ಮಠ-ಮಾನ್ಯಗಳಿಂದ ಶಿಕ್ಷಣಕ್ಕೆ ಕೊಡುಗೆ ಅಪಾರ

KannadaprabhaNewsNetwork |  
Published : Oct 29, 2025, 01:15 AM IST
ರಾಜ್ಯದ ಮಠಮಾನ್ಯಗಳಿಂದ ಶಿಕ್ಷಣಕ್ಕೆ ಅಪಾರ ಕೊಡುಗೆ-ಜಗದೀಶ್‌ಶೆಟ್ಟರ್ | Kannada Prabha

ಸಾರಾಂಶ

ರಾಜ್ಯದಲ್ಲಿ ಶಿಕ್ಷಣ ಕ್ರಾಂತಿಯಾಗಬೇಕಾದರೆ ಮಠ, ಮಾನ್ಯಗಳ ಕೊಡುಗೆ ಅಪಾರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್‌ ಶೆಟ್ಟರ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ರಾಜ್ಯದಲ್ಲಿ ಶಿಕ್ಷಣ ಕ್ರಾಂತಿಯಾಗಬೇಕಾದರೆ ಮಠ, ಮಾನ್ಯಗಳ ಕೊಡುಗೆ ಅಪಾರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್‌ ಶೆಟ್ಟರ್ ಹೇಳಿದರು.

ನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು. ಜೆಎಸ್‌ಎಸ್ ಆಸ್ಪತ್ರೆ, ಸಂಘ ಸಂಸ್ಥೆಗಳು, ಹಾಗೂ ಭಕ್ತ ವೃಂದ, ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸುತ್ತೂರು, ಲಿಂಗೈಕ್ಯ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಶತ್ತೋತ್ತರ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಸಿ ಅವರು ಮಾತನಾಡಿದರು.

ಹನ್ನೊಂದನೆಯ ಶತಮಾನದಲ್ಲಿ ಸ್ಥಾಪನೆಗೊಂಡ ಸುತ್ತೂರು ಶ್ರೀ ಮಠದ ಬೆಳವಣಿಗೆ ಹಾಗೂ ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದ್ದಾರೆ. ಹಿಂದುಳಿದ ಚಾಮರಾಜನಗರ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದವರು ರಾಜೇಂದ್ರ ಸ್ವಾಮೀಜಿ. ಕೆಲಸವೇ ಪೂಜ್ಯ, ನಿಸ್ವಾರ್ಥ ಸೇವೆಯೇ ಸೇವೆ ಎಂದು ಭಾವಿಸಿದವರು ಎಂದರು.

ತಮ್ಮ ಬದುಕನ್ನೇ ಸೇವೆಗಾಗಿ ಮುಡುಪಿಟ್ಟು, ತ್ರಿವಿಧ ದಾಸೋಹಗಳನ್ನು ಅಳವಡಿಸಿ ಬಡ ಜನರ ದೀನದಲಿತರ ಹಾಗೂ ವೈಚಾರಿಕತೆಯ ಶಿಕ್ಷಣಕ್ಕಾಗಿ ಭದ್ರ ಬುನಾದಿ ಹಾಕಿದ್ದಾರೆ. ಆ ಬುನಾದಿಯಿಂದಾಗಿಯೇ ಜೆಎಸ್‌ಎಸ್ ಇಂದು ಹೆಮ್ಮರವಾಗಿ ಬೆಳೆಯಲು ಕಾರಣವಾಯಿತು ಎಂದರು.

ಜೆಎಸ್‌ಎಸ್ ಲಕ್ಷಾಂತರ ವಿದ್ಯಾರ್ಥಿಗಳಿಗೆ, ಸಾವಿರಾರು ಜನರಿಗೆ ಆಶ್ರಯ ನೀಡಿದೆ, ಜೆಎಸ್‌ಎಸ್ ಸಂಸ್ಥೆ ಜಗತ್‌ಪ್ರಸಿದ್ದಿಯಾಗಿದೆ ಎಂದರೆ ಅದಕ್ಕೆ ರಾಜೇಂದ್ರಮಹಾ ಸ್ವಾಮೀಜಿ ಹಾಕಿದ ಬುನಾದಿಯೇ ಕಾರಣ. ಬುದ್ದ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸುತ್ತೂರು ಮಠ ಸಮಾಜದಲ್ಲಿ ಶಾಂತಿ, ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು,

ಆಶೀರ್ವಚನ ನೀಡಿದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ರಾಜೇಂದ್ರ ಶ್ರೀಗಳು ತಮ್ಮ ಬದುಕನ್ನೇ ಜನರೆ ಒಳಿತಿಗಾಗಿ ಮುಡಿಪಾಗಿಟ್ಟವರು, ಅದರಲ್ಲೂ ಮೈಸೂರು-ಚಾಮರಾಜನಗರ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಶಿಕ್ಷಣಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.

ರಾಜ್ಯದ ಮಠಮಾನ್ಯಗಳು ಸಂಕಲ್ಷ ಮಾಡಿದ್ದರಿಂದಾಗಿಯೇ ರಾಜ್ಯದಲ್ಲಿ ಇಂದು ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ, ರಾಜ್ಯದಲ್ಲಿ ಒಂದೊಂದು ಮೂಲೆಯಲ್ಲಿ ಒಂದೊಂದು ಮಠ ಶೈಕ್ಷಣಿಕ ಕ್ರಾಂತಿಗೆ ಕೊಡುಗೆ ನೀಡಿದೆ . ಅವರ ದೂರ ದೃಷ್ಟಿಯ ಫಲದಿಂದಾಗಿ ನಮ್ಮ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಉದ್ಯೋಗದಲ್ಲಿ ಇದ್ದಾರೆ ಎಂದು ತಿಳಿಸಿದರು. ಲೋಕಕಾರುಣ್ಯದ ಸಂತ :

ಶಿವರಾತ್ರಿ ರಾಜೇಂದ್ರ ಸ್ವಾಮಿಗಳಿಗೆ ನುಡಿ ನಮನ ಸಲ್ಲಿಸಿ ಮಾತನಾಡಿದ ಸಾಹಿತಿ ಪ್ರೊ. ಎಂ. ಕೃಷ್ಣೇಗೌಡ ಅವರು, ರಾಜೇಂದ್ರ ಸ್ವಾಮೀಜಿ ಲೋಕಕಾರುಣ್ಯದ ಸಂತ ಮತ್ತು ಜೀವನವನ್ನು ಸಮಾಜದ ಸೇವೆಗಾಗಿಯೇ ಮುಡಿಪಾಗಿಟ್ಟವರು.

ಅವರ ಸೇವೆಯ ಹಿಂದೆ ಅಡಗಿದ್ದು ಲೋಕ ಕಾರುಣ್ಯ, ಶಿಕ್ಷಣದಿಂದಲೇ ಮಾತ್ರ ಅಭಿವೃದ್ದಿ ಸಾಧ್ಯ ಎಂದು ತಿಳಿದು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಆದ್ದರಿಂದಲೇ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ ಆಯಿತು ಎಂದರು.

ರಾಜೇಂದ್ರ ಸ್ವಾಮಿಗಳ ೭೦ನೇ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿದ್ದ ರಾಷ್ಟ್ರಕವಿ ಕುವೆಂಪು ಅವರೇ ಹೇಳುವಂತೆ ಅನ್ನ ದಾನ, ವಿದ್ಯಾ ದಾನದಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವವರು ರಾಜೇಂದ್ರ ಶ್ರೀಗಳು ಎಂದಿದ್ದರು ಅಂತಹ ಮಹಾನ್ ಸಂತ ರಾಜೇಂದ್ರ ಶ್ರೀಗಳು ಎಂದರು.

ಸೇವೆಯಲ್ಲಿಯೇ ಭಗವಂತನನ್ನು ಕಂಡವರು ರಾಜೇಂದ್ರ ಸ್ವಾಮೀಜಿ, ಗ್ರಾಮೀಣ ಭಾಗದ ಜನರಿಗೆ ಆಶ್ರಯದಾತರಾಗಿ, ತಾಯ್ತನದ ಮನಸ್ಸನ್ನು ಹೊಂದಿದ್ದರು, ಇವರ ಸೇವಾ ಶಕ್ತಿಯೇ ನಾಡಿನಾದ್ಯಂತ ಅಲ್ಲದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಂಸ್ಥೆಯನ್ನು ಸ್ಥಾಪಿಸಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಸಂಸದ ಸುನೀಲ್ ಬೋಸ್ ಮಾತನಾಡಿ ಶಿಕ್ಷಣ ಉತ್ತಮ ನಾಗರೀಕನ್ನಾಗಿಸುವ ನಿಟ್ಟಿನಲ್ಲಿ ಸಾಗಬೇಕು, ಅಂತಹ ಸಾಲಿಗೆ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಸೇರುತ್ತದೆ, ಇದಕ್ಕೆ ಪೂಜ್ಯ ರಾಜೇಂದ್ರಶ ಶ್ರೀಗಳು ಕಾರಣ ಎಂದರು.ಅಧ್ಯಕ್ಷತೆಯನ್ನು ಶಾಸಕ ಸಿ,ಪುಟ್ಟರಂಗಶೆಟ್ಟಿ ವಹಿಸಿದ್ದರು, ಶಾಸಕ ಗಣೇಶ್‌ಪ್ರಸಾದ್, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿದರು.

ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿಪತ್ರ ಹಾಗೂ ದತ್ತಿ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಚುಡಾ ಅಧ್ಯಕ್ಷ ಮಹಮ್ಮದರ್ ಅಸ್ಗರ್, ನಗರಸಭಾ ಅಧ್ಯಕ್ಷ ಸುರೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್. ವಿ. ಚಂದ್ರು, ಚಾಮುಲ್ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ನಗರಸಭಾ ಸದಸ್ಯೆ ಕುಮುದಾ ಇತರರು ಇದ್ದರು,

ಕಾರ್ಯಕ್ರಮಕ್ಕೂ ಮುನ್ನ, ಚಾಮರಾಜನಗರದ ಸಂಘ ಸಂಸ್ಥೆಗಳು, ಭಕ್ತವೃಂದ, ಸಾರ್ವಜನಿಕರು ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಡಾ. ಶ್ರೀ ಶಿವರಾತ್ರಿರಾಜೇಂದ್ರ ಮಹಾಸ್ವಾಮಿಗಳವರ ಭಾವಚಿತ್ರದ ಮೆರವಣಿಗೆಯನ್ನು ಬೆಳ್ಳಿರಥದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.

ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ಹರವೆ ವಿರಕ್ತ ಮಠದ ಸರ್ಪ ಭೂಷಣಸ್ವಾಮೀಜಿ, ನಗರದ ವಿರಕ್ತ ಮಠದ ಚನ್ನಬಸವಸ್ವಾಮೀಜಿ, ಮೂಡುಗೂರು ಮಠದ ಇಮ್ಮಡಿ ಉದ್ದಾನಸ್ವಾಮೀಜಿ, ಕಬ್ಬಹಳ್ಳಿ ಮಠದ ಗುರುಸಿದ್ದಸ್ವಾಮೀಜಿ, ಮುಖಂಡರು, ಜನಪ್ರತಿನಿಧಿಗಳು ಇದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು