ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಗುರುವಾರ ಸ್ಥಳಕ್ಕೆ ಭೇಟಿನೀಡಿದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಸುದ್ದಿಗಾರರೊಂದಿಗೆ ಮಾತನಾಡಿ, ಗೇಟ್‌ನ ಪ್ಲೇಟ್ ಮುರಿದಿರುವುದಕ್ಕೆ ಸರ್ಕಾರವೇ ಹೊಣೆಯೆಂದು ವಿನಾಕಾರಣ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸುತ್ತಿರುವ ತೇರದಾಳ ಶಾಸಕ ಸಿದ್ದು ಸವದಿ ನೈಜತೆ ಅರಿತು ಮಾತನಾಡಲಿ ಎಂದು ಶಾಸಕ ಸವದಿ ವಿರುದ್ಧ ಹರಿಹಾಯ್ದರು.
ಮೂರು ವರ್ಷಗಳ ಹಿಂದೆ ಇಂತಹದ್ದೇ ಪ್ರಸಂಗ ನಡೆದಾಗ ಸವದಿಯವರೇ ಶಾಸಕರಾಗಿದ್ದರು. ಆವಾಗ ಹೊಸ ಗೇಟ್ ಅಳವಡಿಕೆ ಮಾಡುವ ಬದಲು ಈಗ ಬೂಟಾಟಿಕೆ ಮಾತುಗಳನ್ನಾಡುತ್ತಿರುವುದು ವಿಚಿತ್ರವಾಗಿದೆ. ಕ್ಷೇತ್ರದ ಶಾಸಕರಾಗಿ ಜನಸಾಮಾನ್ಯರಿಗೆ ಆಗಿರುವ ತೊಂದರೆ ನಿವಾರಿಸುವ ಬದಲು ವೃಥಾ ಆರೋಪಗಳಿಂದ ಹತಾಶೆ ಭಾವನೆ ತೋರುತ್ತಿದ್ದಾರೆ. ಇದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಯೊಂದಿಗೆ ಸಮಸ್ಯೆಗಳ ಸಂದರ್ಭ ಪರಿಹರಿಸುವ ಕಾರ್ಯದಲ್ಲಿ ತೊಡಗುವುದು ಜನಪ್ರನಿಧಿಯ ಕರ್ತವ್ಯ ಎಂಬುದನ್ನು ಮರೆತಿದ್ದಾರೆದನ್ನು ಸವದಿಯವರು ಅಳವಡಿಸಿಕೊಳ್ಳಲಿಯೆಂದು ದೂರಿದರು.ಕೆಲಸವಾದಾಗ ನಾನು, ಸಮಸ್ಯೆಗಳಿಗೆ ನೀವು : ಯಾವುದೇ ಕಾರ್ಯಗಳಾದಾಗ ಜನರ ಮುಂದೆ ನಿಂತು ನಾನೇ ಮಾಡಿದ್ದು ಎಂದು ಹೇಳುತ್ತ, ಸಮಸ್ಯೆಗ ಬಂದಾಗ ಸರ್ಕಾರ ಹೊಣೆಯೆಂದು ಪೊಳ್ಳು ಆರೋಪ ಮಾಡುವ ಚಾಳಿಯನ್ನು ಶಾಸಕರು ಬಿಡಬೇಕೆಂದು ಸಿದ್ದು ಕೊಣ್ಣೂರ ಕಿವಿಮಾತು ಹೇಳಿದರು.
ನೀರಾವರಿ ಸಚಿವರು ಏಕೆ ಬರಲಿಲ್ಲ:
ಮೊಸರಲ್ಲಿ ಕಲ್ಲು ಹುಡುಕುವ ಕಾರ್ಯ ಕಾಂಗ್ರೆಸ್‌ನದ್ದಾಗಿದ್ದು, ರೈತರ ಹಿತ ಕಾಪಾಡುವ ಬದಲು ನೀರಿನ ಮೇಲೆ ರಾಜಕಾರಣ ಸಲ್ಲದು ಎಂದು ಸವದಿ ತಿಳಿಸಿದರು. ಈ ಕುರಿತಾಗಿ ಸರ್ಕಾರವನ್ನು ಆಪಾದಿಸುತ್ತಿದ್ದಂತೆ ನಮ್ಮ ಮೇಲೆಯೇ ಗೂಬೆ ಕೂಡ್ರಿಸುವ ತಂತ್ರಗಾರಿಕೆ ಸರ್ಕಾರದ್ದು. ಆಪಾದನೆಯನ್ನು ಸರ್ಕಾರದ ವಿರುದ್ಧ ಬದಲಾಗಿ ಸಾರ್ವಜನಿಕರ ವಿರುದ್ಧ ಮಾಡಬೇಕೆ? ಎಂದು ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ್ದ ಸವದಿ ಸಮರ್ಥಿಸಿಕೊಂಡರು.