ಪೇಪರ ಹಂಚಿದ ಹುಡುಗ 20 ಕೃತಿ ರಚಿಸಿದ ಸಾಹಿತಿ: ಡಾ.ವಿ.ಡಿ.ಐಹೊಳ್ಳಿ

KannadaprabhaNewsNetwork |  
Published : Apr 28, 2026, 02:45 AM IST
ಪೇಪರ ಹಂಚಿದ ಹುಡುಗ 20 ಕೃತಿ ರಚಿಸಿದ ಸಾಹಿತಿ: ಡಾ.ವಿ.ಡಿ.ಐಹೊಳ್ಳಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಘವೇಂದ್ರ ಕುಲಕರ್ಣಿ ಕನ್ನೂರಕರ ವಿರಚಿತ ಮುಂಜಾನೆ ಮಾತು ಕೃತಿಯಲ್ಲಿ ಹಲವು ಮೌಲ್ಯಯುತ ಉಪದೇಶದ ಮಾತುಗಳಿದ್ದು, ಪ್ರತಿಯೊಬ್ಬರೂ ಅವುಗಳನ್ನು ಓದಿ ವರ್ತನೆಯಲ್ಲಿ ಪರಿವರ್ತನೆಯಾಗಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಡಾ.ವಿ.ಡಿ.ಐಹೊಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಘವೇಂದ್ರ ಕುಲಕರ್ಣಿ ಕನ್ನೂರಕರ ವಿರಚಿತ ಮುಂಜಾನೆ ಮಾತು ಕೃತಿಯಲ್ಲಿ ಹಲವು ಮೌಲ್ಯಯುತ ಉಪದೇಶದ ಮಾತುಗಳಿದ್ದು, ಪ್ರತಿಯೊಬ್ಬರೂ ಅವುಗಳನ್ನು ಓದಿ ವರ್ತನೆಯಲ್ಲಿ ಪರಿವರ್ತನೆಯಾಗಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಡಾ.ವಿ.ಡಿ.ಐಹೊಳ್ಳಿ ಹೇಳಿದರು.

ನಗರದ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡ ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಲಕರ್ಣಿಯವರು ವಿದ್ಯಾರ್ಥಿ ದೆಶೆಯಲ್ಲಿಯೇ ಪೇಪರ ಹಂಚಿ ಆಗಿನ ವಿದ್ಯಾರ್ಥಿ ಇಂದು ಸಾಹಿತಿಯಾಗಿ ಸುಮಾರು 20 ಕೃತಿಗಳನ್ನು ರಚಿಸಿದ್ದಾರೆ. ಪೋಷಕರು, ಪಾಲಕರು ಮತ್ತು ಶಿಕ್ಷಕರು ಈ ಕೃತಿಗಳನ್ನು ಓದಿದಾಗ ಬದಲಾವಣೆ ಕಾಣಲು ಸಾಧ್ಯ ಎಂದರು.

ಹಿರಿಯ ಸಂಶೋಧಕ ಡಾ.ಕೃಷ್ಣ ಕೊಲ್ಹಾರಕುಲಕರ್ಣಿ ಮತ್ತು ಡಾ.ಎಂ.ಎಸ್.ಮದಭಾವಿ ಮುಂಜಾನೆ ಮಾತು ಹಾಗೂ ಆಧುನಿಕ ಶಾಕುಂತಲೆ ಎಂಬ ನೂತನ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತ್ನಾಳ ಭೂಮಿಪೂಜೆ
ಬಸವಾದಿ ಶರಣರ ಕಾಯಕ ತತ್ವ ಪಾಲಿಸಿ