ದೇವರ ದಾಸಿಮಯ್ಯರ ಕೊಡುಗೆ ಮರೆಯಲಾಗದು

KannadaprabhaNewsNetwork |  
Published : Apr 10, 2025, 01:01 AM IST
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ  | Kannada Prabha

ಸಾರಾಂಶ

ವಿಶ್ವದ ಪ್ರಥಮ ವಚನಕಾರರಾದ ದೇವರ ದಾಸಿಮಯ್ಯನವರ ವಚನಗಳು ಮಾನವನ ಅಂತರಂಗವನ್ನು ಅರ್ಥ ಮಾಡಿಕೊಂಡು ಪಾವನವಾಗುವ ಸಾಹಿತ್ಯವನ್ನು ನೀಡಿದ ಮಹಾನ್ ವಚನಕಾರರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿಶ್ವದ ಪ್ರಥಮ ವಚನಕಾರರಾದ ದೇವರ ದಾಸಿಮಯ್ಯನವರ ವಚನಗಳು ಮಾನವನ ಅಂತರಂಗವನ್ನು ಅರ್ಥ ಮಾಡಿಕೊಂಡು ಪಾವನವಾಗುವ ಸಾಹಿತ್ಯವನ್ನು ನೀಡಿದ ಮಹಾನ್ ವಚನಕಾರರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.ಕ

ಕಸಾಪ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರ ದಾಸಿಮಯ್ಯನವರು ಜನಪದ ಕಾಳಜಿವುಳ್ಳ ಶ್ರೇಷ್ಠ ವಚನಕಾರರು. ಮನುಕುಲವೇ ಗೌರವಿಸುವ ವಸ್ತ್ರ ನಿರ್ಮಿಸುವ ಕಾಯಕವನ್ನು ಮಾಡುವ ಮೂಲಕ ವಿಶ್ವದ ಮಾನವರು ಗೌರವದಿಂದ ಬದುಕುವ ರೀತಿಯ ಕೌಶಲ್ಯವನ್ನು ನಿರ್ಮಿಸಿದ ದೇವರ ದಾಸಿಮಯ್ಯನವರ ಕೊಡುಗೆ ಮರೆಯಲಾಗದು. ಇಡೀ ವಿಶ್ವವೇ ದೇವರ ದಾಸಿಮಯ್ಯನವರ ಕೊಡುಗೆಗಳನ್ನು ಚಿಂತಿಸುವ ಸಂಶೋಧಿಸುವ ಕಾರ್ಯದಲ್ಲಿ ತೊಡಗಿದೆ. ಅವರ ಸುಮಾರು 176 ವಚನಗಳು ದೊರೆತಿದ್ದು ಮತ್ತಷ್ಟು ಸಂಶೋಧನೆಗಳ ಅಗತ್ಯವಿದೆ. 11ನೇ ಶತಮಾನದಲ್ಲಿ ವಿಶೇಷವಾಗಿ ರಚಿಸಿದವರು. ಕಾಯಕ ನಿಷ್ಠೆಯನ್ನು ಬೋಧಿಸುವ ಮೂಲಕ ಮಾನವನ ದೈಹಿಕ ಮತ್ತು ಮಾನಸಿಕ ಶ್ರಮ ಸಮಾಜಕ್ಕೆ ಅರ್ಪಿತವಾಗಬೇಕು ಎಂಬುದನ್ನು ತಿಳಿಸಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಶಿಕ್ಷಕರಾದ ಕೃಷ್ಣ ಮತ್ತು ನಟರಾಜ್ ಉದ್ಘಾಟಿಸಿದರು. ದೇವಾಂಗ ಸಮಾಜದ ವೆಂಕಟಯ್ಯನ ಛತ್ರದ ವೆಂಕಟೇಶ್, ಪತ್ರಕರ್ತ ಚಂದ್ರಶೇಖರ್, ರಾಮಸಮುದ್ರದ ಕುಮಾರ್, ನಟರಾಜ್, ಅನಂತ್, ಉಮೇಶ್, ಶ್ರೀಧರ್ ,ಬಾಬು, ಮುರಳಿ, ರಾಜೇಶ, ನಾಗೇಂದ್ರ ಮುರಳಿ ಕೃಷ್ಣ ಗೋಪಾಲಕೃಷ್ಣ, ಮಧು, ಕಸಾಪ ಸರಸ್ವತಿ, ಪದ್ಮ ಪುರುಷೋತ್ತಮ್ ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು. ಕುಮಾರಿ ಆದ್ಯರಿಗೆ ಪುಸ್ತಕ ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ