ಮಹಾರ ಸೈನಿಕರ ಧೈರ್ಯ ಸಾಹಸ ನಮಗೆ ಶಕ್ತಿ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಕೋರೆಗಾಂವನಲ್ಲಿ ಮಹರ್ ಸೈನಿಕರು ಹೋರಾಡಿರುವುದು ಒಂದು ಸಾಮ್ರಾಜದ ವಿರುದ್ಧವಲ್ಲ, ಅಲ್ಲಿರುವ ವ್ಯವಸ್ಥೆಯ ವಿರುದ್ದವಾಗಿದೆ. ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಅಂತಹ ದೌರ್ಜನ್ಯಕೋರರ ಸಂಸ್ಕೃತಿಯ ವಿರುದ್ಧ ಎಂಬುದು ಈ ಕೊರೆಗಾಂವ ಯುದ್ದ ನಮಗೆಲ್ಲ ಸ್ಪೂರ್ತಿಯ ಸಂಕೇತ

ಕೊಪ್ಪಳ: ಪೇಶ್ವೆ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ನಿಂತು ಮಾನವಿಯ ಮೌಲ್ಯ ಪಡೆದುಕೊಳ್ಳಲು ಹಂಬಲಿಸಿದ ಸೈನಿಕರ ಧೈರ್ಯ ಸಾಹಸವೆ ನಮಗೆ ಶಕ್ತಿಯಾಗಿದೆ ಎಂದು ದಲಿತಮುಖಂಡ ಎಂ. ವಿರುಪಾಕ್ಷಿ ಹೇಳಿದರು.

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಬುದ್ಧ ವಿಹಾರದಲ್ಲಿ ಮಾನವ ಬಂಧುತ್ವ ವೇದಿಕೆ ದಲಿತ ಪರ ಮತ್ತು ಪ್ರಗತಿಪರ, ಸಮಾನ ಮನಸ್ಕರ ಸಂಘಟನೆಗಳು ಹಮ್ಮಿಕೊಂಡ ಭೀಮಾ ಕೋರೆಗಾಂವ್ ವಿಜಯೋತ್ಸವದ ಸ್ವಾಭಿಮಾನಿ ಸಂಭ್ರಮ 2024 ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋರೆಗಾಂವ್ ಯುದ್ದ ಇತಿಹಾಸದಲ್ಲಿ ಉಳಿದ ಸಾಹಸದ ಘಟನೆಯಾಗಿದೆ. ಮೂವತ್ತು ಸಾವಿರ ಸೈನಿಕರನ್ನು ಕೇವಲ ಐದುನೂರು ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನವಾಗಿದ್ದು, ಕೆಚ್ಚೆದೆಯ ಹೋರಾಟ ಶೋಷಿತರು ಮೇಲ ಜಾತಿಯ ವಿರುದ್ಧ ಯುದ್ದ ಘೋಷಿಸಿ ಯುದ್ದದಲ್ಲಿ ಗೆಲ್ಲಿಸಿದ ಭೀಮಾ ತೀರದಲ್ಲಿ ನಡೆದಿರುವ ಭೀಮಾ ಕೋರೆಗಾಂವ್ ಯುದ್ದ ಸೈನಿಕರ ಧೈರ್ಯ ಸಾಹಸ ನಮಗೆ ಶಕ್ತಿ ತುಂಬಿದೆ ಎಂದರು.

ಮಹಿಳಾ ಹೋರಾಟಗಾರ್ತಿ ಸಾವಿತ್ರಿ ಮುಜುಮದಾರ ಮಾತನಾಡಿ, ಕೋರೆಗಾಂವನಲ್ಲಿ ಮಹರ್ ಸೈನಿಕರು ಹೋರಾಡಿರುವುದು ಒಂದು ಸಾಮ್ರಾಜದ ವಿರುದ್ಧವಲ್ಲ, ಅಲ್ಲಿರುವ ವ್ಯವಸ್ಥೆಯ ವಿರುದ್ದವಾಗಿದೆ. ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಅಂತಹ ದೌರ್ಜನ್ಯಕೋರರ ಸಂಸ್ಕೃತಿಯ ವಿರುದ್ಧ ಎಂಬುದು ಈ ಕೊರೆಗಾಂವ ಯುದ್ದ ನಮಗೆಲ್ಲ ಸ್ಪೂರ್ತಿಯ ಸಂಕೇತವೂ ಎಂದು ಹೇಳಿದರು.

ಹಿರಿಯ ಸಾಹಿತಿ ಅಲ್ಲಮ ಪ್ರಭು ಬೆಟದೂರು ಮಾತನಾಡಿ, ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದು ಹೇಳಿದ ಬಾಬಾ ಸಾಹೇಬ್ ಅಂಬೇಡ್ಕರರಿಗೆ ತನ್ನ ಜನರು ಇಂತಹ ಅದ್ಬುತ ಐತಿಹಾಸಿಕ ಜಯದ ಬಗ್ಗೆ ಬಹಳಷ್ಟು ಹೆಮ್ಮೆ ಇತ್ತು ಎಂದರು.

ಕಾರ್ಯಕ್ರಮದಲ್ಲಿ ಸಿ. ದಾನಪ್ಪ, ಎಂ.ಆರ್.ಬೇರಿ. ಡಿ.ಎಚ್.ಪೂಜಾರ, ಅಲ್ಲಮಪ್ರಭು ಸಿಂಧನೂರು. ಎಚ್.ಎನ್. ಬಡಿಗೇರ. ಟಿ.ರತ್ನಾಕರ್, ಶುಕ್ರರಾಜ್ ತಾಳಕೇರಿ, ಸುಕನ್ಯಾ ನಾಯಕ, ಗುರುಪಾದಮ್ಮ ಭಂಡಾರಿ, ಭೀಮಪ್ಪ ಹವಳಿ, ರಾಮಣ್ಣ ಬೇರಗಿ, ಬಾಸ್ಕರ, ಮಂಜು ಮಡ್ಡಿ, ಹನುಮಂತ, ಮಾರುತಿ ನಾಯ್ಕ ಶರಣಪ್ಪ ಇನ್ನಿತರರು ಇದ್ದರು.

Share this article