ಶಿಬಿರಾರ್ಥಿಗಳಿಂದ ಪುರಾತನ ದೇಗುಲ ಆವರಣ, ಕಲ್ಯಾಣಿಗೆ ನೀರು ಹೋಗುವ ದಾರಿ ಸ್ವಚ್ಛತೆ

KannadaprabhaNewsNetwork |  
Published : May 18, 2026, 01:45 AM IST
17ಕೆಎಂಎನ್ ಡಿ20,21 | Kannada Prabha

ಸಾರಾಂಶ

ಹೊಸಕೋಟೆ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಪುರಾತನ ನಿಷ್ಕಾಮೇಶ್ವರ ದೇವಸ್ಥಾನ ಆವರಣ ಮತ್ತು ದೇಗುಲ ಮುಂಭಾಗ ಹೇರಳವಾಗಿ ಬೆಳ ಗಿಡಗಂಟೆಗಳು ಬೆಳೆದು ಅಶುಚಿತ್ವ ತುಂಬಿತ್ತು. ಜೊತೆಗೆ ಪುಟ್ಟದಾದ ಕೊಳದಲ್ಲೂ ಗಿಡ ಬೆಳೆದು ಹೂಳುತುಂಬಿಕೊಂಡು ಕೊಳ ಅನಾಥ ಸ್ಥಿತಿಯಲ್ಲಿತ್ತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಹೋಬಳಿಯ ಹೊಸಕೋಟೆ ಗ್ರಾಮದ ಪುರಾತನ ದೇಗುಲ ಆವರಣ ಮತ್ತು ಕಲ್ಯಾಣಿಗೆ ನೀರು ಹೋಗುವ ದಾರಿಯನ್ನು ಸ್ವಚ್ಛಗೊಳಿಸಿ ಸಾರ್ಥಕ ಕಾರ್ಯ ಮಾಡಿದರು.

ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳು ಪುರಾತನ ನಿಷ್ಕಾಮೇಶ್ವರ ದೇಗುಲ ಮತ್ತು ಪರಂಪರೆ ಇತಿಹಾಸ ಸಂರಕ್ಷಿಸುವ ಕಾರ್ಯದ ಮಹತ್ವದ ಬಗ್ಗೆ ಜಾಗೃತಿ, ದೇವಾಲಯದ ಆವರಣಗಳಲ್ಲಿ ನಿರಂತರ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಿದ್ದಾರೆ.

ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಪುರಾತನ ನಿಷ್ಕಾಮೇಶ್ವರ ದೇವಸ್ಥಾನ ಆವರಣ ಮತ್ತು ದೇಗುಲ ಮುಂಭಾಗ ಹೇರಳವಾಗಿ ಬೆಳ ಗಿಡಗಂಟೆಗಳು ಬೆಳೆದು ಅಶುಚಿತ್ವ ತುಂಬಿತ್ತು. ಜೊತೆಗೆ ಪುಟ್ಟದಾದ ಕೊಳದಲ್ಲೂ ಗಿಡ ಬೆಳೆದು ಹೂಳುತುಂಬಿಕೊಂಡು ಕೊಳ ಅನಾಥ ಸ್ಥಿತಿಯಲ್ಲಿತ್ತು.

ಕಾಲೇಜು ಪ್ರಾಂಶುಪಾಲ ಡಾ.ಡಿ.ನಂಜುಂಡಯ್ಯ ಮಾರ್ಗದರ್ಶನದಲ್ಲಿ ಕಾರ್ಯಯೋಜನೆ ರೂಪಿಸಿದ ಎನ್.ಎಸ್.ಎಸ್ ಶಿಬಿರಾರ್ಥಿಗಳು ಶ್ರಮದಾನದ ಮೂಲಕ ಕೊಳವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿ ದೇವಾಲಯದ ಇಡೀ ಆವರಣವನ್ನು ಸಂಪೂರ್ಣ ಸ್ವಚ್ಚಗೊಳಿಸಿ ನಿಷ್ಕಾಮೇಶ್ವರನಿಗೆ ವಿಶೇಷಪೂಜೆ ಸಲ್ಲಿಸಿದರು.

ಇದೇ ವೇಳೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದ ಪ್ರಾಂಶುಪಾಲ ಡಾ.ಡಿ.ನಂಜುಂಡಯ್ಯ ಪುರಾತನ ದೇಗುಲಗಳು ಭಾರತೀಯ ಸಂಸ್ಕೃತಿಯ ಪ್ರತೀ. ಇವುಗಳ ರಕ್ಷಣೆ ಗ್ರಾಮಸ್ಥರ ಹಾಗೂ ಯುವಕರ ಜವಾಬ್ದಾರಿಯಾಗಿದೆ. ಹೋಸಕೋಟೆ ನಿಷ್ಕಾಮೇಶ್ವರ ದೇವಾಲಯದ ಸ್ವಚ್ಛತೆ ಕಾಪಾಡಿಕೊಂಡು ಉಳಿಸಿಕೊಳ್ಳಬೇಕು ಎಂದರು.

ಈ ವೇಳೆ ಶಿಬಿರಾಧಿಕಾರಿ ಮತ್ತು ಅಧ್ಯಾಪಕರಾದ ಡಾ.ಭವಾನಿ ಎಲ್., ಡಾ.ಸುಮಾ ಈ, ಸ್ವಾಮಿ ಎಸ್, ಸಂತೋಷ್, ಎನ್.ಅರುಣ್ ಕುಮಾರ್ ಹೆಚ್ ಸಿ, ರೇಖಾವತಿ, ಪರಮೇಶ್ವರ್ ಸಿ, ಯೋಗೇಶ್ ಎಂ ಎಸ್, ಮಹೇಶ್‌ಕುಮಾರ್, ಆಶಾ ಎಚ್.ಬಿ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.ಮೇ 19ರಂದು ಕಾಲೇಜು ವಾರ್ಷಿಕೋತ್ಸವ

ಮೇಲುಕೋಟೆ: ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ಮೇ 19 ರಂದು ವಾರ್ಷಿಕೋತ್ಸವ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಲಿದೆ. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಮಾರಂಭ ಉದ್ಘಾಟಿಸಿಲಿದ್ದು, ವಿದ್ವಾನ್ ಬಿ.ವಿ ಆನಂದಾಳ್ವಾರ್, ಗ್ರಾಪಂ ಪಿಡಿಒ ರಾಜೇಶ್ವರ್, ಚಲನಚಿತ್ರ ಹಾಸ್ಯನಟ ಹಾಲತಿ ಜಯರಾಮು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲರಾದ ಡಾ.ಡಿ. ನಂಜುಂಡಯ್ಯ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆ ಆರಂಭ, ಮಾರಾಟ ಈಗ ಸರಳ
ಮೋದಿ ಸರ್ಕಾರದಿಂದ ದಾಖಲೆ ನಿರುದ್ಯೋಗ: ಮಂಜುನಾಥ್‌