ಕನ್ನಡಪ್ರಭ ವಾರ್ತೆ ಕುಷ್ಟಗಿ
ಅಮವಾಸ್ಯೆಯಂದು ಮನೆಯಲ್ಲಿ ಗೃಹಿಣಿಯರು ಮಹಾಲಕ್ಷ್ಮೀ ಮೂರ್ತಿ ಇರಿಸಿ ಪೂಜಿಸಿ ಮನೆಯ ಮುಂದೆ ದೀಪ ಹಚ್ಚುವ ಮೂಲಕ ಹಾಗೂ ಪಟಾಕಿಗಳನ್ನು ಸಿಡಿಸಿ ಸಡಗರದಿಂದ ಹಬ್ಬ ಆಚರಣೆ ಮಾಡಿದರು.
ಮರುದಿನ ಬಲಿಪಾಡ್ಯಮಿಯ ದಿನದಂದು ಅಂಗಡಿಕಾರರು ತೆಂಗಿನ ಗರಿ, ಬಾಳೆಕಂಬ, ಅಡಕೆ ಹೂವು, ಚೆಂಡು ಹೂವು ಸೇರಿದಂತೆ ವಿವಿಧ ತರಹ ಅಲಂಕಾರಿಕ ಸಾಮಗ್ರಿಯೊಂದಿಗೆ ಅಂಗಡಿ ಶೃಂಗರಿಸಿ ಮಹಾಲಕ್ಷ್ಮೀ ಪೂಜೆ ನೆರವೇರಿಸಿದರು. ಹಳೆ ಲೆಕ್ಕಗಳನ್ನು ಮುಗಿಸಿ ಹೊಸ ಲೆಕ್ಕಕ್ಕೆ ನಾಂದಿ ಹಾಡಲಾಯಿತು. ಹಳೇ ಪುಸ್ತಕ ತೆಗೆದು ಹೊಸ ಪುಸ್ತಕ ಇಡಲಾಯಿತು. ಸ್ಟುಡಿಯೋಗಳಲ್ಲಿ ಕ್ಯಾಮೆರಾಗಳಿಗೆ ಪುಸ್ತಕದ ಅಂಗಡಿಯಲ್ಲಿ ಪೆನ್ನು, ಪುಸ್ತಕಗಳನ್ನು ಹೀಗೆ ಆಯಾ ಅಂಗಡಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಂಡು ಪೂಜೆ ಸಲ್ಲಿಸುವ ಮೂಲಕ ದೀಪಾವಳಿಯ ಹಬ್ಬ ಆಚರಣೆ ಮಾಡಿದರು. ಪಟಾಕಿ ಸಿಡಿಸಿ ಚಿಣ್ಣರು ಸಂಭ್ರಮಿಸಿದರು.ವಾಹನಗಳಿಗೆ ಪೂಜೆ:ರೈತಾಪಿ ಜನರು ತಮ್ಮ ವಾಹನಗಳಾದ ಎತ್ತು ಬಂಡಿ ಸೇರಿದಂತೆ ಅನೇಕ ದನಕರುಗಳನ್ನು ಪೂಜಿಸಿದರೆ ಕೆಲವರು ತಮ್ಮ ವಾಹನಗಳಾದ ಬೈಕು, ಕಾರು ಜೀಪು ಸೇರಿದಂತೆ ವಿವಿಧ ವಾಹನಗಳನ್ನು ಸಮೀಪದ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿದರು.ಪಾಂಡವರ ಪೂಜೆ: