ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ಇಂಜಿನಿಯರ್, ವಿಜ್ಞಾನಿಗಳ ಕೊಡುಗೆ ಅಪಾರ: ಡಾ.ನೀರಜ್ ಕುಮಾರ್

KannadaprabhaNewsNetwork |  
Published : May 11, 2026, 02:00 AM IST
9ಕೆಎಂಎನ್ ಡಿ13 | Kannada Prabha

ಸಾರಾಂಶ

ಡಾ. ಅಬ್ದುಲ್ ಕಲಾಂ ಅವರು ವಿಜ್ಞಾನವು ಮಾನವನಿಗೆ, ಮಾನವ ಜಗತ್ತಿಗೆ ದೇವರು ನೀಡಿರುವ ಸುಂದರ ಕೊಡುಗೆ ಎಂದು ಹೇಳಿದ್ದರು. ಮಾನವನ ನಾಗರಿಕತೆಯ ಪ್ರಗತಿಯು ರಸ್ತೆ, ರೈಲು ವಿದ್ಯುತ್ ಮತ್ತು ಇಂಟರ್‌ನೆಟ್‌ಗಳ ಕೊಂಡಿಯಿಂದ ಬೆಸೆದುಕೊಂಡಿದೆ. ಈ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯಿಂದ ಕೂಡಿ ವ್ಯವಸ್ಥೆ ಇನ್ನೂ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಇದಕ್ಕೆ ಇಂಜಿನಿಯರ್ ಮತ್ತು ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ ಎಂದು ಬೆಂಗಳೂರಿನ ಅಕ್ರಡೈನ್ ಪ್ರೈ.ಲಿ.ನ ಸಂಸ್ಥಾಪಕ ಡಾ.ನೀರಜ್‌ಕುಮಾರ್ ತಿಳಿಸಿದರು.

ತಾಲೂಕಿನ ಸುಂಡಹಳ್ಳಿ ಬಳಿ ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ 2ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿ, ಡ್ರೋನ್ ತಯಾರು ಮಾಡುವ ತಂತ್ರಜ್ಞಾನ ಅತ್ಯಾವಶ್ಯಕ. ಈ ಕಾರ್ಯಾಗಾರ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಇಂಟೆಲ್ ಸಂಸ್ಥೆಯ ಇಂಜಿನಿಯರಿಂಗ್ ವಿಭಾಗದ ನಿರ್ದೇಶಕ ಇಸ್ಮಾಯಿಲ್ ಇಬ್ರಾಹಿಂ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಡೆಸುತ್ತಿರುವ ಕಾರ್‍ಯಾಗಾರ ಅತ್ಯಂತ ಮಹತ್ವದ್ದಾಗಿದೆ. ನಾನೂ ಕೂಡ ಗ್ರಾಮೀಣ ಭಾಗದಲ್ಲೇ ವ್ಯಾಸಂಗ ಮಾಡಿ ಟಾಟಾ ಕಂಪನಿ ಸೇರಿದ್ದೆ, ಅದರಲ್ಲಿ ಹಾರ್ಡ್ವೇರ್ ಡಿಸೈನ್ ಸಾಫ್ಟವೇರ್ ಸೆಕ್ಯೂರಿಟಿ ಥಿಯರಿ ಎಲೆಕ್ಟ್ರೋ ಮ್ಯಾಗ್ನೆಟಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ನಾನು ಬೆಳೆದು ಈಗ ಇಂಟೆಲ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ ಎಂದು ಹೇಳಿದರು.

ಸಿಇಆರ್‌ಟಿ ಕಾರ್‍ಯದರ್ಶಿ ಡಾ.ಸಿ.ಜೆ. ಗಂಗಾಧರಗೌಡ ಮಾತನಾಡಿ, ಶಿಕ್ಷಣವು ತರಗತಿಗಳು ಮತ್ತು ಪ್ರಯೋಗ ಶಾಲೆಯಿಂದಾಚೆಗೆ ಬೆಳೆಯಬೇಕು. ಈ ರೀತಿಯ ಕಾನ್ಪರೆನ್ಸ್‌ಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪರಿಣಿತರೊಡನೆ ಸಂವಾದ ಮಾಡಲು, ಜ್ಞಾನವೃದ್ಧಿ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಸಿಇಆರ್‌ಟಿ ಅಧ್ಯಕ್ಷ ಡಾ. ಸಂಗಮೇಶ್ವರ್ ಮಾತನಾಡಿ, ಡಾ. ಅಬ್ದುಲ್ ಕಲಾಂ ಅವರು ವಿಜ್ಞಾನವು ಮಾನವನಿಗೆ, ಮಾನವ ಜಗತ್ತಿಗೆ ದೇವರು ನೀಡಿರುವ ಸುಂದರ ಕೊಡುಗೆ ಎಂದು ಹೇಳಿದ್ದರು. ಮಾನವನ ನಾಗರಿಕತೆಯ ಪ್ರಗತಿಯು ರಸ್ತೆ, ರೈಲು ವಿದ್ಯುತ್ ಮತ್ತು ಇಂಟರ್‌ನೆಟ್‌ಗಳ ಕೊಂಡಿಯಿಂದ ಬೆಸೆದುಕೊಂಡಿದೆ. ಈ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯಿಂದ ಕೂಡಿ ವ್ಯವಸ್ಥೆ ಇನ್ನೂ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ ಎಂದು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎ.ಎಸ್.ಶ್ರೀಕಂಠಪ್ಪ, ಇಂಡ್ ಸಿ ವಿಭಾಗದ ಮುಖ್ಯಸ್ಥೆ ಡಾ.ಎ.ಪಿ.ಸವಿತಾ ಅವರು ವಿವಿಧ ವಿಷಯಗಳ ಕುರಿತು ಮಾತನಾಡಿದರು. ಸಮ್ಮೇಳನದಲ್ಲಿ ವಿವಿಧ ದೇಶಗಳಿಂದ ಸುಮಾರು 60ಕ್ಕೂ ಹೆಚ್ಚು ಸಂಶೋಧನಾರ್ತಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದರಸಗಳ ಆಧುನೀಕರಣಕ್ಕೆ ಕ್ರಮ ವಹಿಸಿ: ಡಿಸಿ
ಚಿನ್ನ ಗಿರವಿ ಇಡುವ ನಿಯಮಗಳ ಸಡಿಲಿಸಿ: ಶಾಂತಕುಮಾರ