ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹರಿವಾಯು ಗುರು ಸೇವಾ ಟ್ರಸ್ಟ್ ವತಿಯಿಂದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಆರಂಭಗೊಂಡಿರುವ 25ನೇ ವರ್ಷದ ಹರಿದಾಸ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಭೀಮ ನದಿ ಉಕ್ಕಿ ಹರಿದು ಇಡಿ ಗ್ರಾಮವೇ ಕೊಚ್ಚಿಕೊಂಡು ಹೋದಾಗ ಅಲ್ಲಿಗೆ ಭೇಟಿ ನೀಡಿದ ಪೇಜಾವರ ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ವಿಶ್ವೇಶ ತೀರ್ಥ ಶ್ರೀಪಾದಂಗಳವರು ನೆಲೆ ಕಳೆದುಕೊಂಡ ಎಲ್ಲರಿಗೂ ಮನೆಗಳನ್ನು ಕಟ್ಟಿಸಿ ಜೊತೆಗೆ ಒಂದೊಂದು ಹಸುಗಳನ್ನು ನೀಡಿದರು. ಆಗ ಆ ಗ್ರಾಮದ ಹೆಸರೆ ಗೋವಿಂದಪುರ ಎಂದು ಬದಲಾಯಿತು. ಯಾವ ಸರ್ಕಾರಗಳು ಇಂತಹ ಯೋಜನೆಗಳನ್ನು ತರಲಿಲ್ಲ. ಇಂದಿನ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ವಿಶ್ವೇಶತೀರ್ಥ ಶ್ರೀಪಾದಂಗಳವರ ಹೆಜ್ಜೆಯಲ್ಲಿ ಸಾಗುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶರಣ ಸಂಸ್ಕೃತಿ, ಸೂಫಿ ಸಂಸ್ಕೃತಿ, ದಾಸ ಸಂಸ್ಕೃತಿ ಮೂರು ಹುಟ್ಟಿದೆ. ಸರಸ್ವತಿ ಕೃಪೆ ಯಾರಿಗಾಗುತ್ತದೋ ಅವರೆ ಭಾಗ್ಯವಂತರು. ಕನಕದಾಸ, ಪುರಸಂದರದಾಸ, ವ್ಯಾಸರಾಯರು ಮೂಢನಂಬಿಕೆ, ಕಂದಾಚಾರ, ಗೊಡ್ಡು ಸಂಪ್ರದಾಯಗಳ ವಿರುದ್ಧ ಈಜಿದವರು ಎಂದು ಹೇಳಿದರು.
ಚಿತ್ರದುರ್ಗದಲ್ಲಿ ಭವ್ಯವಾದ ಶ್ರೀಕೃಷ್ಣನ ದೇವಸ್ಥಾನ ನಿರ್ಮಾಣವಾಗಬೇಕಾಗಿರುವುದರಿಂದ ದೊಡ್ಡ ಜಾಗ ನೀಡುವಂತೆ ಸಂಸದರಲ್ಲಿ ಮನವಿ ಮಾಡಿದ ಕೆ.ಎಸ್.ನವೀನ್ ಬ್ರಾಹ್ಮಣ ಸಮುದಾಯಕ್ಕೆ ಸಂಸ್ಕಾರವಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಈ ಸಮಾಜ ಮುಂಚೂಣಿಯಲ್ಲಿತ್ತು. ಉಡುಪಿಗೆ ಪ್ರಥಮವಾಗಿ ಬಸ್ ಬಿಟ್ಟಿದ್ದು, ನಾವು, ತಿರುಪತಿ, ಶೃಂಗೇರಿ, ಧರ್ಮಸ್ಥಳಕ್ಕೂ ಬಸ್ ಸಂಚಾರ ಆರಂಭಿಸಿದ್ದು ನಮ್ಮ ಫ್ಯಾಮಿಲಿ ಎಂದರು.
ಹುಟ್ಟಿದ ಪ್ರತಿಯೊಬ್ಬರು ಬೆಳೆಯಲು ಎಷ್ಟೋ ಅವಕಾಶಗಳಿವೆ. ಹರಿ ಎಂದರೆ ಸಮಸ್ತ ಸದ್ಗುಣಗಳ ಗಣಿ. ಸದ್ಗುಣಗಳ ದಾಸರಾದಾಗ ಬದುಕು ಹಬ್ಬವಾಗುತ್ತದೆ. ದುರ್ಗುಣಗಳನ್ನು ದೂರ ಮಾಡಿಕೊಂಡು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿಪ್ರ ಸಮಾಜಕ್ಕೆ ಜಾಗ ನೀಡುವುದಾದರೆ ಶ್ರೀಕೃಷ್ಣನ ದೇವಸ್ಥಾನ, ಶಾಲೆ, ಆಸ್ಪತ್ರೆ ಒಂದೆ ಕಡೆ ನಿರ್ಮಾಣವಾಗುವಂತ ವಿಶಾಲವಾದ ಭೂಮಿ ನೀಡಿ ಎಂದು ಸಂಸದ ಗೋವಿಂದ ಕಾರಜೋಳರವರ ಗಮನ ಸೆಳೆದರು.
ಹರಿವಾಯು ಗುರುಸೇವಾ ಟ್ರಸ್ಟ್‍ನ ಅಧ್ಯಕ್ಷ ಟಿ.ಕೆ.ನಾಗರಾಜ್, ಕಾರ್ಯದರ್ಶಿ ಜೋಯಿಸ್ ಹುಲಿರಾಜ್ ಸೇರಿದಂತೆ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹರಿದಾಸ ಹಬ್ಬದಲ್ಲಿ ಹಾಜರಿದ್ದರು.