ಕನ್ನಡಪ್ರಭ ವಾರ್ತೆ ಹೊಸಕೋಟೆ
ನಗರದ ಅಭಿಷೇಕ ಪ್ರಾರ್ಥನಾ ಮಂದಿರದಲ್ಲಿ ನಡೆದ ಹೊಸಕೋಟೆ ಸಭಾಪಾಲಕರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಭಾರತದಲ್ಲಿ ಸ್ವಾತಂತ್ರ್ಯ ಬಂದ ನಂತರ ಸುಮಾರು 45 ಕೋಟಿ ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ, ಅನಾಥಾಶ್ರಮ, ವೃದ್ಧಾಶ್ರಮದ ಮೂಲಕ ಕ್ರೈಸ್ತ ಮಿಶನರಿಗಳು ಸೇವೆ ಮಾಡಿವೆ. ಈ ರೀತಿ ಕ್ರೈಸ್ತ ಸಮುದಾಯ ಬಿಟ್ಟು ಯಾವದೇ ಧರ್ಮವೂ ಮಾಡಿಲ್ಲ. ಇದನ್ನು ಎಲ್ಲರೂ ಹೆಮ್ಮೆಯಿಂದ ಪ್ರಚಾರ ಮಾಡಬೇಕು. ಮುಖ್ಯವಾಗಿ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಇರುವುದು ಕಡಿಮೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಸಭೆಗಳಿಗೆ ಬರುವ ಯುವಕ-ಯುವತಿಯರನ್ನು ಐಎಎಸ್, ಕೆಎಎಸ್, ಐಪಿಎಸ್‌ನಂತಹ ಉನ್ನತ ಮಟ್ಟದ ಸ್ಥಾನಗಳಿಗೆ ಹೋಗಲು ಪ್ರೇರಣೆ ನೀಡಿ. ಹೊಸಕೋಟೆ, ಕೋಲಾರ, ಬಂಗಾರಪೇಟೆ, ಚಿಕ್ಕಬಳ್ಳಾಪುರ ಭಾಗಗಳಲ್ಲಿ ಮತ್ತಷ್ಟು ಸೇವಕರು ಹುಟ್ಟಬೇಕು. ವಿಂಗಡಣೆ ಆಗುವುದನ್ನು ಬಿಟ್ಟು ನಾವೆಲ್ಲರೂ ಕ್ರಿಸ್ತನ ಸೇವಕರು ಎಂಬ ಭಾವದೊಂದಿಗೆ ಸಂಘಟಿತರಾಗಿ ಬದುಕುಬೇಕು ಎಂದರು.ಸಭಾಪಾಲಕರ ಸಂಘದ ತಾಲೂಕು ಅಧ್ಯಕ್ಷ ಪಾಸ್ಟರ್ ಜಾನ್ ಸೆಲ್ವಿನ್ ಮಾತನಾಡಿ, ಹೊಸಕೋಟೆ ತಾಲೂಕಿನಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಚರ್ಚಗಳಿದ್ದು, ಎಲ್ಲರೂ ಒಗ್ಗಟ್ಟಾಗಿ ಹೊಸಕೋಟೆ ಪ್ರಾಂತ್ಯದಲ್ಲಿ ಮತ್ತಷ್ಟು ಕ್ರಿಸ್ತನ ಸ್ಮರಣೆಗೆ ಮುಂದಾಗಬೇಕಿದೆ. ಆದ್ದರಿಂದಲೆ ಸಭಾಪಾಲಕರ ಸಂಘ ಸ್ಥಾಪನೆ ಮಾಡಲಾಗಿದೆ ಎಂದರು.
-------
2: ಹೊಸಕೋಟೆ ನಗರದ ಅಭಿಷೇಕ ಪ್ರಾರ್ಥನ ಮಂದಿರದಲ್ಲಿ ಹೊಸಕೋಟೆ ಸಭಾಪಾಲಕರ ಸಂಘವನ್ನು ಹಿರಿಯ ಪಾಸ್ಟರ್ ರಮೇಶ್ ಉದ್ಘಾಟಿಸಿದರು.