ಬ್ರಹ್ಮಾವರ : ವ್ಯಕ್ತಿಯ ಮಾತು ಸ್ಪಷ್ಟವಾಗಿದ್ದರೆ ಅದು ಅವರ ಆರೋಗ್ಯವನ್ನು ಪ್ರತಿಫಲಿಸುತ್ತದೆ. ದೇಹವೆಂಬುದು ಆತ್ಮದ ವಾಹನ. ದೇಹ ಶಾಶ್ವತವಲ್ಲ. ಕುಲ, ಭಾಷೆ, ಆಚಾರ ವಿಚಾರಗಳು ನಮ್ಮನ್ನು ಬೆಂಬಿಡದೆ ಬರುತ್ತವೆ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಹರೀಶ್ ಟಿ.ಜಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ರಾಬರ್ಟ್ ರಾಡ್ರಿಗಸ್ ವಹಿಸಿದ್ದರು. ಸಮಾಜದ ಸ್ವಾಸ್ಥ್ಯವಿರುವುದು ಸಹಬಾಳ್ವೆ, ಸಹಕಾರ ಹಾಗೂ ಪರಸ್ಪರ ಅರ್ಥಮಾಡಿಕೊಳ್ಳುವಿಕೆಯಲ್ಲಿ ಎಂದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ಅರುಣ್ ಕುಮಾರ್ ಎಸ್.ಆರ್. ಉಪಸ್ಥಿತರಿದ್ದರು. ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರಶಾಂತ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳಾದ ಅಮೃತಾ ಹಾಗೂ ನಮೃತಾ ಕನಕಗಾಯನ ಹಾಡಿದರು. ಬಿ.ಎ ಪದವಿ ವಿದ್ಯಾರ್ಥಿ ಆದರ್ಶ ಕಾರ್ಯಕ್ರಮ ನಿರೂಪಿಸಿದರು