ಕನ್ನಡಪ್ರಭ ವಾರ್ತೆ ಮೈಸೂರು
ಬಿಎಸ್ಎಸ್ ವಿದ್ಯೋದಯ ಶಾಲೆಯಲ್ಲಿ ನಡೆದ ವಿಜಯ ಪೇಜಾವರ ಶಿಕ್ಷಣ ಸಂಸ್ಥೆಗಳ ಎರಡು ದಿನಗಳ ಶೈಕ್ಷಣಿಕ ಸಮ್ಮೇಳನ ಸಂವರ್ಧನ 2025ರ ಸಮಾವೇಶಕ್ಕೆ ಚಾಲನೆ ನೀಡಿದ ನಂತರ ಸಮಾವೇಶದಲ್ಲಿ ಭಾಗಿಯಾದ ಎಲ್ಲ ಪೇಜಾವರ ಶಿಕ್ಷಣ ಸಂಸ್ಥೆಗಳ ಶಿಕ್ಷಕರನ್ನು ಆಯೋಜಕರನ್ನು ಮುಖ್ಯಸ್ಥರನ್ನು ಕುರಿತು ಆಶೀರ್ವಚನ ನೀಡಿದರು.
ನಾವು ಭಗವಂತನನ್ನು ಎಲ್ಲೆಡೆ ಕಾಣಬೇಕು. ಶ್ರೀವಿಶ್ವೇಶ್ವರ ತೀರ್ಥ ಶ್ರೀಪಾದಂಗಳವರು ಹಾಕಿಕೊಟ್ಟ ಘೋಷಣ ವಾಕ್ಯ ಮಾತೃದೇವೋಭವ, ಪಿತೃದೇವೋಭವ, ಅತಿಥಿ ದೇವೋ ಭವದ ಜೊತೆಗೆ ರಾಷ್ಟ್ರದೇವೋಭವ ಎಂಬ ವಿಷಯವನ್ನು ಎಲ್ಲ ಮಕ್ಕಳಲ್ಲಿಯೂ ಬೆಳೆಸಬೇಕು. ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರ ಪ್ರೇಮವನ್ನು ತುಂಬಿ. ಶಿಕ್ಷಕರು ಶಿಕ್ಷಣವನ್ನು ನೀಡುವುದು ಸಹ ರಾಷ್ಟ್ರ ಸೇವೆಯೇ ಆಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸುವುದು ಒಂದಾದರೆ ದೇಶದೊಳಗೆ ರಾಷ್ಟ್ರ ದ್ರೋಹ ಬೆಳೆಯದಂತೆ ನೋಡಿಕೊಳ್ಳುವುದು ಸಹ ದೊಡ್ಡ ಸವಾಲಾಗಿದೆ. ನೆಮ್ಮದಿಯ ಸಮಾಜವನ್ನು ಸೃಷ್ಟಿಸಿ.ಆಚಾರ- ವಿಚಾರ,ನಡೆ-ನುಡಿ,ಭಾಷೆ -ಭಾವ ಸಂಸ್ಕೃತಿ -ಸಂಸ್ಕಾರವನ್ನು ತುಂಬುವ ಶಿಕ್ಷಣವನ್ನು ಕೊಡಿ. ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವಂತೆ,ಉತ್ತಮ ಪ್ರಜೆಗಳಾಗುವಂತೆ ಮಕ್ಕಳನ್ನು ರೂಪಿಸಿ ಎಂದು ಅವರು ಕರೆ ನೀಡಿದರು.ವಿಜಯ ವಿಠಲ ವಿದ್ಯಾಸಂಸ್ಥೆಯ ಗೌರವ ಅಧ್ಯಕ್ಷ ಹಾಗೂ ಬಿಎಸ್ಎಸ್ ವಿದ್ಯೋದಯದ ಗೌರವ ಕಾರ್ಯದರ್ಶಿ ಆರ್. ವಾಸುದೇವ್ ಭಟ್ ಮಾತನಾಡಿ, ಕರ್ನಾಟಕದಾದ್ಯಂತ ಇರುವ ಪೇಜಾವರ ಶಿಕ್ಷಣ ಸಂಸ್ಥೆಗಳ ವಿದ್ಯಾಭ್ಯಾಸದಲ್ಲಿ ಏಕತಾನತೆ ಹೊಂದಬೇಕೆಂಬ ಉದ್ದೇಶದಿಂದ ಸಂವರ್ಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಸ್ತುತ ಇಂದಿನ ಕಾರ್ಯಕ್ರಮವು ಮೂರನೇ ಸಮಾವೇಶವಾಗಿದ್ದು, ಕಾರ್ಯಕ್ರಮದಲ್ಲಿ ಕರ್ನಾಟಕದಾದ್ಯಂತ ಇರುವ ಪೇಜಾವರ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಇಂದು ಯಾವುದೇ ನಿರ್ದಿಷ್ಟ ಬೋಧನಾ ವಿಷಯದ ಬಗ್ಗೆ ತರಬೇತಿ ಇರುವುದಿಲ್ಲ. ಬದಲಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರ ವ್ಯಕ್ತಿತ್ವದ ಅಭಿವೃದ್ಧಿಗೆ ಪೂರಕವಾದ ವಿಷಯಗಳನ್ನು ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಗನ್ನಾಥ ಶಣೈ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳಿಗೆ ರಾಷ್ಟ್ರದ ಬಗ್ಗೆ ಸಂಪೂರ್ಣ ಜಾಗ್ರತೆಯನ್ನು ಮೂಡಿಸಿ ರಾಷ್ಟ್ರ ಪ್ರೇಮವನ್ನು ಬೆಳೆಸಿ. ರಾಷ್ಟ್ರದಲ್ಲಿ ಐಕ್ಯತೆಯನ್ನು ಉಳಿಸಿಕೊಂಡು ಮಕ್ಕಳು ಬೆಳೆಯುವಂತೆ ಮಾಡುವುದು ನಿಮ್ಮ ಜವಾಬ್ದಾರಿ ಎಂದು ಶಿಕ್ಷಕರನ್ನು ಉದ್ದೇಶಿಸಿ ಹೇಳಿದರು.
ದಿಶಾ ಸ್ವಯಂಸೇವಕರು ಸಂವಾದಾತ್ಮಕ ಚಟುವಟಿಕೆಗಳನ್ನು ನಡೆಸಿದರು.
ಎರಡನೇ ದಿನದಂದು ಶಿಕ್ಷಣದಲ್ಲಿ ಮೌಲ್ಯಗಳು ಮತ್ತು ರಾಷ್ಟ್ರೀಯತೆಯ ಕುರಿತು ದೀಪಿಕಾ ಪಾಂಡುರಂಗಿ, ಭಾಷೆ ಮತ್ತು ಪ್ರಮುಖ ವಿಷಯಗಳ ಕುರಿತು ಪ್ರೊ. ಎಂ. ಕೃಷ್ಣೇಗೌಡ, ಶಿಕ್ಷಕರಿಂದ ಗುರುವಿಗೆ ಪಯಣ ಕುರಿತು ವಿ.ಬಿ. ಆರತಿ, ಸಾಮಾಜಿಕ ಪರಿವರ್ತನೆಯಲ್ಲಿ ಶಿಕ್ಷಣ ಸಂಸ್ಥೆಗಳು ವಿಷಯದ ಕುರಿತು ವಿದ್ಯಾಭಾರತಿಯ ಶ್ರೀ ಉಮೇಶ್ ಕುಮಾರ್ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಕರಿಗೆ ಬುನಾದಿ ಶಿಕ್ಷಣದ ಕುರಿತು ಶ್ರೀಮತಿ ತಾರಾ ಕೆ.ಆಚಾರಿ ಮತ್ತು ಸಾಮರ್ಥ್ಯ ಆಧಾರಿತ ಸುಗಮೀಕರಣದಲ್ಲಿ ಶಿಕ್ಷಕರು ವಿಷಯದ ಕುರಿತು ಶ್ರೀಚೇತನ್, ಸಂಪ್ರದಾಯ ಅವರ ಪ್ರಭಾವಶಾಲಿ ಭಾಷಣಗಳು ನಡೆದವು.