ಬಸವ ಮಂಟಪ ಕೃತಿಯ ಲೇಖಕ ವಿಕೃತಿ ಮನಸ್ಸಿನ ಅಪ್ರಬುದ್ಧ ವ್ಯಕ್ತಿ: ಪ್ರೊ.ಎಸ್.ಶಿವರಾಜಪ್ಪ

KannadaprabhaNewsNetwork |  
Published : Nov 25, 2026, 01:15 AM IST
40 | Kannada Prabha

ಸಾರಾಂಶ

ಬಸವ ಮಂಟಪ ಕೃತಿಯ ಲೇಖಕ ವಿಕೃತಿ ಮನಸ್ಸಿನ ಅಪ್ರಬುದ್ಧ ವ್ಯಕ್ತಿ. ರವಿಹಂಜ್ ಎಂಬ ವ್ಯಕ್ತಿ ಸಮಾಜ ಸುಧಾರಕ ಬಸವಣ್ಣನವರನ್ನು ಮತ್ತು ಲಿಂಗಾಯಿತರನ್ನು ಅವಹೇಳನಕಾರಿಯಾಗಿ ಬಸವ ಮಂಟಪದ ಕೃತಿಯಲ್ಲಿ ಬರೆದಿರುವುದು ಸಮಾಜದ ಶಾಂತಿ ಕದಡುವ ಹುನ್ನಾರವಾಗಿದೆ. ಇದು ಬಸವಣ್ಣನವರ ವ್ಯಕ್ತಿತ್ವ ಹಾಗೂ ಅವರ ತತ್ಪಾದರ್ಶಕ್ಕೆ ಕಪ್ಪುಚುಕ್ಕಿಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಸವ ವಿರೋಧಿ ರವಿಹಂಜ್ ಅವರನ್ನು ಗಡಿಪಾರು ಮಾಡುವಂತೆ ಸಾಹಿತಿ ಪ್ರೊ.ಎಸ್.ಶಿವರಾಜಪ್ಪ ಆಗ್ರಹಿಸಿದ್ದಾರೆ.

ಬಸವ ಮಂಟಪ ಕೃತಿಯ ಲೇಖಕ ವಿಕೃತಿ ಮನಸ್ಸಿನ ಅಪ್ರಬುದ್ಧ ವ್ಯಕ್ತಿ. ರವಿಹಂಜ್ ಎಂಬ ವ್ಯಕ್ತಿ ಸಮಾಜ ಸುಧಾರಕ ಬಸವಣ್ಣನವರನ್ನು ಮತ್ತು ಲಿಂಗಾಯಿತರನ್ನು ಅವಹೇಳನಕಾರಿಯಾಗಿ ಬಸವ ಮಂಟಪದ ಕೃತಿಯಲ್ಲಿ ಬರೆದಿರುವುದು ಸಮಾಜದ ಶಾಂತಿ ಕದಡುವ ಹುನ್ನಾರವಾಗಿದೆ. ಇದು ಬಸವಣ್ಣನವರ ವ್ಯಕ್ತಿತ್ವ ಹಾಗೂ ಅವರ ತತ್ಪಾದರ್ಶಕ್ಕೆ ಕಪ್ಪುಚುಕ್ಕಿಯಾಗಿದೆ. ಬಸವಣ್ಣನವರು ವಿಶ್ವ ಧರ್ಮಿ, ಜಾತಿ, ಧರ್ಮ, ವರ್ಗ, ವರ್ಣ ಎಲ್ಲೆಗಳನ್ನು ಮೀರಿ ಬೆಳೆದ ಸಮಾನತೆಯ ಸಾಕರಮೂರ್ತಿಯಾದ ಇವರ ತತ್ವಾಧಾರಿತ ಬದುಕು ಬರಹಗಳಿಗೆ ಹನ್ನೆರಡನೆಯ ಶತಮಾನದಿಂದಲೂ ವಿಕಾರ ಮನಸ್ಸಿನ ನೂರಾರು ಜನ ಇಂತಹ ಅವಹೇಳನ ಬರಹಗಳನ್ನು, ಹೇಳಿಕೆಗಳನ್ನು, ನೀಡುವುದರ ಮೂಲಕ ಬಸವಾಧಿ ಚರಣಗೆ ವಚನ ಸಾಹಿತ್ಯಕ್ಕೆ ಚ್ಯುತಿ ತಂದಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಬುದ್ದ ಬಸವಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಕುವೆಂಪು ಮುಂತಾದ ಮಹನೀಯರ ಅವರ ಬಗ್ಗೆ ವಿರೋಧಿಸುವುದು, ಅಸಭ್ಯವಾಗಿ ವರ್ತಿಸಿರುವುದನ್ನು ಪ್ರತಿ ವರ್ಷವೂ ನೋಡುತ್ತಿದ್ದೇವೆ. ಇದು ಅಕ್ಷಮ್ಯ ಅಪರಾಧ. ಸರ್ಕಾರ ಬಸವಮಂಟಪ ಕೃತಿಯನ್ನು ಮುಟ್ಟುಗೋಲು ಹಾಕುವುದರ ಮೂಲಕ ಒಳ್ಳೆಯ ಕೆಲಸ ಮಾಡಿದೆ. ಇಷ್ಟೇ ಸಾಲದು ರವಿ ಹಂಜ್ ಎಂಬ ವಿಕೃತಿ ವ್ಯಕ್ತಿಯನ್ನು ಐದು ವರ್ಷಗಳ ಕಾಲ ಗಡಿಪಾಡು ಮಾಡಬೇಕು, ಮಾಡಿದ ತಪ್ಪಿಗೆ ಒಂದು ಕೋಟಿ ರೂಪಾಯಿ ದಂಡ ವಿಧಿಸಬೇಕು. ಇವರು ಬೇರೆ ಬೇರೆ ದೇಶಗಳಿಗೆ ಹೋಗಬಾರದಂತೆ ವಿಸಾ ರದ್ದು ಗೊಳಿಸುವಂತೆ ಭಾರತ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇಷ್ಟು ಆನಾಹುತ ಜರುಗಿದ್ದರೂ ಸಹ ನಾನು ಏನೂ ತಪ್ಪು ಮಾಡಿಲ್ಲ. ನಾನು ಅಪ್ಪಟ ಬಸವ ಪ್ರೇಮಿ. ನನ್ನ ಮೇಲಿರುವ ಎಫ್.ಎ.ಆರ್. ರದ್ದು ಮಾಡಿ ಎಂದು ನ್ಯಾಯಾಲಯಕ್ಕೆ ಮಾನವಿ ಸಲ್ಲಿಸಿರುವುದು ಇವರ ಅಪ್ರಭುದ್ಧತೆಯನ್ನು ತೋರಿಸುತ್ತದೆ. ರವಿ ಹಂಜ್ ಒಬ್ಬ ವ್ಯಕ್ತಿಗೆ ಶಿಕ್ಷೆಯಾದರೆ ಸಾಲದು ಮುದ್ರಿಸಿದವರಿಗೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದವರೆಗೆ ಶಿಕ್ಷೆಯಾಗಬೇಕು. ವಿವಾದ ಕಿಡಿ ಮತ್ತು ಸಮಾಜದಲ್ಲಿ ಆಶಾಂತಿ ಸೃಷ್ಟಿಸಿ ಬೇರೆ ದೇಶಕ್ಕೆ ರವಿ ಹಂಜ್ ಪಲಾಯಾದ ಮಾಡಿರುವುದು, ಅವರ ಹೇಡಿತನವನ್ನು ತೋರಿಸುತ್ತದೆ. ತಾಕತ್ತಿದರೆ ಇಲ್ಲಿಯೇ ಇದ್ದು ಬಂದು ಸವಾಲುಗಳನ್ನು ಎದುರಿಸಬೇಕಿತ್ತು ಎಂದಿದ್ದಾರೆ.

ಇಂತಹ ಸಮಾಜದ್ರೋಹಿ ಅವಿವೇಕಿ ಲೇಖಕರ ಬಗ್ಗೆ ಸರ್ಕಾರ ಮತ್ತು ಬಸವಾಭಿಮಾನಿಗಳು ಕಠಿಣ ಸಭೆ ವಿಧಿಸಬೇಕು. ಘನ ನ್ಯಾಯಾಲಯ ಇವರ ಎಫ್.ಐ. ಆರ್.ಅನ್ನು ರದ್ದು ಗೊಳಿಸಬಾರದು. ಪ್ರಚಾರದ ಗೀಳಿಗೆ ಇಂತಹ ದುಷ್ಕೃತ್ಯವನ್ನು ಮತ್ತಷ್ಟು ಜನಮಾಡಬಹುದು. ಕೃತಿಯ ಶೀರ್ಷಕೆಗೂ ಒಳಗಿರುವ ವಿಷಯಕ್ಕೂ ತದ್ ವಿರುದ್ಧವಾಗಿದೆ. ಆದಕಾರಣ ಸರ್ಕಾರ ಇಂತಹ ತಿಳಿಗೇಡಿ ವಚನ ಸಾಹಿತ್ಯ ಪರಿಜ್ಞಾನದ ಎಲ್ಲದ ರವಿಹಂಚ್ನ್ನು ಐದು ವರ್ಷಗಳ ಕಾಲ ಗಡಿಪಾರು ಮಾಡುವುದು ಸೂಕ್ತ. ಎಂಬುದು ನನ್ನ ಅಭಿಪ್ರಾಯ ಮಾತ್ರವಲ್ಲ ಇಡೀ ಬಸವಭಿಮಾನಿಗಳ ಆಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನ: ನಿಸಾರ್ ಅಹಮದ್
ರವಿ ಹಂಜ್‌ ಗಡಿಪಾರಿಗೆ ಬಸವಾಭಿಮಾನಿಗಳ ಆಗ್ರಹ