ಎಸ್ಐಆರ್ ವಿಚಾರದಲ್ಲಿ ಸಮಸ್ಯೆ ಹುಟ್ಟು ಹಾಕಲು ಕಾಂಗ್ರೆಸ್ ಮುಂದಾಗಿದೆ

KannadaprabhaNewsNetwork |  
Published : Sep 30, 2026, 01:15 AM IST
8 | Kannada Prabha

ಸಾರಾಂಶ

ಕಾಂಗ್ರೆಸ್ ನಾಯಕರು ಮಾತೆತ್ತಿದರೆ ವೋಟ್ ಚೋರಿ ಅಂತಾರೆ. ಹಾಗಾದರೆ ಕರ್ನಾಟಕ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ವೋಟ್ ಚೋರಿ ಆಗಿದೆಯಾ?, ಎಸ್ಐಆರ್ ಮಾಡಿದ ನಂತರ ಬೋಗಸ್ ಮತದಾರರನ್ನು ಓಡಿಸುವ ಕೆಲಸವಾಗುತ್ತಿದೆ. ಇದರಿಂದ ಕಾಂಗ್ರೆಸ್ ಗೆ ಆತಂಕ ಶುರುವಾಗಿದೆ. ಇವರ ಹೋರಾಟದಲ್ಲಿ ಯಾವುದೇ ಹುರುಳಿಲ್ಲ‌.

ಕನ್ನಡಪ್ರಭ ವಾರ್ತೆ ಮೈಸೂರು

ಎಸ್ಐಆರ್ ವಿಚಾರದಲ್ಲಿ ದೇಶದಲ್ಲಿ ದೊಡ್ಡ ಸಮಸ್ಯೆ ಹುಟ್ಟು ಹಾಕಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ವಿಚಾರದಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಒಂದು ದೊಡ್ಡ ಸಮಸ್ಯೆಯನ್ನು ಹುಟ್ಟುಹಾಕಲು ಹೊರಟಿದೆ. ಬಿಜೆಪಿಗೂ ಎಸ್ಐಆರ್‌ಗೂ ಯಾವುದೇ ಸಂಬಂಧವಿಲ್ಲ. 20 ವರ್ಷಗಳಿಗೊಮ್ಮೆ ಎಸ್ಐಆರ್ ನಡೆಯುತ್ತಾ ಬಂದಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲೂ ಎಸ್ಐಆರ್ ನಡೆದಿದೆ. ಈಗ ಬಿಜೆಪಿ ಆಡಳಿತಾವಧಿಯಲ್ಲಿ ನಡೆಯುತ್ತಿದೆ ಎಂದರು.

ಎಸ್ಐಆರ್ ಮೂಲಕ ಅನರ್ಹರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಕೆಲಸ ನಡೆಯುತ್ತಿದೆ. ಪಾಕಿಸ್ತಾನ, ಬಾಂಗ್ಲಾದೇಶದ ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಲಾಗುತ್ತಿದೆ. ಹಾಗಾದರೆ ಅವರಿಗೆಲ್ಲ ಮತದಾನದ ಹಕ್ಕು ನೀಡಲು ಆಗುತ್ತಾ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರು ಮಾತೆತ್ತಿದರೆ ವೋಟ್ ಚೋರಿ ಅಂತಾರೆ. ಹಾಗಾದರೆ ಕರ್ನಾಟಕ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ವೋಟ್ ಚೋರಿ ಆಗಿದೆಯಾ?, ಎಸ್ಐಆರ್ ಮಾಡಿದ ನಂತರ ಬೋಗಸ್ ಮತದಾರರನ್ನು ಓಡಿಸುವ ಕೆಲಸವಾಗುತ್ತಿದೆ. ಇದರಿಂದ ಕಾಂಗ್ರೆಸ್ ಗೆ ಆತಂಕ ಶುರುವಾಗಿದೆ. ಇವರ ಹೋರಾಟದಲ್ಲಿ ಯಾವುದೇ ಹುರುಳಿಲ್ಲ‌. ಕೇವಲ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಎಸ್ಐಆರ್ ವಿರೋಧಿಸುತ್ತಿದ್ದಾರೆ ಎಂದು ದೂರಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿತ್ತು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆ ಹಿನ್ನಡೆ ಆಯಿತು. ಬಿಜೆಪಿ 242 ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದು ವಾಸ್ತವ ಸಂಗತಿಯಾಗಿದೆ. ಆದರೂ ಕಾಂಗ್ರೆಸ್ ನಾಯಕರು ವೋಟ್ ಚೋರಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ದೇಶದಲ್ಲಿ ವೋಟ್ ಚೋರಿ ಆಗುತ್ತಿಲ್ಲ. ಬದಲಾಗಿ ಜನ ಕಳ್ಳರಿಗೆ ವೋಟ್ ಹಾಕುತ್ತಿಲ್ಲ. ಕಾಂಗ್ರೆಸ್ ಎಲ್ಲೆಲ್ಲಿ ಗೆದ್ದಿದ್ದೆಯೋ ಅಲ್ಲೆಲ್ಲಾ ವೋಟ್ ಚೋರಿ ಆಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಜನರು ಕಾಂಗ್ರೆಸ್‌ ಗೆ ವೋಟ್ ಹಾಕಿಲ್ಲ. ಒಂದು ಸೀಟನ್ನೂ ಗೆಲ್ಲಲ್ಲೂ ಆಗುವುದಿಲ್ಲ. ಆದರೆ, ಅಲ್ಲಿ ವೋಟ್ ಚೋರಿ ಆಗಿದೆ ಎಂದು ಆರೋಪಿಸುತ್ತಾರೆ. ಮೊದಲಿನ ರೀತಿ ಈಗ ವೋಟ್‌ ಕಳ್ಳತನವಾಗುತ್ತಿಲ್ಲ. ಆದರೆ, ಜನರು ಕಳ್ಳರಿಗೆ ಮತ ಹಾಕುತ್ತಿಲ್ಲ. ಬಿಜೆಪಿ ಅವರು ಜನರಿಗೆ ಕಳ್ಳರಿಗೆ ವೋಟ್ ಹಾಕಿ ಎಂದು ಹೇಳಲು ಆಗುವುದಿಲ್ಲ ಎಂದು ಕುಟುಕಿದರು.

ವಿಧಾನಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ, ಮುಖಂಡರಾದ ಎಸ್.ಮಹದೇವಯ್ಯ, ಅನಿಲ್ ಥಾಮಸ್, ಶೈಲೇಂದ್ರ, ರುದ್ರಮೂರ್ತಿ, ಅಶೋಕ್, ವಿನಯ್ ಕುಮಾರ್, ಅನಿಲ್ ಕುಮಾರ್, ಕಾರ್ತಿಕ್ ಮರಿಯಪ್ಪ, ಅರ್ಜುನ್ ಪಾರ್ಥ, ಪರಶುರಾಮ್, ಶ್ರೀನಿವಾಸ್, ವಸಂತ್ ಕುಮಾರ್, ಪರಮಾನಂದ ಮೊದಲಾದವರು ಇದ್ದರು.

ರೈತರಿಗೆ ಎಕರೆಗೆ 25 ಸಾವಿರ ಕೊಡಿ

ರಾಜ್ಯದಲ್ಲಿ ಬರಗಾಲ ರೈತರನ್ನು ಕಿತ್ತು ತಿನ್ನುತ್ತಿದೆ. ಕನಿಷ್ಠ ರೈತರಿಗೆ ಎಕರೆಗೆ 25 ಸಾವಿರ ರು. ಕೊಡಿ. ಯಡಿಯೂರಪ್ಪ ಅವರು 25 ಸಾವಿರ ನೀಡಿದ್ದರು. ಅದನ್ನೇ ಮುಂದುವರೆಸಿ ಎಂದು ಹೇಳಿದರೂ ಅದು ಆಗಲಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ರೈತರಿಗೆ ಘೋಷಣೆ ಮಾಡಿರುವುದು ಕೇವಲ 2500 ರು. ಮಾತ್ರ. ಈ ಸರ್ಕಾರ ರೈತ ವಿರೋಧಿಯಾಗಿದೆ. ರೈತರ ಪರವಾಗಿ ನಿಲ್ಲುವ ಸರ್ಕಾರವಿಲ್ಲ. 3 ದಿನಗಳ ಕಾಲ ವಿಶೇಷನ ಸದನ ಎಂದು ಕರೆದು ದೊಡ್ಡ ಚರ್ಚೆ ಮಾಡಿದ್ದರು. ನಮಗೆ ಉತ್ತಮವಾದ ಪ್ಯಾಕೇಜ್ ಕೊಡಬಹುದು ಎಂದು ರೈತರು ಭಾವಿಸಿದ್ದರು. ನಾವು ರೈತರಿಗೆ ಪರಿಹಾರಗಳನ್ನು ಘೋಷಣೆ ಮಾಡಿಸಲು ಬಹಳ ಹೋರಾಟ ಮಾಡಿದ್ದೇವು ಎಂದರು.

ಕಾಂಗ್ರೆಸ್ ಸಿಜೆಪಿ ಫಾಲೋವರ್ಸ್

ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಈಗ ಕಾಕ್ರೋಚ್ ಜನತಾ ಪಾರ್ಟಿಯ ಫಾಲೋವರ್ ಆಗಿದೆ. ಸಿಜೆಪಿ ಇನ್ನೂ ರಾಜಕೀಯ ಪಕ್ಷವಾಗಿ ನೋಂದಣಿ ಆಗಿಲ್ಲ‌. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಬಹುತೇಕ ನಾಯಕರು ಸಿಜೆಪಿಯ ಅಭಿಜಿತ್ ದೀಪ್ಕೆಯ ಫಾಲೋವರ್ಸ್ ಗಳಾಗಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಕುಶಲ ಕಲೆಗಳಿವೆ ತನ್ನದೇ ವೈಶಿಷ್ಟ್ಯತೆ: ಕಿರಣ
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸ್ವಪಕ್ಷದವರ ಆಕ್ರೋಶ