ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು

KannadaprabhaNewsNetwork |  
Published : Dec 28, 2025, 04:30 AM IST
ಡಾ. ಅರವಿಂದ ಕುಲಕರ್ಣಿ ಅವರಿಗೆ ಸಿರಿಗನನಡ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಲೇಖಕ ತಾನೊಬ್ಬ ಓದುಗನಾಗಿ ತಾನು ಬರೆದುದನ್ನೇ ಮತ್ತೆ, ಮತ್ತೆ ಓದಿ ತಿದ್ದುಪಡೆ ಮಾಡಿಕೊಳ್ಳಬೇಕು ಎಂದು ಧಾರವಾಡದ ರಂಗಕರ್ಮಿ, ಲೇಖಕ ಡಾ.ಶಶಿಧರ ನರೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಲೇಖಕ ತಾನೊಬ್ಬ ಓದುಗನಾಗಿ ತಾನು ಬರೆದುದನ್ನೇ ಮತ್ತೆ, ಮತ್ತೆ ಓದಿ ತಿದ್ದುಪಡೆ ಮಾಡಿಕೊಳ್ಳಬೇಕು ಎಂದು ಧಾರವಾಡದ ರಂಗಕರ್ಮಿ, ಲೇಖಕ ಡಾ.ಶಶಿಧರ ನರೇಂದ್ರ ಹೇಳಿದರು. ನಗರದ ಹಿಂದವಾಡಿಯಲ್ಲಿರುವ ಐಎಂಇಆರ್ ಸಭಾಭವನದಲ್ಲಿ ಗುರುವಾರ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು 2025ರ ಸಿರಿಗನ್ನಡ ಗೌರವ ಪ್ರಶಸ್ತಿ, 2024ರ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಮತ್ತು ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವವಿಮರ್ಶೆಗೆ ಒಳಪಡಿಸಿಕೊಳ್ಳಬೇಕು. ತಾನು ಬರೆದುದು ಪ್ರಕಟನೆಗೆ ಯೋಗ್ಯವಾಗಿಯಾ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಕಟಣೆಗೆ ಅವಸರ ಪಡಬಾರದು. ಅಂದಾಗ ಮಾತ್ರ ಮೌಲ್ಯಯುತ ಕೃತಿಗಳು ಆತನಿಂದ ಹೊರಬರಲು ಸಾಧ್ಯ ಎಂದರು.ಕಾದಂಬರಿಕಾರ ಉಜಿರೆಯ ಡಾ.ಹಳೆಮನಿ ರಾಜಶೇಖರ ಮಾತನಾಡಿ, ಲೇಖಕನಿಗೆ ಓದುಗರು, ನಾಟಕಕಾರರಿಗೆ ಪ್ರೇಕ್ಷಕರು ದೇವರುಗಳಿದ್ದಂತೆ. ಅವರನ್ನು ತೃಪ್ತಿ ಪಡೆಸುವ, ಮನಸ್ಸನ್ನು, ಸಂವೇದನೆಯನ್ನು ಅರಳಿಸಲು ಚಡಪಡಿಸದ ಲೇಖಕ ಹೊಸದನ್ನೇನು ಸೃಷ್ಟಿಸಲಾರ. ಓದುಗರು ಓದಲಿ ಬಿಟ್ಟರೆ ಬಿಡಲಿ ಎಂದು ಬರೆಯುವ ಬರೆಹಗಾರ ಆತ್ಮವಂಚನೆ ಮಾಡಿಕೊಂಡಂತೆ ಎಂದು ತಿಳಿಸಿದರು.ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎನ್.ಬಿ.ದೇಶಪಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಗಳನ್ನು ಮುಂದೊರಿಸಿಕೊಂಡು ಹೋಗಲು ಯುವಕರ ಅವಶ್ಯಕತೆಯಿದ್ದು ಪಠ್ಯೇತರ ಚಟುಗಳಲ್ಲಿಯೂ ಮಕ್ಕಳು ಪಾಲ್ಗೊಳ್ಳುವಂತೆ ಪಾಲಕರು ಪ್ರೋತ್ಸಾಹಿಸಬೇಕು. ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ರಂಗಭೂಮಿಯಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಡಾ.ಅರವಿಂದ ಕುಲಕರ್ಣಿ ಮತ್ತು ಅನುವಾದ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿರುವ ಪ್ರೊ.ಚಂದ್ರಕಾಂತ ಪೋಕಳೆಯವರಿಗೆ 2025ನೇ ವರ್ಷದ ಸಿರಿಗನ್ನಡ ಗೌರವ ಪ್ರಶಸ್ತಿ ಹಾಗೂ ಪಾರ್ವತಿ ಪಿಟಗಿಯವರು ರಚಿಸಿರುವ ಪುನರುತ್ಥಾನ'''''''' (ಕಾದಂಬರಿ) ಮತ್ತು ನಾಗೇಶ ನಾಯಕ ರಚನೆಯ ಮನುಷ್ಯರಿಲ್ಲದ ನೆಲ''''''''''''''''(ಕವನ ಸಂಕಲನ) ಕೃತಿಗಳಿಗೆ 2024ನೇ ವರ್ಷದ ಸಿರಿಗನ್ನಡ ಪುಸ್ತಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಸಮಾರಂಭದಲ್ಲಿ ದತ್ತಿನಿಧಿ ಪುಸ್ತಕ ಪ್ರಶಸ್ತಿ ವಿಜೇತರಾದ ರೀಟಾ ಬಣಗಾರ ಮೊದಲ ಧ್ವನಿ ಎಲ್.ಎಸ್. ಶಾಸ್ತ್ರಿ ಎಂಥ ಮರುಳಯ್ಯ ಇದು ಎಂಥಾ ಮರಳೋ'''''''''''''''' ರಾಜೇಂದ್ರಸ್ವಾಮಿ ಹಿರೇಮಠ ಚಿಣ್ಣರ ಚಿಗುಳಿ ಮಂಜುನಾಥ ಕಳಸಣ್ಣವರ (ಗಂಡು ಮೆಟ್ಟಿನ ರಾಣಿ), ಡಾ.ವೈ.ಎಂ.ಯಾಕೊಳ್ಳಿ ಅಮೃತದ ತೊಟ್ಟು ಧುರಾ ಕರ್ಣಂ ಬೌದ್ಧಾವತಾರ ಎಂ.ಬಿ.ಹೂಗಾರ ಭವಕೆ ಬಂದ ಬೆಳಕು ಸುರೇಶ ದೇಸಾಯಿ ಸಾಹಿತ್ಯ ಸರಸ್ವತಿಯರು ಡಾ.ಪ್ರಭಾ ಬೋರಗಾಂವಕರ ಹೆಣ್ಣು ಹುಣ್ಣಲ್ಲ ಹೂವು ಲೇಖಕರನ್ನು ವೇದಿಕೆ ಮೇಲೆ ಶಾಲು ಹೊದಿಸಿ, ನಗದು ಹಣ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಸಾಧನೆ ಮತ್ತು ಸೇವೆಗಾಗಿ ನೀಡುವ ದತ್ತಿನಿದಿ ಪ್ರಶಸ್ತಿಗಳಿಗೆ ಭಾಜನರಾದ ಡಾ.ದಯಾನಂದ ನೂಲಿ (ಜೀವಮಾನ ಸಾಧನೆ), ವಿಜಯಲಕ್ಷ್ಮೀ ವೆಂಕಟೇಶ ಕುಲಕರ್ಣಿ (ಸಾಮಾಜಿಕ ಸೇವೆ), ಹಮೀದಾ ಬೇಗಂ ದೇಸಾಯಿ (ಜೀವಮಾನ ಸಾಧನೆಗಾಗಿ ಮಹಿಳೆ), ನಿರಜಾ ಗಣಾಚಾರಿ (ಶ್ರೇಷ್ಠ ಶಿಕ್ಷಕ ಸಾಹಿತಿ), ಡಾ.ವಿ.ಎಸ್.ಮಾಳಿ (ವೈಚಾರಿಕ ಸಂಪನ್ಮೂಲ ವ್ಯಕ್ತಿ), ಡಾ.ಜ್ಯೋತಿರ್ಲಿಂಗ್‌ ಹೊನಕಟ್ಟಿ (ಜನಪದ ಕಲಾವಿದ) ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಪಿ.ಜಿ.ಕೆಂಪಣ್ಣವರ, ಡಾ.ಶ್ರೀಧರ ಹುಕ್ಕೇರಿ, ಭಾರತಿ ವಡವಿ, ಗುಂಡೇನಟ್ಟಿ ಮಧುಕರ ಮಾತನಾಡಿದರು. ದೀಪಿಕಾ ಚಾಟೆ, ಡಾ.ಜಯಂತ ಕಿತ್ತೂರ, ನಾರಾಯಣ ಗಣಾಚಾರಿ, ಚಿದಂಬರ ಮುನವಳ್ಳಿ, ಅನಂತ ಗೊಣಬಾಳ ಪರಿಚಯಿಸಿದರು. ಶಿರೀಷ ಜೋಶಿ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ
ಜೀವನದಲ್ಲಿ ಅಕ್ಷರ ಜ್ಞಾನದ್ದೇ ಮಹತ್ವದ ಪಾತ್ರ