ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕಳೆದ ೨೪ ವರ್ಷಗಳಿಂದ ಪಾರದರ್ಶಕವಾಗಿ ಹರಾಜು ಪಕ್ರಿಯೆ ನಡೆದಿದ್ದರೆ ಪಂಚಾಯಿತಿಗೆ ಕೋಟಿಗಳ ಲೆಕ್ಕದಲ್ಲಿ ಆದಾಯ ಬರುತ್ತಿತ್ತು. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಪಂಚಾಯಿತಿಗೆ ನಷ್ಟವಾಗಿದೆ ಎಂದು ಸಮಿತಿ ಅಧ್ಯಕ್ಷ ಸಿ.ಬಿ.ಸುರೇಶ್‌ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರು. ೩ ಸಾವಿರ ಬಾಡಿಗೆಯನ್ನು ಪಂಚಾಯಿತಿಗೆ ಕಟ್ಟಿ, ಮಳಿಗೆಗಳನ್ನು ಅಕ್ರಮವಾಗಿ ಪರಭಾರೆ ಮಾಡಿ, ಮಳಿಗೆಗಳಿಂದ ೨೦-೪೦ ಸಾವಿರ ರು. ಬಾಡಿಗೆ ಪಡೆದು ಬಾಡಿಗೆ ದಂಧೆಯಲ್ಲಿ ಲಕ್ಷಾಂತರ ಹಣವನ್ನು ಗಳಿಸಿದ್ದಾರೆ ಎಂದು ದೂರಿದರು.ಜಿಲ್ಲಾಡಳಿತ ೬೦ ಮಳಿಗೆಗಳ ಹರಾಜಿಗೆ ಅಧಿಸೂಚನೆ ಹೊರಡಿಸಿದ ನಂತರ, ಹರಾಜು ಪ್ರಕ್ರಿಯೆ ತಡೆಯಲು ಕೆಲವರು ಒಂದು ವರ್ಷದಿಂದ ಶ್ರಮಪಟ್ಟಿದ್ದಾರೆ. ನ್ಯಾಯಾಲಯದಿಂದಲೂ ತಡೆಯಾಜ್ಞೆ ತಂದಿದ್ದರು. ಮಳಿಗೆಗಳನ್ನು ನಿಯಾಮಾನುಸಾರ ಹರಾಜು ಮಾಡುವಂತೆ ಹೋರಾಟ ಸಮಿತಿ ಹೋರಾಟ ಮಾಡಿಕೊಂಡೆ ಬಂದಿದೆ. ಮುಂದಿನ ಒಂದು ವಾರದಲ್ಲಿ ಹರಾಜಿನಲ್ಲಿ ಮಳಿಗೆಗಳನ್ನು ಪಡೆದುಕೊಂಡವರ ಹೆಸರಿಗೆ ನೋಂದಣಿ ಪ್ರಕ್ರಿಯೆ ನಡೆಯಬೇಕು ಎಂದು ಆಗ್ರಹಿಸಿದರು.
ಮಳಿಗೆಗಳು ಪರಾಭಾರೆಯಾಗುವ ಸೂಚನೆಗಳು ಸಿಕ್ಕಿದ್ದು, ಪಂಚಾಯಿತಿ ಆಡಳಿತ ಸೂಕ್ತ ಕ್ರಮಕೈಗೊಳ್ಳದಿದ್ದರೆ, ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸೋಮವಾರಪೇಟೆ ಪ.ಪಂ. ವಾಣಿಜ್ಯ ಮಳಿಗೆ ಹರಾಜು: ತಿಂಗಳಿಗೆ 3.98 ಲಕ್ಷ ರು. ಆದಾಯಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕಳೆದ ಕೆಲವು ತಿಂಗಳುಗಳಿಂದ ವಾಣಿಜ್ಯ ಮಳಿಗೆಗಳ ಹರಾಜಿಗೆ ಅಡ್ಡಿ ಉಂಟಾಗಿತ್ತು. ಹಾಲಿ ವರ್ತಕರು ಮಳಿಗೆಗಳನ್ನು ಶೆ. ೧೦ರಷ್ಟು ಬಾಡಿಗೆ ಹೆಚ್ಚಿಸಿ ನೀಡುವಂತೆ ಒತ್ತಾಯಿಸಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ. ನಂತರ ಪಂಚಾಯಿತಿ ತಡೆಯಾಜ್ಞೆ ತೆರವುಗೊಳಿಸಿ ಟೆಂಡರ್ ಪ್ರಕ್ರಿಯೆ ನಡೆಸಿತು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಟೆಂಡರ್ ಸಂದರ್ಭ ಪಂಚಾಯಿತಿ ಅಧ್ಯಕ್ಷ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ ಹಾಗೂ ಸದಸ್ಯರು, ಮುಖ್ಯಾಧಿಕಾರಿ ನಾಚಪ್ಪ ಮತ್ತಿತರರು ಇದ್ದರು.