ಜನಸಾಮಾನ್ಯರೇ ಗಾಡ್‌ ಫಾದರ್, ಗೆದ್ದರೆ ಸ್ವಾಭಿಮಾನಕ್ಕೆ ಜಯ

KannadaprabhaNewsNetwork |  
Published : May 05, 2024, 02:03 AM IST
ಕ್ಯಾಪ್ಷನಃ4ಕೆಡಿವಿಜಿ47, 48, 49ಃದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಹರಪನಹಳ್ಳಿಯಲ್ಲಿ ರೋಡ್ ಷೋ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

ರಾಜಕಾರಣದಲ್ಲಿ ನನಗೆ ಯಾರೂ ಗಾಡ್‌ ಫಾದರ್ ಇಲ್ಲ. ಜನಸಾಮಾನ್ಯರೇ ನನ್ನ ಗಾಡ್‌ ಫಾದರ್. ನಾನು ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಯ ಸ್ವಾಭಿಮಾನಿಗಳಿಗೆ ಗೆಲುವು ಸಿಕ್ಕಂತೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಹೇಳಿದ್ದಾರೆ.

- ಹರಪನಹಳ್ಳಿಯಲ್ಲಿ ಬೃಹತ್ ರೋಡ್ ಶೋ ನಡೆಸಿ ವಿಯಕುಮಾರ್‌ ಹೇಳಿಕೆ - - -ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜಕಾರಣದಲ್ಲಿ ನನಗೆ ಯಾರೂ ಗಾಡ್‌ ಫಾದರ್ ಇಲ್ಲ. ಜನಸಾಮಾನ್ಯರೇ ನನ್ನ ಗಾಡ್‌ ಫಾದರ್. ನಾನು ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಯ ಸ್ವಾಭಿಮಾನಿಗಳಿಗೆ ಗೆಲುವು ಸಿಕ್ಕಂತೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಹೇಳಿದರು.

ಹರಪನಹಳ್ಳಿಯಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ಅವರು, ಸಾಮಾನ್ಯರಿಂದ ಸಾಮಾನ್ಯರಿಗಾಗಿ ಸಾಮಾನ್ಯರಿಗೋಸ್ಕರ ನಡೆಸುತ್ತಿರುವ ಚುನಾವಣೆ. ದೊಡ್ಡ ನಾಯಕರು ಯಾರೂ ನನ್ನ ಹಿಂದೆ ಇಲ್ಲ. ನನ್ನ ಜೊತೆಗಿರುವುದು ಸ್ವಾಭಿಮಾನಿಗಳು. ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಲೇಬೇಕೆಂದು ಪಣ ತೊಟ್ಟಿರುವ ಜನರು ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡುವ ಮೂಲಕ ನಾವು ಸ್ವಾಭಿಮಾನಿಗಳು ಎಂದು ಸಾಬೀತುಪಡಿಸುತ್ತಾರೆ ಎಂದರು.

ಇಲ್ಲಿ ಸೇರಿರುವ ಸಾವಿರಾರು ಸಂಖ್ಯೆಯಲ್ಲಿರುವ ಜನರು ಚಿತ್ರನಟರಿಗೆ ಕಾಯುತ್ತಿಲ್ಲ. ಇಲ್ಲಿಗೆ ಸ್ಟಾರ್ ಪ್ರಚಾರಕರಾದ ದರ್ಶನ್ ತೂಗುದೀಪ, ಸುದೀಪ್ ಬರುವುದಿಲ್ಲ. ಇಲ್ಲಿಗೆ ಬಂದಿರುವುದು ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಸಾಮಾನ್ಯ ಯುವಕ. ನಾನು ಸ್ವಾಭಿಮಾನಿಯಾಗಿ ಸ್ಪರ್ಧೆ ಮಾಡಿದ್ದೇನೆ. ನೀವೂ ಸ್ವಾಭಿಮಾನಿಗಳಾಗಿ ಮತಚಲಾಯಿಸಿ. ಒಬ್ಬೊಬ್ಬರೂ 300ರಿಂದ 400 ಮತಗಳ ನನಗೆ ಹಾಕಿಸಿ. ಕ್ರಮ ಸಂಖ್ಯೆ 28, ಗ್ಯಾಸ್ ಸಿಲಿಂಡರ್ ಗೆ ಅಮೂಲ್ಯ ಮತ ನೀಡಿ ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಿ ಎಂದು ಹೇಳಿದರು.

ನನ್ನೂರಿನ ಶಾಲೆಯಲ್ಲಿ ಪಡೆಯುವ ಶಿಕ್ಷಣ ಚೆನ್ನಾಗಿರಬೇಕು. ಆದ್ರೆ, ಮೂರು ದಶಕಗಳಲ್ಲಿ ಶಾಲೆಗಳ ಅಭಿವೃದ್ಧಿ ಆಗಿಲ್ಲ. ಗುಣಮಟ್ಟದ ಶಿಕ್ಷಣ ಸಿಕ್ಕಿದ್ದರೆ, ಗ್ರಾಮೀಣ ಭಾಗದ ಮಕ್ಕಳು ವೈದ್ಯರು, ಎಂಜಿನಿಯರ್, ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಿದ್ದರು. ಜನರ ಬದುಕು ಹಸನಾಗುತಿತ್ತು. ಆದ್ರೆ, ಈ ಕೆಲಸ ಮಾಡುವ ಇಚ್ಚಾಶಕ್ತಿ, ಆಸಕ್ತಿ, ಜನಪರ ಕಾಳಜಿ, ಸಮಾಜ ಸೇವೆ ಮಾಡುವ ಅಭಿಲಾಷೆ ಅಧಿಕಾರದಲ್ಲಿದ್ದವರಿಗೆ ಇರಲಿಲ್ಲ ಎಂದು ಹೇಳಿದರು.

- - - -4ಕೆಡಿವಿಜಿ47, 48, 49ಃ:

ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಹರಪನಹಳ್ಳಿಯಲ್ಲಿ ರೋಡ್ ಷೋ ನಡೆಸಿ ಮಾತನಾಡಿದರು.

PREV

Recommended Stories

ದಸರಾಕ್ಕೆ ದೀಪ್ತಾ ಭಾಸ್ತಿಗೆ ಆಹ್ವಾನವಿಲ್ಲಕೆ? : ಬಿವೈವಿ
ಕನಕಪುರದಲ್ಲಿ ವೈದ್ಯ ಕಾಲೇಜಿಗೆ ಭೂಮಿ ಖರೀದಿಗೆ ಹಣ ಮಂಜೂರು