ಹೆಸಗಲ್ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಭೂಮಿ ಕಾಯ್ದಿರಿಸಲಾಗಿದೆ: ಕೆ.ವೆಂಕಟೇಶ್

KannadaprabhaNewsNetwork |  
Published : Oct 31, 2025, 01:15 AM IST
ಮೂಡಿಗೆರೆ ಪಟ್ಟಣದಲ್ಲಿ ಪಟ್ಟಣ ವ್ಯಾಪ್ತಿಯ ನಿವೇಶನ ರಹಿತರೊಂದಿಗೆ ಸಂವಾದ ಕಾರ್ಯಕ್ರಮವನ್ನು ತಹಶೀಲ್ದಾರ್ ಎಸ್.ಅಶ್ವಿನಿ ಉದ್ಘಾಟಿಸಿದರು | Kannada Prabha

ಸಾರಾಂಶ

ಮೂಡಿಗೆರೆ, ಕಳೆದ 30 ವರ್ಷಗಳ ನಂತರ ಇಲ್ಲಿವರೆಗೂ ಪ.ಪಂ ನಿವಾಸಿಗಳಿಗೆ ನಿವೇಶನ ಕೊಡಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಶಾಸಕರ ಮತ್ತು ಪ.ಪಂ.ಯ ಸದಸ್ಯರ ಪ್ರಯತ್ನದಿಂದ ಹೆಸಗಲ್ ಗ್ರಾಪಂ ವ್ಯಾಪ್ತಿಯ ಸರ್ವೆ ನಂ.102 ರಲ್ಲಿ 5 ಎಕರೆ ಪ್ರದೇಶವನ್ನು ನಿವೇಶನಕ್ಕೆ ಕಾಯ್ದಿರಿಸಲಾಗಿದೆ ಎಂದು ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್ ಹೇಳಿದರು.

- ಪಪಂ ವ್ಯಾಪ್ತಿಯ ನಿವೇಶನ ರಹಿತರೊಂದಿಗೆ ಸಂವಾದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಕಳೆದ 30 ವರ್ಷಗಳ ನಂತರ ಇಲ್ಲಿವರೆಗೂ ಪ.ಪಂ ನಿವಾಸಿಗಳಿಗೆ ನಿವೇಶನ ಕೊಡಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಶಾಸಕರ ಮತ್ತು ಪ.ಪಂ.ಯ ಸದಸ್ಯರ ಪ್ರಯತ್ನದಿಂದ ಹೆಸಗಲ್ ಗ್ರಾಪಂ ವ್ಯಾಪ್ತಿಯ ಸರ್ವೆ ನಂ.102 ರಲ್ಲಿ 5 ಎಕರೆ ಪ್ರದೇಶವನ್ನು ನಿವೇಶನಕ್ಕೆ ಕಾಯ್ದಿರಿಸಲಾಗಿದೆ ಎಂದು ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್ ಹೇಳಿದರು. ಗುರುವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಪಟ್ಟಣ ವ್ಯಾಪ್ತಿಯ ನಿವೇಶನ ರಹಿತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಆದರೆ, ಈಗ ಕಾಯ್ದಿರಿಸಿರುವ 5 ಎಕರೆಯಲ್ಲಿ ಕನಿಷ್ಠ 200 ನಿವೇಶನ ನೀಡಲು ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಹಂಚಿಕೆಗೆ ಕ್ರಮ ವಹಿಸಲಾಗುವುದು. ಉಳಿದ ಫಲಾನುಭವಿಗಳಿಗೆ ಪಪಂ ವ್ಯಾಪ್ತಿಯ 3 ಕಿ.ಮೀ ಅಂತರದ ಬೀಜವಳ್ಳಿ, ಲೋಕವಳ್ಳಿ, ಬಿದರಹಳ್ಳಿ, ಕೊಲ್ಲಿಬೈಲ್ ಭಾಗದಲ್ಲಿ ನೂರಾರು ಎಕರೆ ಗೋಮಾಳ ಪ್ರದೇಶವಿದ್ದು, ಇದನ್ನು ನಿವೇಶನಕ್ಕಾಗಿ ಕಾಯ್ದಿರಿಸಲು ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಎಸ್.ಅಶ್ವಿನಿ ಅವರು, ತಾಲೂಕಿನಲ್ಲಿ ಪಟ್ಟಣ ಮಾತ್ರವಲ್ಲ. ತಾಲೂಕಿನಾದ್ಯಂತ ನಿವೇಶನ ಸಮಸ್ಯೆ ಇದ್ದು, ಭೂಮಿ ಗುರುತಿಸುವ ಕಾರ್ಯ ನಡೆಯುತ್ತಿದೆ. ಕಾಯ್ದಿರಿಸಿದ ಭೂಮಿಯಲ್ಲಿ ನಿವೇಶನ ಒದಗಿಸಲು ಹಾಗೂ ಭೂಮಿ ಪತ್ತೆ ಕಾರ್ಯ ನಡೆಸಲು ಕೆಲವರಿಂದ ತಕರಾರು ಅರ್ಜಿ ಹಾಗೂ ಇತರೇ ಸಮಸ್ಯೆ ಎದುರಾಗುತ್ತಿದೆ. ಇದನ್ನು ಬಗೆಹರಿಸಲು ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಪಪಂ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸದಸ್ಯರಾದ ಧರ್ಮಪಾಲ್, ಮನೋಜ್, ಆಶಾ ಮೋಹನ್, ಗೀತಾ ರಂಜನ್ ಅಜಿತ್‌ಕುಮಾರ್, ಕಮಲಮ್ಮ, ಖುರ್ಷಿದ್‌ಭಾನು, ಹಂಜಾ, ಜಯಮ್ಮ ಇದ್ದರು.

30 ಮೂಡಿಗೆರೆ 2ಎಮೂಡಿಗೆರೆ ಪಟ್ಟಣದಲ್ಲಿ ಪಟ್ಟಣ ವ್ಯಾಪ್ತಿಯ ನಿವೇಶನ ರಹಿತರೊಂದಿಗೆ ಸಂವಾದವನ್ನು ತಹಸೀಲ್ದಾರ್ ಎಸ್.ಅಶ್ವಿನಿ ಉದ್ಘಾಟಿಸಿದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ