ಭಟ್ಕಳ: ಸಮುದ್ರಕ್ಕೆ ಈಜಲು ಹೋಗಿ ಅಲೆಯ ರಭಸಕ್ಕೆ ನೀರು ಪಾಲಾಗುತ್ತಿದ್ದ 10ನೇ ತರಗತಿ ವಿದ್ಯಾರ್ಥಿಯೋರ್ವನನ್ನು 7ನೇ ತರಗತಿಯ ಬಾಲಕನೋರ್ವ ಜೀವದ ಹಂಗು ತೊರೆದು ಪ್ರಾಣ ರಕ್ಷಿಸಿದ ಘಟನೆ ತಾಲೂಕಿನ ಮಾವಿನಕುರ್ವೆಯ ತಲಗೋಡಿನಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ಅಲೆಗಳ ರಭಸಕ್ಕೆ ಈತ ಸಮುದ್ರದ ಆಳಕ್ಕೆ ಹೋಗಿದ್ದು, ಪ್ರಾಣರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಇದೇ ಸಮಯಕ್ಕೆ ಗೆಳೆಯರೊಂದಿಗೆ ಆಟ ಆಡಲು ಬಂದ 7ನೇ ತರಗತಿ ವಿದ್ಯಾರ್ಥಿ ಶ್ರೀಕರ್ ಪುರಂದರ ಖಾರ್ವಿ ಅಪಾಯಕ್ಕೆ ಸಿಲುಕಿದ್ದ ಧ್ರುವ ಖಾರ್ವಿಯನ್ನು ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿ ದಡಕ್ಕೆ ತರುವಲ್ಲಿ ಯಶಸ್ವಿ ಆಗಿದ್ದಾನೆ. ಬಾಲಕ ಶ್ರೀಕರನ ಕಾರ್ಯಕ್ಕೆ ಧ್ರವ ಪಾಲಕರು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.