ತಾಲೂಕಿನ ಹರಿಯಬ್ಬೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಹರಿಯಬ್ಬೆ ಗೆಳೆಯರ ಬಳಗದ ವತಿಯಿಂದ ಪಕ್ಷಿ ಲೋಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಕ್ಷಿ ಲೋಕ ಕಾರ್ಯಕ್ರಮದಲ್ಲಿ ಗರುಪ್ರಸಾದ್ ಅಭಿಮತಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಹರಿಯಬ್ಬೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಹರಿಯಬ್ಬೆ ಗೆಳೆಯರ ಬಳಗದ ವತಿಯಿಂದ ಪಕ್ಷಿ ಲೋಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ದೇಶಿಸಿ ಪಕ್ಷಿ ತಜ್ಞ ಗುರುಪ್ರಸಾದ್ ಮಾತನಾಡಿ, ನಮ್ಮ ನಾಡಿನಲ್ಲಿ ಅನೇಕ ಪ್ರಬೇಧದ ಪಕ್ಷಿಗಳಿವೆ. ಪಕ್ಷಿಗಳಿಂದ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಸಾಕಷ್ಟು ಉಪಯೋಗಗಳಾತ್ತಿವೆ. ಇಂದಿನ ಆಧುನಿಕ ಯುಗದಲ್ಲಿ ಪಕ್ಷಿಗಳ ಮೇಲಾಗುತ್ತಿರುವ ಪ್ರಹಾರ ಮತ್ತು ಅವುಗಳ ಸಂತತಿ ನಾಶದಿಂದ ಪರಿಸರದಲ್ಲಾಗುತ್ತಿರುವ ಅಸಮತೋಲನದ ಬಗ್ಗೆ ನಾವೆಲ್ಲರೂ ಗಮನ ಹರಿಸಬೇಕಿದೆ. ಪಕ್ಷಿಗಳ ಉಳಿವಿನಿಂದ ಪರಿಸರಕ್ಕೆ, ಪರಿಸರದ ಉಳಿವಿನಿಂದ ಮಾನವನಿಗೆ ಅನುಕೂಲಗಳಾಗಬೇಕಿದೆ. ಇಂದಿನ ಮಕ್ಕಳಲ್ಲಿ ಪಕ್ಷಿಗಳ ಸಂತತಿಯನ್ನು ಹೆಚ್ಚಿಸುವ ಬಗ್ಗೆ ಅರಿವು ಮೂಡಿಸುವ ತುರ್ತು ಅಗತ್ಯವಿದೆ ಎಂದ ಅವರು, ಪಕ್ಷಿಗಳನ್ನು ಅವುಗಳ ಧ್ವನಿಗಳಿಂದ ಅವುಗಳ ರೆಕ್ಕೆ ಪುಕ್ಕಗಳಿಂದ ಗುರುತಿಸಬಹುದು. ಪಕ್ಷಿಗಳ ನಾಶ ಮಾನವ ಕುಲಕ್ಕೂ ಕಂಟಕವಾಗುವುದರಿಂದ ನಾವೆಲ್ಲರೂ ಪಕ್ಷಿಗಳ ಸಂತತಿ ಹೆಚ್ಚಿಸುವ ಬಗ್ಗೆ ದೃಢ ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು. ಈ ವೇಳೆ ಕಾರ್ಯಕ್ರಮ ಪ್ರಾಯೋಜಕ ಪೂಜಾರ್ ಶಿವಣ್ಣ, ಕುವೆಂಪು-ತೇಜಸ್ವಿ ಪ್ರತಿಷ್ಠಾನದ ಜಿಟಿ ನರೇಂದ್ರ ಕುಮಾರ್, ಮುಖ್ಯ ಶಿಕ್ಷಕ ಮಂಜಣ್ಣ, ಎಸ್‌ಡಿಎಂಸಿ ಅಧ್ಯಕ್ಷರಾದ ರಂಗನಾಥ್, ವೆಂಕಟಗೌಡ ಹಾಗೂ ಪ್ರೌಢಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಹರಿಯಬ್ಬೆ ಗೆಳೆಯರ ಬಳಗದ ಸದಸ್ಯರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.