ಲೀಡ್‌

KannadaprabhaNewsNetwork |  
Published : Nov 09, 2026, 01:45 AM IST
ಹಂತಕರು | Kannada Prabha

ಸಾರಾಂಶ

ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್‌ನ ಸೋದರ ಸಹ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಡಬಲ್‌ ಮರ್ಡರ್‌ ಪ್ರಕರಣದಲ್ಲಿ ಜೈಲು ಸೇರಿ ಅಲ್ಲಿಯೇ ಮೃತಪಟ್ಟಿರುವ ವಿಷಯ ಪೊಲೀಸರ ತನಿಖೆಯ ವೇಳೆ ಬಯಲಾಗಿದೆ.

ರುಬ್ಬುಗುಂಡು ಹಂತಕನ ಅಣ್ಣನೂ ಡೆಡ್ಲಿ ಕಿಲ್ಲರ್‌!

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್‌ನ ಸೋದರ ಸಹ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಡಬಲ್‌ ಮರ್ಡರ್‌ ಪ್ರಕರಣದಲ್ಲಿ ಜೈಲು ಸೇರಿ ಅಲ್ಲಿಯೇ ಮೃತಪಟ್ಟಿರುವ ವಿಷಯ ಪೊಲೀಸರ ತನಿಖೆಯ ವೇಳೆ ಬಯಲಾಗಿದೆ.

ಆರೋಪಿ ಇಂದುಶೇಖರ್​​ ನಟೋರಿಯಸ್ ರೌಡಿಶೀಟರ್ ಆಗಿದ್ದ ಬೆಳತೂರು ರಮೇಶ್​​ನ ಸಹೋದರ ಎಂದು ತಿಳಿದು ಬಂದಿದೆ. 8 ವರ್ಷಗಳ ಹಿಂದೆ ಆವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆಸ್ತಿಗಾಗಿ‌ ರಮೇಶ್​​ ಡಬಲ್​​ ಮರ್ಡರ್​​ ಮಾಡಿದ್ದನು. 15 ಕೋಟಿ ರು.ಮೌಲ್ಯದ ಸುಮಾರು 1.8 ಎಕರೆ ಜಾಗಕ್ಕಾಗಿ ರಮೇಶ್‌ ಇಬ್ಬರನ್ನು ಸಿನಿಮೀಯ ಶೈಲಿಯಲ್ಲಿ ಹತ್ಯೆ ಮಾಡಿದ್ದ. ಬೆಂಗಳೂರಿನ ಬೆಳತೂರು ಸಮೀಪ ಜಾಗ ಹೊಂದಿದ್ದ ನಂಜಪ್ಪ ಎಂಬುವರು ವಯೋಸಹಜವಾಗಿ ಮೃತಪಟ್ಟಿದ್ದರು. ಅವರ ಮರಣದ ನಂತರ ಅನಾಥವಾಗಿದ್ದ ಕೋಟ್ಯಂತರ ರು. ಮೌಲ್ಯದ ಜಾಗದ ಮೇಲೆ ರಮೇಶ್ ಕಣ್ಣುಹಾಕಿದ್ದ. ಇದಕ್ಕಾಗಿ ವೆಂಕಟರಮಣ ಎಂಬುವನನ್ನು ಕರೆತಂದು ನಂಜಪ್ಪ ಎಂದು ಬಿಂಬಿಸಿದ್ದ. ಆತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಿಲ್ ಬರೆಸಿಕೊಂಡಿದ್ದ. ನಂತರ ಕೃಷ್ಣಪ್ಪ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಕರೆತಂದಿದ್ದ. ಆತನನ್ನು ಕೂಡ ನಂಜಪ್ಪನನ್ನಾಗಿ ಬಿಂಬಿಸಿದ್ದ ಆತನಿಗೆ ಭೇದಿ ಮಾತ್ರೆ ನೀಡಿ ಬಳಿಕ ಕೊಲೆ ಮಾಡಿದ್ದ. ಕೃಷ್ಣಪ್ಪ ಸತ್ತ ನಂತರ ನಂಜಪ್ಪ ಹೆಸರಿನಲ್ಲಿ ನಕಲಿ ಮರಣ ಪ್ರಮಾಣ ಪತ್ರ ಮಾಡಿಸಿದ್ದ ಎನ್ನಲಾಗಿದೆ.

ಜೈಲಲ್ಲೇ ಮೃತಪಟ್ಟಿದ್ದ ರಮೇಶ್‌:

ಕೊಲೆ ಮಾಡಿದ ಸಂದರ್ಭದಲ್ಲಿ ರಮೇಶ್ ಜತೆಗಿದ್ದ ಆತನ ತೋಟದ ಸೆಕ್ಯುರಿಟಿ ವೆಂಕಟಸ್ವಾಮಿ ಈ ವಿಚಾರವನ್ನು ತನ್ನ ಪತ್ನಿ ಸುಧಾರಾಣಿಗೆ ಹೇಳಿದ್ದ. ಆ ಕೊಲೆಯನ್ನು ಸುಧಾರಾಣಿ ವಿರೋಧಿಸಿದ್ದ ಕಾರಣ ಆಕೆಗೆ ಬೆಂಕಿಹಚ್ಚಿ ಮನೆಯಲ್ಲೇ ಕೊಲೆ ಮಾಡಲಾಗಿತ್ತು. ಬಳಿಕ ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಆದರೆ ತನಿಖೆಯಲ್ಲಿ ಸುಧಾರಾಣಿ ಅವರದ್ದು ಕೊಲೆ ಎಂದು ಪತ್ತೆಯಾಗಿತ್ತು. ನಂತರ ಬೆಳತೂರು ರಮೇಶ್ ಮತ್ತು ವೆಂಕಟಸ್ವಾಮಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. 3 ವರ್ಷ ಜೈಲಲ್ಲಿದ್ದ ರಮೇಶ್ 2021ರಲ್ಲಿ ಜೈಲಿನಲ್ಲೇ ಸಾವಿಗೀಡಾಗಿದ್ದ‌. ವರ್ತೂರು ಭಾಗದಲ್ಲಿ ಭೂ ಮಾಫಿಯಾವನ್ನು ಕೂಡ ರಮೇಶ್ ನಡೆಸಿದ್ದ. ನಕಲಿ ದಾಖಲೆ ಸೃಷ್ಟಿ, ಧಮ್ಕಿ ಸೇರಿ ಹಲವು ಪ್ರಕರಣದಲ್ಲಿ ಈತನ ಹೆಸರು ಕೇಳಿಬಂದಿತ್ತು. ಈ ಹಿನ್ನಲೆ ರಮೇಶ್​​ ವಿರುದ್ಧ ರೌಡಿಶೀಟರ್‌ ಕೂಡ ಓಪನ್​​ ಆಗಿತ್ತು. ಈಗ ಸಹೋದರನಂತೆಯೇ ಇಂದುಶೇಖರ್​​ ಕೂಡ ಅಂತಹುದ್ದೇ ಕೃತ್ಯ ಎಸಗಿದ್ದಾನೆ. ಕೊಲೆ ಮಾಡುವುದರಲ್ಲಿ ಅಣ್ಣನನ್ನೇ ಮೀರಿಸಿದ್ದಾನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ