ಕನ್ನಡಪ್ರಭ ವಾರ್ತೆ ಕೆ.ಆರ್. ನಗರಪ್ರತಿಯೊಬ್ಬರೂ ಪರಿಸರ ಮತ್ತು ಪ್ರಾಣಿ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.
ಮೈಸೂರು ನಗರದ ದಟ್ಟಗಳ್ಳಿಯಲ್ಲಿರುವ ಸಾ.ರಾ.ಪಾರಂ ಹೌಸ್ ನಲ್ಲಿ ಬುಧವಾರ ಉಪನ್ಯಾಸಕ ಕೆ.ಎಲ್.ರಮೇಶ್ ರಚಿಸಿರುವ ಚಿಂಟು ನಾ ನಿನ್ನ ಮರೆಯಲಾರೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.ತಮ್ಮ ಪಾರಂ ಹೌಸ್ ನಲ್ಲಿ ಕಳೆದ ಐದು ವರ್ಷಗಳ ಹಿಂದೆ ಮೃತಪಟ್ಟ ಮುದ್ದಿನ ಕೋತಿ ಚಿಂಟುವಿನ ಒಡನಾಟವನ್ನು ನೆನೆದ ಅವರು ಪ್ರಾಣಿ ಮತ್ತು ಪಕ್ಷಿಗಳ ಪ್ರೀತಿ ಹಾಗೂ ಸಾಮಿಪ್ಯ ನಮ್ಮಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸುತ್ತದೆ ಎಂದರು.
ಪರಿಸರ ಸ್ವಚ್ಚವಾಗಬೇಕಾದರೆ ಹೆಚ್ಚಾಗಿ ಪ್ರಾಣಿ ಮತ್ತು ಪಕ್ಷಿಗಳ ಅವಶ್ಯಕತೆ ಇದ್ದು ನಾವು ಸಹ ಸ್ವಚ್ಚತೆಯ ಜತೆಗೆ ವಿವಿದ ಬಗೆಯ ವನ್ಯಜೀವಿಗಳ ಬೆಳವಣಿಗೆಗೆ ಆಧ್ಯತೆ ನೀಡಬೇಕೆಂದು ಸಲಹೆ ನೀಡಿದರು.ಆಧುನಿಕ ಯುಗದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಇತ್ತೀಚೆಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಜಾನುವಾರುಗಳ ಬಳಕೆ ಕಡಿಮೆಯಾಗಿ ಯಂತ್ರಗಳನ್ನು ಉಪಯೋಗಿಸುತ್ತಿರುವುದು ಪರಿಸರಕ್ಕೆ ಮಾರಕವಾಗುತ್ತಿದ್ದು ಈ ಪದ್ದತಿ ಬದಲಾಗಬೇಕೆಂದರು.
ಇದಕ್ಕೂ ಮೊದಲು ಅಗಲಿದ ಚಿಂಟು ಜ್ಞಾಪಕಾರ್ಥವಾಗಿ ಮುಂಜಾನೆ ಹೋಮ ಹವನ ನಡೆಸಿ ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ನಡೆಸಲಾಯಿತು.ಮಾಜಿ ಸಚಿವ ಸಾ.ರಾ.ಮಹೇಶ್ ಪತ್ನಿ ಅನಿತಾ ಸಾ.ರಾ.ಮಹೇಶ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಮೇಯರ್ ಎಂ.ಜೆ. ರವಿಕುಮಾರ್, ಕೆ.ಆರ್.ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಅಮ್ಮ ಸಂತೋಷ್, ಜಿ.ಪಂ ಮಾಜಿ ಸದಸ್ಯರಾದ ಸಾ.ರಾ.ನಂದೀಶ್, ಸಿ.ಜೆ.ದ್ವಾರಕೀಶ್, ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಬಿ.ಲೋಕೇಶ್, ಜೆಡಿಎಸ್ ಮುಖಂಡರಾದ ಚೆಕ್ಕೆರೆ ಶಿವಕುಮಾರ್, ಯಶವಂತ್ ಮಲ್ಲಿಗೆರೆ, ಹೊಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ, ಬಿಜೆಪಿ ಮುಖಂಡ ಯಶಸ್ವಿ ಸೋಮಶೇಖರ್, ಜೆಡಿಎಸ್ ಮುಖಂಡ ಶ್ರೀರಾಮಪುರ ಸಂತೋಷ್, ತಾಲೂಕು ಯುವ ಜೆಡಿಎಸ್ ಉಪಾಧ್ಯಕ್ಷ ಕಾಂತರಾಜು, ಯುವ ನಾಯಕರಾದ ತಂದ್ರೆ ಮಂಜು, ಎಸ್ ಎಲ್ ಡಿ ಶಂಕರ್, ಹೊಸಹಳ್ಳಿ ಪುಟ್ಟರಾಜು, ಬಿ.ಆರ್.ಕುಚೇಲ ಮೊದಲಾದವರು ಭಾಗವಹಿಸಿದ್ದರು.