ದಾಬಸ್‍ಪೇಟೆ: ಕರ್ನಾಟಕದಲ್ಲಿರುವ ಮಠ,ಮಾನ್ಯಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ಪಾಲನಹಳ್ಳಿ ಮಠದ ಕೊಡುಗೆಯೂ ಅಪಾರವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಸ್ವಾಮೀಜಿಗಳಿಗೆ, ಗುರುಗಳಿಗೆ ಮಹತ್ವದ ಸ್ಥಾನ ನೀಡಿದ್ದೇವೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು. ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠಕ್ಕೆ ಭೇಟಿ ನೀಡಿ ಮಠಾಧೀಶರಾದ ಡಾ.ಸಿದ್ಧರಾಜು ಸ್ವಾಮೀಜಿಯವರ ಆಶೀರ್ವಾದ ಪಡೆದು ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನೂ ಸನ್ಮಾರ್ಗದಲ್ಲಿ ನಡೆಯಬೇಕಾದರೆ ಗುರುಗಳ ಆಶೀರ್ವಾದ ಇರಲೇಬೇಕು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಮಠಗಳ ಅಭಿವೃದ್ಧಿಗೆ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಸಹಕಾರ ನೀಡುತ್ತಿದ್ದೇನೆ. ಮುಂದೆಯೂ ನೀಡಲಿದ್ದೇನೆ. ದೇವರು ಹಾಗೂ ಎಲ್ಲ ಮಠಾಧೀಶರ ಆಶೀರ್ವಾದ ಕ್ಷೇತ್ರದ ಜನತೆಯ ಮೇಲೆ ಇರಲಿದೆ ಎಂದರು.