ಹಳಿಯಾಳ: ಸಂವಿಧಾನ ದಿನದಂದು ಪೀಠಿಕೆ ಓದುವ ಸಂಕಲ್ಪದೊಂದಿಗೆ ಪೀಠಿಕೆಯ ಮೌಲ್ಯಗಳನ್ನು ಬದುಕುವ ಹಾಗೂ ಇತರರಿಗೂ ಬದುಕಿಸಲು ಅವಕಾಶ ಕಲ್ಪಿಸುವ ಸಂಕಲ್ಪ ಮಾಡೋಣ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಸುನಿಲ್ ಹೆಗಡೆ ಕರೆ ನೀಡಿದರು.
ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದನ್ನವರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪುಸ್ತಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.
ನಂತರ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಮೂಲಕ ಸಂವಿಧಾನದ ಆಶಯಗಳು, ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ತತ್ವಗಳನ್ನು ಸ್ಮರಿಸಲಾಯಿತು.ಜಿಲ್ಲಾ ವಿಶೇಷ ಆಹ್ವಾನಿತ ಮಂಗೇಶ ದೇಶಪಾಂಡೆ, ಎಸ್‌ಸಿ ಮೋರ್ಚಾ ಅಧ್ಯಕ್ಷ ಯಲ್ಲಪ್ಪ ಹೊನ್ನೋಜಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಗೀತಾ ಜಾವಳೇಕರ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಇಲಿಯಾಸ್ ಬಳಗಾರ, ಪಾಂಡು ಚಲವಾದಿ, ತಾನಾಜಿ ಪಟ್ಟೇಕರ, ನಾರಾಯಣ ಕೇಸರೆಕರ, ಮಾರುತಿ ಪೆಟ್ನೇಕರ, ಪ್ರಶಾಂತ್ ನಾಯ್ಕ, ಹನುಮಂತ ಚಲವಾದಿ, ಮಹಾದೇವ ಮಾದರ, ಸಂತಾನ ಸಾವಂತ, ನಾಮದೇವ ಮಿರಾಶಿ, ಜ್ಞಾನೇಶ ಮಾನಗೆ, ನಾಗೇಂದ್ರ ಉಪ್ಪಾರ, ಹರಿದಾಸ ಜಡಿ, ಮಂಜು ಗೌಡ, ಸಂಜು ಮೋರೆ, ಜಗದೀಶ್ ಕೋಚಾರಿ, ಶಾನೂರ ವಡ್ಡರ, ಜಯಲಕ್ಷ್ಮಿ ಚೌವ್ಹಾಣ್, ವೀಣಾ ಕುಂಬಾರ, ಮಂಜುಳಾ ಮೋರೆ, ಮಾಲಾ ಹುಂಡೇಕರ, ಈರವ್ವಾ ಕೋರವರ ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.