ನಾಡಿನ ಸಂಸ್ಕೃತಿಗೆ ಪಾರಿಜಾತ ಕಲಾವಿದರ ಕೊಡುಗೆ ಅಪಾರ: ಬ್ರಹ್ಮಾನಂದ ಶ್ರೀ

KannadaprabhaNewsNetwork |  
Published : Feb 21, 2025, 12:49 AM IST
ಲೋಕಾಪುರ ಪಟ್ಟಣದಲ್ಲಿ ಶ್ರೀ ಲೋಕೇಶ್ವರ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ಬೆಂಗಳೂರ ಇವರ ಸಹಯೋಗದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಶ್ರೀ ಕೃಷ್ಣ ಪಾರಿಜಾತ ಉತ್ಸವಕ್ಕೆ ಬ್ರಹ್ಮಾನಂದ ಶ್ರೀಗಳು ಚಾಲನೆ ನೀಡಿದರು. ಈ ವೇಳೆ ಪಂ.ಜಯರಾಮ ತಳಗಟ್ಟಿ, ಅಗಡಿಯ ಶಂಕರ ಭಟ್ಟರು ಇತರರು ಇದ್ದರು. | Kannada Prabha

ಸಾರಾಂಶ

ನಾಡಿನ ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿದವರಲ್ಲಿ ಪಾರಿಜಾತ ಕಲಾವಿದರು ಮೊದಲಿಗರು ಎಂದು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ನಾಡಿನ ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿದವರಲ್ಲಿ ಪಾರಿಜಾತ ಕಲಾವಿದರು ಮೊದಲಿಗರು ಎಂದು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ಹೇಳಿದರು.

ಪಟ್ಟಣದ ಜ್ಞಾನೇಶ್ವರ ಮಠದಲ್ಲಿ ಶ್ರೀಮತ ಪರಮಹಂಸ ಪೂರ್ಣಾನಂದ ಶ್ರೀಗಳ ಆರಾಧನಾ ಮಹೋತ್ಸವ ಅಂಗವಾಗಿ ಶ್ರೀ ಲೋಕೇಶ್ವರ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಶ್ರೀಕೃಷ್ಣ ಪಾರಿಜಾತ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಾರಿಜಾತ ರಂಗಭೂಮಿ ಕಲಾವಿದರ ನೂರಾರು ಬದುಕಿನ ಭವಣೆಯಲ್ಲಿ ಕಲಾರಸಿಕರ ಮನಸ್ಸು ಸಂತಸಗೊಳಿಸುವ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ಎಷ್ಟೋ ಕಲಾವಿದರು ಪಾರಿಜಾತಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ಅಗಡಿಯ ಶಂಕರ ಭಟ್ಟರು ಮಾತನಾಡಿ, ಆಧುನಿಕ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಅವನತಿಯ ಹಾದಿ ಹಿಡಿದಿರುವ ಪಾರಿಜಾತ ಉಳಿವಿಗೆ ಎಷ್ಟೋ ಕಲಾವಿದರ ಅಪಾರ ಕೊಡುಗೆ ನೀಡಿದ್ದಾರೆ, ಎಷ್ಟೋ ಕಲಾವಿದರು ಬಡಕುಟುಂಬದಿಂದ ಬಂದವರಿದ್ದಾರೆ. ಪಾರಿಜಾತ ಮಾಡುತ್ತಾರೆ ಹೊರತು ಹಣ ಗಳಿಸಲು ಅಲ್ಲ, ಪಾರಿಜಾತವೇ ಕಲಾವಿದರ ಉಸಿರು ಇವತ್ತಿನ ದೃಶ್ಯ ನೋಡಿದರೆ ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಪಂ.ಜಯರಾಮ ತಳಗಟ್ಟಿ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಯಲ್ಲವ್ವ ರೊಡ್ಡಪ್ಪನವರ, ನಾರಾಯಣ ಪತ್ತಾರ, ಗ್ಯಾನಪ್ಪ ಯತ್ನಟ್ಟಿ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ಕನಸಗೇರಿ ಗ್ರಾಮದ ಶ್ರೀ ರಾಘವೇಂದ್ರ ಶ್ರೀಕೃಷ್ಣ ಪಾರಿಜಾತ ಕಲಾ ಸಂಘದ ವತಿಯಿಂದ ಪಾರಿಜಾತ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.

ಸಂಘದ ಅಧ್ಯಕ್ಷ ಕೃಷ್ಣಾ ಭಜಂತ್ರಿ, ಕೆ.ಪಿ.ಯಾದವಾಡ, ಡಾ. ಲೋಕಣ್ಣ ಭಜಂತ್ರಿ, ಮುದಕಪ್ಪ ಭಜಂತ್ರಿ, ಪ್ರವೀಣ ಮುಷ್ಠಿಗೇರಿ, ಕೃಷ್ಣಾ ಪೂಜಾರಿ ಹಾಗೂ ಅಪಾರ ಸಂಖ್ಯೆಯ ಕಲಾವಿದರು ಮಠದ ಭಕ್ತರು ಇದ್ದರು.

PREV

Recommended Stories

ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ
ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೀರು ಕಲುಷಿತ