ರಾಮನಗರ: ಜಿಲ್ಲೆಯಲ್ಲಿ ಕಪ್ಪುತಲೆ ಹುಳು, ಬಿಳಿನೊಣ, ಬೆಂಕಿ ರೋಗ ಹಾಗೂ ಇತರೆ ಕೀಟ ಬಾಧೆಗೆ ತುತ್ತಾಗಿರುವ ತೆಂಗಿನ ಬೆಳೆಯ ವೈಜ್ಞಾನಿಕ ಸಮೀಕ್ಷೆ ನಡೆಸಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತೋಟಗಾರಿಕಾ ಇಲಾಖೆ ಮುಂದಾಗಿದೆ.
ಬಿಳಿನೊಣ ಬಾಧೆಯು ಎಲ್ಲ ಭಾಗಗಳಲ್ಲಿಯೂ ಹೆಚ್ಚಾಗಿಯೇ ಕಾಣಿಸಿಕೊಂಡಿದೆ. ಕಪ್ಪುತಲೆ ಹುಳು ಬಾಧೆ ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರ ತಾಲೂಕಿನಲ್ಲಿ ಆವರಿಸಿದೆ. ಈ ಕಪ್ಪುತಲೆ ಹುಳುಗಳು ಕಾಣಿಸಿಕೊಂಡಾಗ ತಕ್ಷಣದಲ್ಲಿ ಹತೋಟಿ ಕ್ರಮಗಳನ್ನು ಅನುಸರಿಸದಿದ್ದರೆ ಅಕ್ಕಪಕ್ಕದ ತೋಟಗಳಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ.
ಮರು ಸರ್ವೆ ಕಾರ್ಯ:ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು, ರೋಗ ಬಾಧಿತ ಪ್ರದೇಶಗಳಲ್ಲಿ ‘ಪೆಸ್ಟ್ ಸಮೀಕ್ಷೆ ನಡೆಸಿ ಒಂದು ತಿಂಗಳೊಳಗೆ (ಸೆ.5ರೊಳಗೆ) ನಿಖರ ಮಾಹಿತಿಯನ್ನು ಸಲ್ಲಿಸುವಂತೆ ಇಲಾಖೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿಯೇ ಸೂಚನೆ ನೀಡಿತ್ತು. ಆದರೆ, ಒಂದು ತಿಂಗಳಲ್ಲಿ ಸಮೀಕ್ಷೆ ಕಾರ್ಯ ನಡೆಸುವುದು ಅಸಾಧ್ಯವಾಗಿತ್ತು. ಜೊತೆಗೆ
ಅದರಂತೆ ಜಿಲ್ಲೆಯ 362 ಗ್ರಾಮಗಳ 90,129 ತಾಕುಗಳಲ್ಲಿ ರೋಗ ಬಾಧೆಯನ್ನು ಸಮೀಕ್ಷೆ ಮಾಡಲು 95 ಪೆಸ್ಟ್ ಸರ್ವೆಯರ್ (ಸ್ಥಳೀಯ ಖಾಸಗಿ ವ್ಯಕ್ತಿ)ಗಳನ್ನು ನಿಯೋಜಿಸಲಾಗಿದೆ. ಅವರು ಪ್ರತಿ ತಾಕಿಗೆ ಹೋಗಿ ರೋಗ ಲಕ್ಷಣಗಳನ್ನು ಅಧ್ಯಯನ ಮಾಡಿ, ತಂತ್ರಾಂಶದಲ್ಲಿ ಅಂಕಿಅಂಶ ಮತ್ತು ಮಾಹಿತಿಯನ್ನು ದಾಖಲಿಸುತ್ತಾರೆ. ಅವರಿಗೆ ತರಬೇತಿಯನ್ನೂ ನೀಡಲಾಗಿದೆ.
ಬಾಕ್ಸ್ ...............
1.ಜಿಪಿಎಸ್ ಆಧಾರಿತ ಮೊಬೈಲ್ ಅಪ್ಲಿಕೇಷನ್ ಅನ್ನು ಬಳಸಿ ಸರ್ವೆ ನಂಬರ್ - ಉಪ ಸರ್ವೆ ನಂಬರ್ ವಾರು ತೆಂಗಿನಲ್ಲಿ ಕಪ್ಪು ತಲೆ ಹುಳು ಹಾಗೂ ಬಿಳಿ ನೊಣ ಬಾಧಿತ ಪ್ರದೇಶದ ನಿಖರ ಮಾಹಿತಿ ದಾಖಲಿಸುವುದು.
3.ಸಮೀಕ್ಷೆಯ ವರದಿ ಆಧಾರದ ಮೇಲೆ ಬಾಧಿತ ತೋಟಗಳಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ತೆಂಗಿನ ಕಪ್ಪು ತಲೆ ಹುಳು ಮತ್ತು ಬಿಳಿ ನೊಣ ಬಾಧೆ ನಿಯಂತ್ರಿಸಲು ರೈತರಿಗೆ ಸಲಹೆ ನೀಡಲಾಗುತ್ತಿದೆ. ಈ ರೋಗದ ಸಮೀಕ್ಷೆ ವರದಿಯನ್ನು ಜನವರಿ ತಿಂಗಳೊಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಪಿ.ಆರ್.ಗಳು ತೋಟಕ್ಕೆ ಬಂದಾಗ ರೈತರು ಅಗತ್ಯ ಸಹಕಾರ ನೀಡಬೇಕು.
ಬಾಕ್ಸ್ ........
ತೆಂಗು ಬೆಳೆ ವಿಸ್ತೀರ್ಣ, ಕಪ್ಪು ತಲೆ ಹುಳು ಮತ್ತು ಬಿಳಿ ನೊಣ ಬಾಧೆಯ ತಾಲೂಕುವಾರು ಅಂದಾಜು ನಷ್ಟದ ವಿವರ (ಹೆ.ಗಳಲ್ಲಿ)ತಾಲೂಕುವಿಸ್ತೀರ್ಣಕಪ್ಪುತಲೆ ಹುಳಿವಿನಿಂದ ಬಾಧಿತ ಪ್ರದೇಶಬಿಳಿ ನೊಣದಿಂದ ಬಾಧಿತ ಪ್ರದೇಶ
ರಾಮನಗರ5,2481501,850ಚನ್ನಪಟ್ಟಣ11,9781196,730
ಮಾಗಡಿ4,5240.003,860ಕನಕಪುರ6,2097005,600
ಒಟ್ಟು27,95996918,0405ಕೆಆರ್ ಎಂಎನ್ 1.ಜೆಪಿಜಿ
ಕಪ್ಪುತಲೆ ಹುಳು ಮತ್ತು ಬಿಳಿನೊಣ ಬಾಧೆಗೆ ತುತ್ತಾಗಿರುವ ತೆಂಗಿನ ಮರಗಳು.