ದೇಶದಲ್ಲಿ ಶಾಂತಿ ನೆಲೆಸಲು ಜೈನ ಮುನಿಗಳ ಕೊಡುಗೆ ಅಪಾರ

KannadaprabhaNewsNetwork |  
Published : Jul 22, 2025, 12:15 AM IST
ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇಶದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಲು ಜೈನ ಮುನಿಗಳ ಕೊಡುಗೆ ಅಪಾರ.

ಹಾವೇರಿ: ಜೈನ ಧರ್ಮ ಶ್ರೇಷ್ಠ ಧರ್ಮವಾಗಿದ್ದು, ಎಲ್ಲ ಶ್ರಾವಕರು ಧರ್ಮಾನುರಾಗಿಗಳಾಗಬೇಕು. ಸಮಯದ ಸಾರ್ಥಕ ಮಾಡಿಕೊಳ್ಳಬೇಕು ಹಾಗೂ ಭಾವ ಆದಾಗ ದಾನ ಮಾಡಬೇಕು ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜ ತಿಳಿಸಿದರು.ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಚಾತುರ್ಮಾಸ ಕಲಶ ಸ್ಥಾಪನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಅಹಂಕಾರ ಇರುವಲ್ಲಿ ಬಹಳ ಕಾಲ ಸಂಪತ್ತು ನಿಲ್ಲುವುದಿಲ್ಲ. ಹಾಗಾಗಿ ಎಲ್ಲರೂ ದಾನ- ಧರ್ಮ ಮಾಡಬೇಕು. ಆಹಾರ, ಔಷಧಿ, ಶಾಸ್ತ್ರ ಹಾಗೂ ಅಭಯದಾನ ಹೀಗೆ ನಾಲ್ಕು ಪ್ರಕಾರದ ದಾನಗಳಿವೆ. ತಮ್ಮ ಶಕ್ತಾನುಸಾರ ದಾನ ಮಾಡಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ದೇಶದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಲು ಜೈನ ಮುನಿಗಳ ಕೊಡುಗೆ ಅಪಾರ. ಜಗತ್ತಿನ ನಾನಾ ದೇಶಗಳನ್ನು ನೋಡಲಾಗಿ ಜೈನ ಮುನಿಗಳು ಇರುವಲ್ಲಿ ಸಮೃದ್ಧಿ ಇದೆ ಎಂದರೆ ತಪ್ಪಾಗಲಾರದು ಎಂದರು. ಎಲ್ಲ ಧರ್ಮದವರು ಅನೇಕ ಕೊಡುಗೆ ನೀಡಿದ್ದಾರೆ. ಜೈನ ಮುನಿಗಳು ಇರುವಲ್ಲಿ ಸಾಮರಸ್ಯವಿರುತ್ತದೆ. ಸ್ವಾಮಿಗಳು ನನಗೆ ಧರ್ಮದ ಕಾರ್ಯ ಮಾಡಬೇಕು ಎಂದು ಆಶೀರ್ವಾದ ಮಾಡಿದ್ದಾರೆ. ನಾನು ಸದಾ ಸಮಾಜದ ಹಿತವನ್ನು ಬಯಸುತ್ತೇನೆ ಎಂದರು. ಆಕರ್ಷಕ ಮೆರವಣಿಗೆ: ಪಾಲಕಿಯಲ್ಲಿ ಜಿನಬಿಂಬದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು. ಸುವರ್ಣ ಕಲಶ ಹೊತ್ತ ಮಹಿಳೆಯರು ಹಾಗೂ ಧರ್ಮದ ಧ್ವಜ ನೋಡುಗರನ್ನು ಆಕರ್ಷಣೆ ಮಾಡಿದವು. ಹಾವೇರಿ ಭಗವಾನ 1008 ನೇಮಿನಾಥ ದಿಗಬಂದ ಜೈನ ಮಂದಿ ಕಮಿಟಿ ಅಧ್ಯಕ್ಷ ಚಂದ್ರನಾಥ ಕಳಸೂರ ಅವರು ಅಧ್ಯಕ್ಷತೆ ವಹಿಸಿದ್ದರು. ಬ್ಯಾಡಗಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಸದಲಗಾದ ಮಾಣಿಕ ಶ್ರೀಪಾಲ ಚಂದಗಡೆ ಹಾಗೂ ಪ್ರತಿಮಾಧಾರಿ ಬಾಲಬ್ರಹ್ಮಚಾರಿ ಮಹಾವೀರ ಭಯ್ಯಾಜಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ಗದ್ದಿಗೌಡ್ರ, ಹಾವೇರಿ 1008 ಆದಿನಾಥ ಮೂರ್ತಿಪೂಜಕ ಶ್ವೇತಾಂಬರ ಸಂಘದ ಅಧ್ಯಕ್ಷ ಭರತ್ ಜೈನ, ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಡಾ. ನಿರಜಾ ನಾಗೇಂದ್ರಕುಮಾರ, ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರ್ಯ ಸಮಿತಿ ಸದಸ್ಯ ಎಸ್.ಎ. ವಜ್ರಕುಮಾರ, ಭರತರಾಜ ಹಜಾರಿ, ವಿಜಯಕುಮಾರ ಸಾತಗೊಂಡ, ಮಹಾವೀರ ಕಳಸೂರ, ನವೀನ ಜಗಶೆಟ್ಟಿ, ಮಂಜಪ್ಪ ತಡಸದ, ಪುಷ್ಪಾ ಕಳಸೂರ, ಪರಿಮಳಾ ಜೈನ್ ಸೇರಿದಂತೆ ಇತರರು ಇದ್ದರು.

ಉಗಾರ ಬದ್ರುಕನ ಅಭಯ ಹವಲೆ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಜಿನ ಮಂದಿರದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ