ಕನ್ನಡಪ್ರಭ ವಾರ್ತೆ ಗದಗ
ಒಂದೂವರೆ ಶತಮಾನದ ಇತಿಹಾಸ ಹೊಂದಿರುವ ಶ್ರೀಅಡವೀಂದ್ರಸ್ವಾಮಿಗಳ ಮಠದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಹಾಗೂ ಪ್ರಾಶಸ್ತ್ಯವನ್ನು ಪೂರ್ವಜರಾದ ಲಿಂಗೈಕ್ಯ ಶ್ರೀಶರಣಯ್ಯ ಸ್ವಾಮಿಗಳು ಹೊಸಳ್ಳಿಮಠ ಅವರ ಆಶೀರ್ವಾದದೊಂದಿಗೆ, ಶಮಿ, ಆರಿ, ಬಿಲ್ವ, ವೃಕ್ಷಗಳ ಸಂಗಮವಾದ ಶ್ರೀಮಠದಲ್ಲಿ ಅನೂಚಾನವಾಗಿ ಮುನ್ನಡೆಸುತ್ತಾ ಬರಲಾಗಿದೆ. ಶ್ರೀಮಠದ ಲಿಂ.ಶರಣಯ್ಯ ಸ್ವಾಮಿಗಳವರು ಮಹಿಳೆಯರಿಂದಲೇ ಅನ್ನಪೂರ್ಣೇಶ್ವರಿ ರಥವನ್ನು ಎಳೆಸಬೇಕು ಎಂಬ ಸಂಕಲ್ಪ ಮಾಡಿದ್ದರು. ಅವರ ಸಂಕಲ್ಪವನ್ನು ಸದ್ಯ ಶ್ರೀಮಠದ ಧರ್ಮಾಧಿಕಾರಿ ಮಹೇಶ್ವ ಸ್ವಾಮಿಗಳು ಸಾಕಾರಗೊಳಿಸಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಈ ವೇಳೆ ಶ್ರೀಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವಯ್ಯ ಮದರಿಮಠ, ಸಮಿತಿ ಅಧ್ಯಕ್ಷ ಸಂತೋಷ ಕಬಾಡರ, ಮಹಿಳಾ ಅಧ್ಯಕ್ಷೆ ಶಿವಲೀಲಾ ಅಕ್ಕಿ, ಅನ್ನಪೂರ್ಣೇಶ್ವರಿ ಕಬಾಡರ, ಅಶ್ವಿನಿ ನೀಲಗುಂದ, ಅಮೃತಾ ವಾರಕರ, ವೇದಾ ಬಿದರೂರ, ಡಾ. ರಾಜೇಂದ್ರ ಗಡಾದ, ಚಂದ್ರು ಬಾಳಿಹಳ್ಳಿಮಠ, ಪ್ರಕಾಶ ಅಕ್ಕಿ, ವಿನಾಯಕ ಪಾಟೀಲ, ಶಿವಪ್ರಭು ನೀಲಗುಂದ, ಬಸವರಾಜ ಬ್ಯಾಹಟ್ಟಿ, ಪ್ರಭುಗೌಡ ಪಾಟೀಲ, ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಶಾಂತಕ್ಕ ಹಿರೇವಡೆಯರ, ಶಿವಲೀಲಾ ಕುರಡಗಿ, ಸುಶಿಲಾ ಕೋಟಿ, ಗೌರಾದೇವಿ ಶಾಬಾದಿಮಠ, ಜಯಶ್ರೀ ಉಗಲಾಟದ, ಲೀಲಾವತಿ ಬಳಿಗಾರ, ವೀಣಾ ಕಾವೇರಿ ಸೇರಿ ಜಾತ್ರಾ ಸಮಿತಿ ಪದಾಧಿಕಾರಿಗಳು, ಸದ್ಭಕ್ತರು ಇದ್ದರು.