ನಮ್ಮೆಲ್ಲರ ಉಸಿರು ಗಿಡ ಮರದಲ್ಲಿದೆ

KannadaprabhaNewsNetwork |  
Published : Jul 21, 2025, 12:00 AM IST
20ಎಚ್ಎಸ್ಎನ್9 :  | Kannada Prabha

ಸಾರಾಂಶ

ಪರಿಸರ ಸಕಲ ಜೀವಿಗಳ ಬದುಕಿಗೂ ಆಸರೆಯಾಗಿದೆ. ನಮ್ಮೆಲ್ಲರ ಉಸಿರು ಗಿಡಮರಗಳಲ್ಲಿ ತುಂಬಿದೆ. ಈ ಉಸಿರನ್ನು ನಾವೆಲ್ಲರೂ ಜೋಪಾನವಾಗಿ ಕಾಪಾಡಿಕೊಳ್ಳಬೇಕೆಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಸುಚಿತ್ ಕುಮಾರ್ ತಿಳಿಸಿದರು. ನಮ್ಮ ಪೂರ್ವಿಕರು ಭೂಮಿಯನ್ನು ಬಹಳ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು. ಶುದ್ಧವಾದ ಪ್ರಕೃತಿಯ ನಡುವೆ ಅವರ ಬದುಕು ಸಾಗಿತ್ತು. ಆನಂದವಾಗಿ ನೂರಾರು ವರ್ಷಗಳ ಕಾಲ ನಿಸರ್ಗದೊಂದಿಗೆ ಸಹಬಾಳ್ವೆಯಾಗಿ ಬದುಕು ನಡೆಸಿದ್ದರು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಪರಿಸರ ಸಕಲ ಜೀವಿಗಳ ಬದುಕಿಗೂ ಆಸರೆಯಾಗಿದೆ. ನಮ್ಮೆಲ್ಲರ ಉಸಿರು ಗಿಡಮರಗಳಲ್ಲಿ ತುಂಬಿದೆ. ಈ ಉಸಿರನ್ನು ನಾವೆಲ್ಲರೂ ಜೋಪಾನವಾಗಿ ಕಾಪಾಡಿಕೊಳ್ಳಬೇಕೆಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಸುಚಿತ್ ಕುಮಾರ್ ತಿಳಿಸಿದರು.

ಕೆನರಾ ಬ್ಯಾಂಕ್ ಪ್ರಾರಂಭಗೊಂಡು ೧೨೦ ವರ್ಷ ಸಂಭ್ರಮಾಚರಣೆಯ ನಿಮಿತ್ತ ನಗರದ ಕೆಐಎಡಿಬಿ ವೃತ್ತದ ಬಳಿ ಇರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಇವರುಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಮಾತನಾಡಿ, ಇಂದು ಅವಶ್ಯಕವಾಗಿ ಪರಿಸರದ ಉಳಿವಿನಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅನಿವಾರ್ಯವಾಗಿದೆ.

ಇಂದು ನಾವು ಕೂಡ ಪರಿಸರಕ್ಕೆ ಪೂರಕವಾಗಿ ಸರಳ ಬದುಕಿಗೆ ಸಾಗಬೇಕೆಂದು ಎಲ್ಲರಲ್ಲೂ ವಿನಂತಿಸಿಕೊಂಡರು. ಮಂಗಳೂರಿನಲ್ಲಿ೧೯೦೬ ಜುಲೈ ೧ರಂದು ಅಮ್ಮೆಂ ಬಾಳ್ ಸುಬ್ಬರಾವ್ ಪೈ ಅವರಿಂದ ಪ್ರಾರಂಭಗೊಂಡ ಕೆನರಾ ಬ್ಯಾಂಕ್ ಇಂದು ೧೨ ಕೋಟಿ ಗ್ರಾಹಕರನ್ನು ಹೊಂದುವ ಮೂಲಕ ಜಾಗತಿಕವಾಗಿ ೨೫ ಲಕ್ಷ ಕೋಟಿ ವಹಿವಾಟು ಮಾಡುತ್ತಿದೆ. ಭಾರತದಲ್ಲಿ ೪೧ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಗಳನ್ನು ತೆರೆಯುವ ಮೂಲಕ ಲಕ್ಷಾಂತರ ಯುವಜನರಿಗೆ ನೂರಾರು ರೀತಿಯ ಕೌಶಲ್ಯಯುಕ್ತ ತರಬೇತಿಗಳನ್ನು ನೀಡಿ ಸ್ವಾವಲಂಬಿ ಬದುಕನ್ನು ರೂಪಿಸಲು ನೆರವಾಗಿದೆ ಎಂದು ಹೇಳಿದರು.

ಗಿಡ ನೆಡುವ ಕಾರ್ಯಕ್ರಮದಲ್ಲಿ ಪರಿಸರಕ್ಕಾಗಿ ನಾವು ಸಂಘಟನೆಯ ಜಿಲ್ಲಾಧ್ಯಕ್ಷರಾದ ಪ್ರೊಫೆಸರ್ ಯೋಗೇಂದ್ರ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಹರಿಪ್ರಸಾದ್, ಪವನ್ ಕುಮಾರ್, ರಂಜಿತ್, ಸತ್ಯ ಹಾಗೂ ಏಕಲವ್ಯ ರೋವರ್ ಮುಕ್ತ ದಳದ ನಾಯಕ ಆರ್‌. ಜಿ. ಗಿರೀಶ್, ರೋವರ್ ಸ್ಕೌಟ್ಸ್ ಲೀಡರ್ ಕುಮಾರಸ್ವಾಮಿ ಮತ್ತು ಶಿಬಿರಾರ್ಥಿಗಳು ಪಾಲ್ಗೊಂಡು ೧೨೦ ವಿವಿಧ ಜಾತಿಯ ಗಿಡಗಳನ್ನು ನೆಟ್ಟರು.

PREV

Latest Stories

ಜಿಲ್ಲೆಯಲ್ಲಿ ಬೇಡಿಕೆಗಿಂತ ಹೆಚ್ಚು ಯೂರಿಯಾ ಪೂರೈಕೆ
ಕನ್ನಿಕಾ ಮಹಲ್‌ನಲ್ಲಿ ನಾಣ್ಯ, ನೋಟುಗಳ ಅಪೂರ್ವ ಪ್ರದರ್ಶನ
ಜಿ.ಎಸ್‌.ಟಿ ವಿರೋಧಿಸಿ ಪ್ರತಿಭಟನೆ