ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ವಿಕಸಿತ ಭಾರತ ಜಿ-ರಾಮ್ ಜಿ. ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮೊಳಗಿದೆ. ರಾಜ್ಯದಲ್ಲಿಯೇ ಮನರೇಗಾ ವಿರುದ್ಧ ಹೆಚ್ಚಿನ ಭ್ರಷ್ಟಚಾರವಾಗಿದೆ. ಇದನ್ನು ಸರಿಪಡಿಸುವುದನ್ನು ಬಿಟ್ಟು ಮಹಾತ್ಮಗಾಂಧಿ ಹೆಸರು ಕೈ ಬಿಟ್ಟಿದ್ದಾರೆ ಎಂದು ಬೊಬ್ಬೆ ಹೊಡೆಯುವ ಮೂಲಕ ಕೇಂದ್ರದ ಮಹತ್ವ ಪೂರ್ಣ ಯೋಜನೆಯ ವಿರುದ್ದ ಅಪ್ರಚಾರ ಆರಂಭಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಲು ಹೊರಟಿದೆ. ಸಂವಿಧಾನ ಬದ್ದವಾಗಿ ರಚನೆಯಾಗಿರುವ ಕೇಂದ್ರ ಸರ್ಕಾರ ಈ ಯೋಜನೆಯನ್ನು ಸಚಿವ ಸಂಪುಟದಲ್ಲಿಟ್ಟು ಅನುಮೋದನೆ ಪಡೆದು, ಅಧಿವೇಶನದಲ್ಲಿ ಪಾಸ್ ಮಾಡಲಾಗಿದೆ. ರಾಷ್ಟ್ರಪತಿಗಳು ಸಹ ಸಹಿ ಹಾಕಿದ್ದಾರೆ. ಇದನ್ನು ವಿರೋಧಿಸಿ ವಿಶೇಷ ಅಧಿವೇಶವನ್ನು ಕರೆಯುವ ಅವಶ್ಯಕತೆ ಇತ್ತಾ ಎಂದು ಪ್ರಶ್ನೆ ಮಾಡಿದ ಅವರು, ರಾಜ್ಯಪಾಲರ ಮೂಲಕ ವಾಲ್ಮೀಕಿ ಹಗರಣದಲ್ಲಿ ಇಷ್ಟು ಕೋಟಿ ಭ್ರಷ್ಟಚಾರವಾಗಿದೆ. ಗೃಹ ಲಕ್ಷಿ ಯೋಜನೆಯಲ್ಲಿ ಭ್ರಷ್ಟಚಾರ ಹಾಗೂ ಮುಡಾ ಸೈಟು ಹರಗಣಗಳಲ್ಲಿ ಇಷ್ಟು ಹಣ ಲೂಟಿ ಮಾಡಿದ್ದೇವೆ ಎಂದು ಭಾಷಣದಲ್ಲಿ ಹೇಳಿದ್ದರೆ ಒಪ್ಪಿಗೊಳ್ಳಬಹುದಾಗಿತ್ತು. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸೋನಿಯಾಗಾಂಧಿ ಹಾಗೂರಾಹುಲ್ ಗಾಂಧಿ ಅನತಿಯಂತೆ ನಡೆಯುತ್ತಿದೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದವರಿಗೆ ಕಾಯ್ದೆಯನ್ನು ಓದಿ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲ. ಕೇವಲ ಮಹಾತ್ಮಾಗಾಂಧಿ ಹೆಸರು ತೆಗೆದರು ಎನ್ನುವುದನ್ನು ಹೇಳುತ್ತಿದ್ದಾರೆ. ಈ ಕಾಯ್ದೆಯು ಬಹಳ ವರ್ಷಗಳಲ್ಲಿ ಆಯಾ ಕಾಲದ ಸರ್ಕಾರಗಳು ಅನತಿಯಂತೆ ಬದಲಾವಣೆಯಾಗಿದೆ. ಸಂಪೂರ್ಣ ಗ್ರಾಮೀಣ ಪ್ರದೇಶಗಳ ವಿಕಸನ ಮಾಡುವ ದಿಕ್ಕಿನಲ್ಲಿ ೨೦೪೭ಕ್ಕೆ ವಿಶ್ವ ಭಾರತ ವನ್ನಾಗಿ ನೋಡುವ ಸಂಕಲ್ಪದೊಂದಿಗೆ ಯೋಜನೆಯನ್ನು ಜಾರಿ ಮಾಡಲಾಗಿದೆ. ಅಪಪ್ರಚಾರಕ್ಕೆ ರಾಜ್ಯದ ಜನರು ಸೊಪ್ಪು ಹಾಕಬೇಡಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್‌ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಇಂಥ ವಿರೋಧ ಮಾಡಲಾಗುತ್ತಿದೆ. ಅದರಲ್ಲೂ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಗಾಂಧಿ ಕುಟುಂಬವನ್ನು ಮೆಚ್ಚಿಸಿಕೊಳ್ಳಲು ಇಂಥ ನಾಟಕವಾಡುತ್ತಿದ್ದಾರೆ. ರಾಜ್ಯದ ಜನರು ದಡ್ಡರಲ್ಲ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.ಸಮಾವೇಶದದಲ್ಲಿ ಬಿಜಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೆಶ್, ಮಾಜಿ ಶಾಸಕ ಎಸ್. ಬಾಲರಾಜು ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಎಂ. ರಾಮಚಂದ್ರ, ನೂರೊಂದುಶೆಟ್ಟಿ, ಮಾಜಿ ನಗರಸಭಾ ಉಪಾಧ್ಯಕ್ಷೆ ಮಮತಾ ಬಾಲಸುಬ್ರಮಣ್ಯ, ಜಿಲ್ಲ ಬಿಜೆಪಿ ಮಾಜಿ ಅಧ್ಯಕ್ಷ ಆರ್. ಸುಂದರ್,ಚುಡಾ ಮಾಜಿ ಅಧ್ಯಕ್ಷರಾದ ಶಾಂತಮೂರ್ತಿ, ಎಸ್. ಬಾಲಸುಬ್ರಮಣ್ಯ, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಇದ್ದರು.