ಕನ್ನಡಪ್ರಭ ವಾರ್ತೆ ವಿಜಯಪುರ ವಚನ ಸಾಹಿತ್ಯ ಇಂದಿಗೂ ಸರ್ವಕಾಲಿಕ. ಮಾನವೀಯ ಮೌಲ್ಯಗಳಿಂದ ಕೂಡಿದ ಬಸವಾದಿ ಶರಣರ ಕಾಯಕ ತತ್ವ ನಾವೆಲ್ಲರೂ ಪಾಲಿಸಬೇಕು. 12ನೇ ಶತಮಾನದ ಶಿವಶರಣೆಯರು ಮಾನವೀಯ ಜೀವನಕ್ಕೆ ಪ್ರಾಧ್ಯಾನತೆ ನೀಡಿದ್ದಾರೆಂದು ಮನಗೂಳಿ ಹಿರೇಮಠ ಸಂಸ್ಥಾನದ ಅಭಿನವ ಸಂಗನಬಸವ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ವಿಜಯಪುರ
ವಚನ ಸಾಹಿತ್ಯ ಇಂದಿಗೂ ಸರ್ವಕಾಲಿಕ. ಮಾನವೀಯ ಮೌಲ್ಯಗಳಿಂದ ಕೂಡಿದ ಬಸವಾದಿ ಶರಣರ ಕಾಯಕ ತತ್ವ ನಾವೆಲ್ಲರೂ ಪಾಲಿಸಬೇಕು. 12ನೇ ಶತಮಾನದ ಶಿವಶರಣೆಯರು ಮಾನವೀಯ ಜೀವನಕ್ಕೆ ಪ್ರಾಧ್ಯಾನತೆ ನೀಡಿದ್ದಾರೆಂದು ಮನಗೂಳಿ ಹಿರೇಮಠ ಸಂಸ್ಥಾನದ ಅಭಿನವ ಸಂಗನಬಸವ ಶಿವಾಚಾರ್ಯರು ಅಭಿಪ್ರಾಯಪಟ್ಟರು.ಜಿಲ್ಲಾ, ತಾಲೂಕು ಮತ್ತು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಆಶ್ರಯದಲ್ಲಿ ಲಿಂ.ಪ್ರಭಾವತಿ ಮಲ್ಲಪ್ಪ ಪಟ್ಟಣಶೆಟ್ಟಿ ದತ್ತಿ. ಲಿಂ.ಮುದಕಯ್ಯ ಮಠ ಹಾಗೂ ಶ್ರೀಮತಿ ಶಂಕ್ರಮ್ಮ ಮಠ ದತ್ತಿ. ಲಿಂ.ಈರವ್ವ ಮಲ್ಲಪ್ಪ ಹಣಮಶೆಟ್ಟಿ ದತ್ತಿ. ಕಾಶಿನಾಥ ಸಿದ್ದಮಲ್ಲಪ್ಪ ಇಂಗಳೇಶ್ವರ ದತ್ತಿ. ಹೀಗೆ ದತ್ತಿ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ವಚನಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ವಚನ ಸಾಹಿತ್ಯ ಮಾನವೀಯ ಮೌಲ್ಯಗಳ ಭಂಡಾರವಾಗಿದೆ ಎಂದರು.
ಉಪನ್ಯಾಸಕ ಯು.ಎನ್.ಕುಂಟೋಜಿ ಮಾತನಾಡಿ, ವಚನ ಸಾಹಿತ್ಯ ಕಾಯಕ. ದಾಸೋಹ. ಮತ್ತು ಸಮಾನತೆ ಎತ್ತಿ ಹಿಡಿಯುವ ಬಸವಾದಿ ಶರಣರ ತತ್ವ ಕಾರ್ಯ ಸ್ಮರಣೀಯ ಎಂದರು.
ಶಿಕ್ಷಕಿ, ಸಾಹಿತಿ ಶರಣಮ್ಮ ಹಾದಿಮನಿ ಮಾತನಾಡಿ, ವಚನ ಸಾಹಿತ್ಯ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು ಸಾಮಾಜಿಕ ಸಮಾನತೆ, ಕಾಯಕವೇ ಕೈಲಾಸ, ಲಿಂಗ ಸಮಾನತೆ ಮತ್ತು ಭಕ್ತಿ ಮಾರ್ಗವನ್ನು ತಿಳಿಸುವ ಮೂಲಕ ಸಮಾಜದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಯನ್ನು ಮಾಡಿವೆ. ಕಾಯಕ ತತ್ವವನ್ನು ಬೋಧಿಸಿ ದೈಹಿಕ ಶ್ರಮಕ್ಕೆ ಗೌರವ ನೀಡಿದರು ಎಂದರು.
ಕಾಯಕಯೋಗಿ ನುಲಿಯ ಚಂದಯ್ಯ ಕುರಿತು ಶಿಕ್ಷಕ ಯಮನಪ್ಪ ಪವಾರ ಉಪನ್ಯಾಸ ನೀಡಿ, ನುಲಿಯ ಚಂದಯ್ಯ ಅವರ 49ಕ್ಕೂ ಅಧಿಕ ವಚನಗಳು ದೊರಕಿವೆ. ಚಂದೇಶ್ವರಲಿಂಗ ಅಂಕಿತ ನಾಮದಿಂದ ಇವರ ವಚನಗಳು ದಾಸೋಹಕ್ಕೆ ಪ್ರಧಾನವಾಗಿ ಬರೆದ ಇವರ ವಚನಗಳು ಸಮಾಜಕ್ಕೆ ಬೆಳಕು ಚೆಲ್ಲಿವೆ ಎಂದರು.
ಶರಣ ಚಿಂತಕಿ ಸುಜಾತಾ ಈರಣ್ಣ ಪಟ್ಟಣಶೆಟ್ಟಿ. ಸಮಾಜ ಸೇವಕಿ ಶ್ರೀದೇವಿ ಉತ್ಲಾಸರ ಮಾತನಾಡಿ, ಬಸವಾದಿ ಶರಣರ ಕಾಯಕ ಸಿದ್ಧಾಂತ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಕಾಯಕಯೋಗಿ ನುಲಿಯ ಚಂದಯ್ಯ ಅವರ ದಾಸೋಹ ಪ್ರಜ್ಞೆಯನ್ನು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ನೂತನವಾಗಿ ಆಯ್ಕೆಯಾಗಿರುವ ದಲಿತ ಸಾಹಿತ್ಯ ಪರಿಷತ್ತಿನ ವಿಭಾಗಿಯ ಸಂಚಾಲಕ ಎಂ.ಬಿ.ಕಟ್ಟಿಮನಿ ಹಾಗೂ ಈಚೆಗೆ ಕಾಯಕಯೋಗಿ ಪ್ರಶಸ್ತಿ ಪಡೆದ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅವರನ್ನು ಕಸಾಪ ಪದಾಧಿಕಾರಿಗಳು ಹಾಗೂ ಸಾಹಿತಿಗಳು ಸನ್ಮಾನಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.