ಖಾತೆ ಹಂಚಿಕೆಗೂ ಮುಖ್ಯಮಂತ್ರಿಗೆ ಅಧಿಕಾರವಿಲ್ಲ

KannadaprabhaNewsNetwork |  
Published : Aug 10, 2026, 01:15 AM IST
 ಸಿಕೆಬಿ-6  ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಬಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಮುಖಂಡರುಗಳ ಸಭೆಯಲ್ಲಿ  ಬಿ.ವೈ.ವಿಜಯೇಂದ್ರ ಮಾತನಾಡಿದರು | Kannada Prabha

ಸಾರಾಂಶ

ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಮುಂತಾದ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ನಿರ್ಧಾರಗಳನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಭಾವನೆ ಮೂಡಿದೆ.

ಕಾಂಗ್ರೆಸ್ ಆಡಳಿತ ಹೈ ಕಮಾಂಡ್ ಕಂಟ್ರೋಲಲ್ಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ಎರಡು ತಿಂಗಳಿಂದ ಬರ ಅಧ್ಯಯನ ಮಾಡಿ ಪರಿಹಾರ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಬದಲು ದೆಹಲಿಯಲ್ಲಿ ರಾಹುಲ್ ಗಾಂಧಿ ಮುಂದೆ ಸಚಿವಗಿರಿಗೆ ಕೈಕಟ್ಟಿ ನಿಂತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ತಲೆ ಕೆಡಿಸಿಕೊಂಡಿಲ್ಲ. ರಾಜ್ಯದ ಇಡೀ ಆಡಳಿತ ಚುಕ್ಕಾಣಿ ದೆಹಲಿ ನಾಯಕರ ಕೈಯಲ್ಲಿದೆ. ಅಂತೂ ಇಂತೂ ಸಚಿವಗಿರಿ ಗಿಟ್ಟಿಸಿಕೊಂಡ ಮಂತ್ರಿಗಳಿಗೆ ಯಾವ ಖಾತೆ ಹಂಚಬೇಕು ಅನ್ನೋದು ಸಹ ಸಿಎಂಗೆ ಅಧಿಕಾರವಿಲ್ಲದಂತೆ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು..

ಜಿಲ್ಲೆಯಲ್ಲಿ ಬರ ವಿಕ್ಷಣೆ ಹಾಗೂ ಆಗ್ನೇಯ ಪದವೀದರ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಆಗಮಿಸಿ, ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಬಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಮುಖಂಡರ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಮುಂತಾದ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ನಿರ್ಧಾರಗಳನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಭಾವನೆ ಮೂಡಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಬಿಂಬಿತವಾಗಿದೆ ಎಂದರು.

ಇದಲ್ಲದೆ, ತೀವ್ರ ಬರಗಾಲದ ಪರಿಸ್ಥಿತಿಯ ನಡುವೆಯೂ ಸರ್ಕಾರವು ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಮತ್ತು ರಿಯಲ್ ಎಸ್ಟೇಟ್ ಹಿತಾಸಕ್ತಿಗಳ ಮೇಲೆ ಹೆಚ್ಚು ಗಮನ ಹರಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಲು ವಿಫಲವಾಗಿರುವುದು ಮತ್ತು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ನಡೆಸಿರುವ ಯತ್ನಗಳು, ಕೃಷಿ ಕ್ಷೇತ್ರದ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ ಎಂಬ ಜನಪರ ಗ್ರಹಿಕೆಯನ್ನು ಮತ್ತಷ್ಟು ತೀವ್ರಗೊಳಿಸಿವೆ ಎಂದರು.

ರಾಜ್ಯ ಸರ್ಕಾರ ಇದ್ದು ಇಲ್ಲದಂತಾಗಿದೆ. ರಾಜ್ಯದಲ್ಲಿ ಮಳೆ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಕಾಂಗ್ರೆಸ್ ಎಂಎಲ್‌ಎ ಗಳು ಸಚಿವಗಿರಿಗಾಗಿ ದೆಹಲಿ ನಾಯಕರ ಮನೆ ಮುಂದೆ ಲಾಬಿಗೆ ಮುಂದಾಗಿದ್ದರು. ಅಂತೂ ಇಂತೂ ಸಚಿವಗಿರಿ ಹೊಂದಿಸಿಕೊಂಡ ಬಂದ ಮೇಲೆ ಅಸಮಾದಾನ ಹೆಚ್ಚಾಗಿ ಕೆಲವು ಕ್ಷೇತ್ರಗಳಲ್ಲಿ ತಮ್ಮ ಸರ್ಕಾರ ಮತ್ತು ಸಿಎಂ ವಿರುದ್ಧವೇ ಬಂದ್ ಮಾಡಿ ಟೈರುಗಳು ಸುಟ್ಟು ಆಕ್ರೋಶ ಹೊರಗಾಕಿದ್ದರು. ಕೆಲವರು ಸಿಎಂ ಡಿಕೆಶಿ ವಿರುದ್ಧ ಸಿಟ್ಟಾಗಿದ್ದರೆ ಮತ್ತೆ ಕೆಲವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೋಪಗೊಂಡಿದ್ದರು. ಇದು ರಾಜ್ಯದ ಪರಿಸ್ಥಿಯಾಗಿದೆ. ಇವರ ಆಟ ನೋಡಿ ಬೇಸತ್ತ ರಾಜ್ಯದ ಜನ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸೋಕೆ ಸಿದ್ಧವಾಗಿದ್ದಾರೆ ಎಂದು ಭವಿಷ್ಯ ನುಡಿದರು.

ಈ ವೇಳೆ ಜಿಲ್ಲಾಧ್ಯಕ್ಣ ಸೀಕಲ್ ರಾಮಚಂದ್ರಗೌಡ, ಮಾಜಿ ಅಧ್ಯಕ್ಷ ರಾಮಲಿಂಗಪ್ಪ, ಮುರುಳಿಮೋಹನ್, ಅಶೋಕ್ , ಕಂಬದಹಳ್ಳಿ ಸುರೇಂದ್ರಗೌಡ ಮತ್ತಿತರರು ಇದ್ದರು.

ಸಿಕೆಬಿ-6 ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಮುಖಂಡರ ಸಭೆಯಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಾಪ್‌ ರೈಟ್‌.....ಸಾವಳೇಶ್ವರ ವಿದ್ಯಾರ್ಥಿಗಳು ತಾಲೂಕುಮಟ್ಟಕ್ಕೆ ಆಯ್ಕೆ
12ರಂದು ಶಿರಾ ತಾಲೂಕಿನಲ್ಲಿ ಬೈಕ್‌ ರ್ಯಾಲಿ