ಬ್ರಿಟಿಷರನ್ನು ನಡುಗಿಸಿದ ಧೀರ ರಾಯಣ್ಣ

KannadaprabhaNewsNetwork |  
Published : Sep 01, 2025, 01:04 AM IST
31ಕೆಕೆಆರ್1:  ಕುಕನೂರು ಪಟ್ಟಣದ ಹಾಲುಮತ  ಸಮಾಜದ ವತಿಯಿಂದ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ  ಜಯಂತಿಯ ಪ್ರಯುಕ್ತ ಪೂಜೆ ಹಾಗೂ ಭಾವಚಿತ್ರ ಮೆರವಣಿಗೆ ಜರುಗಿತು.  | Kannada Prabha

ಸಾರಾಂಶ

ಇತಿಹಾಸದಲ್ಲಿ ಹೋರಾಟ ತ್ಯಾಗ ಬಲಿದಾನವನ್ನು ಇಂದಿನ ಯುವಪೀಳಿಗೆ ತಿಳಿಯಬೇಕು

ಕುಕನೂರು: ಬ್ರಿಟಿಷರನ್ನು ನಡುಗಿಸಿದ ಧೀರ ವೀರ ಸಂಗೊಳ್ಳಿ ರಾಯಣ್ಣ, ದೇಶಕ್ಕೆ ಸ್ವಾತಂತ್ರ್ಯ ಪಡೆಯಬೇಕೆಂದು ಹೋರಾಟಕ್ಕೆ ಪ್ರಾಣವನ್ನು ಪಣಕ್ಕಿಟ್ಟಿದ್ದರು ಎಂದು ಕುಕನೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಈಶಪ್ಪ ಮಳಗಿ ಹೇಳಿದರು.

ಪಟ್ಟಣದ ಹಾಲುಮತ ಸಮಾಜ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದಲ್ಲಿ ಜರುಗಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಉದ್ದೇಶಿಸಿ ಮಾತನಾಡಿದ ಅವರು, ರಾಯಣ್ಣನ ವೃತ್ತಕ್ಕೆ ಪುಷ್ಪಾರ್ಚನೆ ಮಾಡಿ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇತಿಹಾಸದಲ್ಲಿ ಹೋರಾಟ ತ್ಯಾಗ ಬಲಿದಾನವನ್ನು ಇಂದಿನ ಯುವಪೀಳಿಗೆ ತಿಳಿಯಬೇಕು. ರೈತರ ಪರವಾಗಿ ಆಗಿನ ಕಾಲದಲ್ಲಿ ತೆರಿಗೆ ವಿರುದ್ಧ ದಂಗೆಯನ್ನು ರಾಯಣ್ಣ ಕೈಗೊಂಡರು.ಗೇರಿಲಾ ಯುದ್ಧದ ಮಾದರಿಯಲ್ಲಿ ದಂಗೆ ಮಾಡಿ ಬ್ರಿಟಿಷರ ನಿದ್ದೆಗೇಡಿಸಿದರು ಎಂದರು.

ಗಾವರಾಳ ಗ್ರಾಪಂ ಸದಸ್ಯ ಮಹೇಶ ಲಕಮಾಪೂರ ಮಾತನಾಡಿ, ರಾಯಣ್ಣ ಅವರ ವೀರ ಪರಾಕ್ರಮ ಹೋರಾಟದ ಮನೋಭಾವನೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಅವರ ದೇಶಪ್ರೇಮ ಎಲ್ಲರಿಗೂ ಮಾದರಿ. ದಿಟ್ಟ ಹೋರಾಟದ ಮೂಲಕ ಬ್ರಿಟಿಷರನ್ನು ಸದೆ ಬಡಿದ ಮಹಾನ್ ಸೇನಾನಿ ಎಂದರು.

ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಮೆರವಣಿಗೆಯು ರಾಯಣ್ಣನ ವೃತ್ತದಿಂದ ಅಂಬೇಡ್ಕರ್ ವೃತ್ತ ಹಾಗೂ ನಗರದ ಪ್ರಮುಖ ರಾಜಬೀದಿಗಳಲ್ಲಿ ಮಹಿಳೆಯರ ಕುಂಭ, ಕಳಸದೊಂದಿಗೆ ವೈಭವದಿಂದ ಸಾಗಿತು.

ಹಾಲುಮತ ಸಮಾಜದ ಗುರು ವಿರುಪಾಕ್ಷಯ್ಯ ಗುರುವಿನಮಠ, ಮಂಜುನಾಥಯ್ಯ ಗುರುವಿನಮಠ, ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಕಡೇಮನಿ, ಶೇಖಪ್ಪ ಕಂಬಳಿ, ಶರಣಪ್ಪ ಕೊಪ್ಪದ, ಮಲ್ಲಪ್ಪ ಚಳಮರದ, ದೇವಪ್ಪ ಸೋಬಾನದ್, ಶ್ರೀನಿವಾಸ್ ನಿಂಗಾಪೂರ, ವೀರಪ್ಪ ಚಾಕ್ರಿ, ಸಂಗಪ್ಪ ಕಿಂದ್ರಿ, ಸಂಗಪ್ಪ ಕೊಪ್ಪದ್, ಬಸವರಾಜ ಅಡವಿ, ಮಹೇಶ ಕವಲೂರು, ಮುತ್ತಣ್ಣ ಕವಲೂರು, ರೇವಣಪ್ಪ ಹಟ್ಟಿ ರೇವಣಪ್ಪ ಹಿರೇಕುರುಬರ್, ರಾಮಣ್ಣ ಕಂಬಳಿ, ಯಲ್ಲಪ್ಪ ಕಲಾಲ್, ಮಂಜುನಾಥ ಯಡಿಯಾಪೂರ ಇತರರಿದ್ದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ