ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಬೆಂಡರವಾಡಿಯಲ್ಲಿ ನಡೆದ ಡಾ.ಜಿ. ಪರಮೇಶ್ವರ 75ನೇ ನೆನಪಿನ ಅಮೃತ ಮಹೋತ್ಸವ ಉದ್ಘಾಟನೆ, ಶಿಕ್ಷಣ ಭೀಷ್ಮ ಎಚ್.ಎಂ.ಗಂಗಾಧರಯ್ಯ ಪ್ರತಿಮೆ ಅನಾವರಣ, ಮಹಿಳಾ ಗೃಹ ಕೈಗಾರಿಕಾ ಘಟಕ ನೂತನ ಕಟ್ಟಡ ಉದ್ಘಾಟನೆ, ಡಾ.ಜಿ.ಪರಮೇಶ್ವರ್ ಸಾಲುಮರದ ರಸ್ತೆ ನಾಮಕರಣ, ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇದಕ್ಕಾಗಿಯೇ ದೇವರೇ ಅಂಬೇಡ್ಕರರನ್ನು ಭೂಮಿಗೆ ಕಳುಹಿಸಿದ್ದಾನೆ ಎಂದೆನಿಸುತ್ತಿದೆ ಎಂದರು.
ಸಮಾನತೆ, ಭಾತೃತ್ವದ ವಿಷಯವನ್ನು ಅಂಬೇಡ್ಕರ್ ಸಂವಿಧಾನದ ಮೊದಲ ಪುಟದಲ್ಲೇ ಹೇಳಿದ್ದಾರೆ. ಅಂಬೇಡ್ಕರ್ ಸಂವಿಧಾನ ಕೊಡದಿದ್ದರೆ ಕೋಟಿ ಕೋಟಿ ಜನ ಬಡತನ ಶೋಷಣೆಯಲ್ಲಿ ನರಳಬೇಕಾಗಿತ್ತು. ವೇದಿಕೆಯಲ್ಲಿ ಕುಳಿತವರು ಕೂಡ ಕೂಲಿ ಮಾಡಬೇಕಿತ್ತು ಎಂದರು.ಸಂವಿಧಾನ, ಶಿಕ್ಷಣ ನಮ್ಮನ್ನು ಬದಲಿಸಿದೆ. ಶಿಕ್ಷಣದಿಂದ ಎಲ್ಲರಿಗೂ ಅನುಕೂಲ ಆಗಿದೆ. ರಾಜಕೀಯದಲ್ಲಿರುವ ಎಲ್ಲರಿಗೂ ಪಕ್ಷ ನಿಮಿತ್ತ. ಬಡವರನ್ನು ಮೇಲೆತ್ತುವ ಕೆಲಸಕ್ಕೆ ಯಾವುದು ಅಡ್ಡಿಯಾಗಬಾರದು ಎಂದರು.
ಜನರಿಗಾಗಿ ನಾವು ಎಂದು ಹೇಳಿದ ಮೊದಲ ಸಂಸ್ಥಾನ ಮೈಸೂರು, ಬಡವರಿಗೆ ಸ್ವಾಭಿಮಾನ ಬದುಕು ಕಟ್ಟಿಕೊಟ್ಟಿದ್ದಾರೆ. ಅಂಬೇಡ್ಕರ್ ಕೊಡುವ ಮೊದಲೇ ಮೈಸೂರು ಸಂಸ್ಥಾನ ಸಮಾನತೆ ಕೊಟ್ಟಿದೆ. ಹೀಗಾಗಿ ಸೂರ್ಯ ಚಂದ್ರ ಇರುವವರೆಗೂ ಸ್ಮರಿಸಬೇಕು ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಬಂಡೀಪುರ ಮತ್ತು ಗುಂಡ್ಲುಪೇಟೆ ಹಸಿರಿಗೆ ಹೆಸರಾಗಿದೆ. ತೆರಕಣಾಂಬಿ, ಹಂಗಳ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೂ ಮೈಸೂರು ರಾಜಮನೆತನಕ್ಕೂ ಅವಿನಭಾವ ಸಂಬಂಧವಿದೆ. ಹೀಗಾಗಿ ಕರೆಯದಿದ್ದರೂ ನಾನು ಇಲ್ಲಿಗೆ ಬಂದು ಹೋಗುತ್ತೇನೆ. ಜಿ.ಪರಮೇಶ್ವರ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೂಲಕ ಶಿಕ್ಷಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇವರ ಸೇವೆ ಈಗ ತುಮಕೂರಿನ ಜತೆಗೆ ಗುಂಡ್ಲುಪೇಟೆಗೂ ವಿಸ್ತರಣೆ ಆಗಿರುವುದು ಹೆಮ್ಮೆಯ ವಿಷಯ ಎಂದರು.
ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ರಾಜು ಸಾವಿರ ಹೊಂಗೆ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಹನೂರು ಜೇತವನದ ಮನೋರಖ್ಖಿತ ಭಂತೇಜಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಗುಲ್ಬರ್ಗ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಎಚ್.ಟಿ.ಪೋತೆ, ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಭಾಗ್ಯವಾನ್, ಸಿದ್ದಾರ್ಥ ವಿವಿ ಮೌಲ್ಯಮಾಪನ ಕುಲಸಚಿವ ಡಾ.ಜಿ.ಗುರುಶಂಕರ್, ಜಾರಿ ನಿರ್ದೇಶನಾಲಯ ನಿರ್ದೇಶಕ ಆನಂದ್‌ಕುಮಾರ್, ಎಸ್ಪಿ ಡಾ.ಬಿ.ಟಿ.ಕವಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕಿ ಡಾ.ಲಕ್ಷ್ಮಮ್ಮ, ಜನಪದ ಕಲಾವಿದ ಮಳವಳಿಮಹದೇವಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಮತ್ತು ಕಾರ್ಯಕ್ರಮಗಳ ಆಯೋಜಕ ಪ್ರೊ.ಮಹದೇವ್‌ಭರಣಿ ಹಾಜರಿದ್ದರು.
ಗುಂಡ್ಲುಪೇಟೆ ತಾಲೂಕಿನ ಬೆಂಡರವಾಡಿಯಲ್ಲಿ ನಡೆದ ಡಾ.ಜಿ.ಪರಮೇಶ್ವರ-75 ನೆನಪಿನ ಉತ್ಸವ ಕಾರ್ಯಕ್ರಮವನ್ನು ಗೃಹ ಸಚಿವ ಜಿ.ಪರಮೇಶ್ವರ ಉದ್ಘಾಟಿಸಿದರು.
ಸಂಸದರಾಗಿ ನೋಡುವ ಬದಲು ಮಹಾರಾಜರೆಂದೇ ನೋಡುತ್ತೇನೆ
ಗುಂಡ್ಲುಪೇಟೆ : ಮೈಸೂರು ಯಧುವಂಶದ ಕೃಷ್ಣದತ್ತ ಚಾಮರಾಜ ಯದುವೀರ್ ಒಡೆಯರನ್ನು ನಾನು ಸಂಸದರಾಗಿ ನೋಡುವ ಬದಲು ಮಹಾರಾಜರೆಂದೇ ನೋಡುತ್ತೇನೆ. ಮೈಸೂರು ಸಂಸ್ಥಾನದ ಬಗ್ಗೆ ಮಾತನಾಡಲು ನಾನು ಚಿಕ್ಕವ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಯಕೆ ವ್ಯಕ್ತಪಡಿಸಿದರು.