಪ ಅಡಗಿಮನಿ ಅವರೂ ಸ್ಮರಣಾರ್ಹರು ಎಂದ ಸಚಿವರು, ಸಾಧಕ ಬಸವರಾಜ ಹಾರಿವಾಳ ಅವರು ಸಮಾಜಕ್ಕೆ ಸದಾ ಆದರ್ಶ ಹಾಗೂ ಚೈತನ್ಯದಾಯಕವೆಂದು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಇಂಗಳೇಶ್ವರದ ವಚನಶಿಲಾ ಮಂಟಪದ ಚನ್ನಬಸವಶ್ರೀಗಳು, ಮಸಬಿನಾಳ ವಿರಕ್ತಮಠದ ಸಿದ್ಧರಾಮಶ್ರೀಗಳು, ಮನಗೂಳಿಯ ಅಭಿನವ ಸಂಗನಬಸವ ಶ್ರೀಗಳು, ಹಿರೇಮಠದ ಶಿವಪ್ರಕಾಶ ಶ್ರೀಗಳು, ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ನಂದಿಹಾಳದ ಕೋಟೇಕಲ್ ಮಠದ ಸಂಗಯ್ಯಶ್ರೀಗಳು, ಸಂಗಯ್ಯ ಕಳೇಶ್ವರಮಠ, ಶಾಸಕ ರಾಜುಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ, ಬಸವೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಲೋಕನಾಥ ಅಗರವಾಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಹಿರಿಯ ಸಾಹಿತಿ ಲ.ರು.ಗೊಳಸಂಗಿ, ಜಾನಪದ ಪರಿಷತ್ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ಕೂಡಗಿ ಗ್ರಾಮದ ಶಿವಣ್ಣ ಗುಡದಿನ್ನಿ, ಉಕ್ಕಲಿ ಗ್ರಾಮದ ಶಾಂತಪ್ಪ ಇಂಡಿ, ಕತ್ನಳ್ಳಿಯ ನಿಂಗಪ್ಪ ಹೊನ್ನುಟಗಿ, ಲಕ್ಷ್ಮಣ ಜುಗತಿ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಸೇರಿ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ