ಸಂಘರ್ಷಗಳು ಘೋರ ಸ್ಥಿತಿಯಲ್ಲಿವೆ

KannadaprabhaNewsNetwork |  
Published : Oct 31, 2025, 01:15 AM IST
4 | Kannada Prabha

ಸಾರಾಂಶ

ಭಾರತ ಒಂದು ಬಹುತ್ವ ದೇಶ. ಬಹು ಸಂಸ್ಕೃತಿ ಬಹುತ್ವದ ನಾಡು. ಹಲವು ಪರಂಪರೆ, ಪಕೃತಿಯನ್ನು ಒಳಗೊಂಡಿದೆ.

ಕನ್ನಡಪ್ರಭ ವಾರ್ತೆ ಮೈಸೂರುಬಹುತ್ವದ ಭಾರತದಲ್ಲಿ ಜಲ ಸಂಸ್ಕೃತಿ ಹಾಗೂ ಅಗ್ನಿ ಸಂಸ್ಕೃತಿಯ ನಡುವಿನ ತಿಕ್ಕಾಟ ಹಿಂದಿನಿಂದಲೂ ಇದೆ. ಇವತ್ತಿಗೆ ಅದು ಘೋರ ಸ್ಥಿತಿಯಲ್ಲಿದೆ ಎಂದು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಮಂಟೇಸ್ವಾಮಿ ಸಿದ್ದಪ್ಪಾಜಿ ಮತ್ತು ರಾಚಪ್ಪಾಜಿ ಪೀಠ ಹಾಗೂ ಪಿ.ಆರ್. ತಿಪ್ಪೇಸ್ವಾಮಿ ಪೀಠಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಜನಪದ ಮಹಾಕಾವ್ಯಗಳಲ್ಲಿ ಸ್ತ್ರೀ ಸಂವೇದನೆ’ ವಿಷಯದ ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಭಾರತ ಒಂದು ಬಹುತ್ವ ದೇಶ. ಬಹು ಸಂಸ್ಕೃತಿ ಬಹುತ್ವದ ನಾಡು. ಹಲವು ಪರಂಪರೆ, ಪಕೃತಿಯನ್ನು ಒಳಗೊಂಡಿದೆ. ಆ ದೃಷ್ಟಿಯಿಂದ ಅಕ್ಷರತೆ ಮತ್ತು ಅನಕ್ಷರತೆಯನ್ನುಟ್ಟಿಕೊಂಡು ಗ್ರಹಿಸಿದಾಗ ಬಹಳ ಹಿಂದಿನಿಂದ ಇಲ್ಲಿಯವರೆಗೆ ಉದ್ದಕ್ಕೂ ಒಂದು ಸಂಘರ್ಷಾತ್ಮಕವಾದ ವಾತಾವರಣವಿದೆ. ಇವತ್ತಿಗೆ ಅದು ಘೋರ ಸ್ಥಿತಿಯಲ್ಲಿದೆ ಎಂದರು.ಅಗ್ನಿ ಮತ್ತು ಜಲ ಸಂಸ್ಕೃತಿ ನಡುವಿನ ತಿಕ್ಕಾಟ ಈ ದೇಶದ ಚರಿತ್ರೆಯನ್ನು ರೂಪಸುತ್ತಿವೆ. ಆದರೆ ಗರಿಕೆ ಹುಲ್ಲನ್ನು ತುಳಿದಷ್ಟು ಮತ್ತೆ ಅದು ತನ್ನ ಸತ್ವದಿಂದ ಚಿಗುರಿ ಮೇಲೆಳುವಂತೆ ಈ ದೇಶದಲ್ಲಿ ಎಷ್ಟೋ ಬುಡಕಟ್ಟುಗಳು ಇಂದಿಗೂ ಗರಿಕೆ ಬೇರಿನ ಸತ್ವದಂತೆ ಗಟ್ಟಿಗೊಂಡು ಉಸಿರಾಡುತ್ತಿವೆ ಎಂದು ಅವರು ತಿಳಿಸಿದರು.ಜಾನಪದವನ್ನು ಅಧ್ಯಯನ ಮಾಡುವುದರೊಳಗೆ, ನಮ್ಮ ಅಕ್ಷರ ಪರಂಪರೆಯ ವಿಮಾಂಸೆ ದೃಷ್ಟಿಕೋನ, ಓದಿನ ದೃಷಿಕೋನ ಸೋತಿದೆ. ಕುಲಚರಿತೆಯನ್ನು ನೋಡಿದರೆ ಹಲವಡೆಗಳಲ್ಲಿ ಹಾಡು, ಕುಣಿತ, ವೇದಿಕೆ ಕಾರ್ಯಕ್ರಮ, ಬೀದಿ ನಾಟಕ ನೆಡೆಸುತ್ತೇವೆ. ಆದರೆ ಅದರೊಳಗಿನ ಕುಲಗಳ ಚರಿತೆಯ ಸಂಪತ್ತು, ನಿಜವಾದ ಸಂವೇದನೆ ಏನು? ಅಲ್ಲಿ ಹೆಣ್ಣಿನ ಸ್ಥಾನ, ಸಂವೇದನೆ ಹೇಗೆ ವ್ಯಕ್ತವಾಗಿದೆ. ಯಾವ ಕಾರಣಕ್ಕೆ ಅಂತಹ ಮಾತೃ ಸಂವೇದನೆಯ ಮೇಲೆ ಹೊರಗಿನ ಸಂಸ್ಕೃತಿ ಆಕ್ರಮಣ ಮಾಡಿವೆ ಎಂಬ ಸೂಕ್ಷ್ಮವನ್ನು ಅರಿಯಬೇಕಿದೆ ಎಂದರು.

ಪಿ.ಆರ್. ತಿಪ್ಪೇಸ್ವಾಮಿ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಆರ್. ಸುನಂದಮ್ಮ ಆಶಯ ನುಡಿಗಳನ್ನಾಡಿ, ಮನುಸೃತಿಯ ರಾಜಕಾರಣವನ್ನು ಪ್ರತಿಯೊಬ್ಬರೂ ಅರಿಯಬೇಕು. ಇಂದಿನ ರಾಜಕಾರಣಕ್ಕೂ ಮನುಸೃತಿಯ ವಿಚಾರಕ್ಕೂ ಇರುವ ಎಷ್ಟು ಒತ್ತು ಇದೆ. ಅವುಗಳ ಮೂಲಕ 6ನೇ ಶತಮಾನದ ನಂತರದ ಕಾಲಘಟ್ಟದಲ್ಲಿ ಮೌಖಿಕ ಜ್ಞಾನದ ಶಾಖೆಗಳಲ್ಲಿ ಮನುವಿನ ಪ್ರವೇಶ ಇದರ ಮೂಲಕ ಕೆಳ ವರ್ಗದ ಹೆಣ್ಣು ಮಕ್ಕಳ ಜ್ಞಾನವನ್ನು ಅಂಚಿಗೆ ಸರಿಸಲಾಗಿದೆ ಎಂದುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.

ಕುವೆಂಪು ಕನ್ನಡ ಅಧ್ಯುಂನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ, ಮಂಟೇಸ್ವಾಮಿ ಸಿದ್ದಪ್ಪಾಜಿ ಮತ್ತು ರಾಚಪ್ಪಾಜಿ ಪೀಠದ ಸಂದರ್ಶಕ ಪ್ರಾಧ್ಯಾಪಕ ಕೇಶವ ಶರ್ಮ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ