ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ವಿಜಯ ಮಹಾಂತೇಶ್ವರ ಶ್ರೀಮಠದಲ್ಲಿ ಶುಕ್ರವಾರ ನಡೆದ ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮಠದಿಂದ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಜೀವನದಲ್ಲಿ ಎರಡು ನಗರ, ಎರಡು ಮಠಗಳು, ಎರಡು ಜಿಲ್ಲೆಗಳನ್ನು ಎಂದಿಗೂ ಮರೆಯುವುದಿಲ್ಲ. ನನಗೆ ಜನ್ಮ ಕೊಟ್ಟ ಇಳಕಲ್ಲ ನಗರ, ಜಿವನ ಕೊಟ್ಟ ಕನಕಗಿರಿ, ಇಳಕಲ್ಲ ಶ್ರೀವಿಜಯ ಮಹಾಂತೇಶ್ವರ ಶ್ರೀಮಠ, ಕೊಪ್ಪಳ ಗವಿಮಠ, ಬಾಗಲಕೋಟೆ ಜಿಲ್ಲೆಯ ಹಾಗು ಕೊಪ್ಪಳ ಜಿಲ್ಲೆಯ ಮಠಗಳನ್ನು ಜೀವನದಲ್ಲಿ ಎಂದಿಗೂ ಮರೆಯಲಾರೆ ಎಂದ ಅವರು, ಈ ಮಠದ ಜಾತ್ರೆ ನಮ್ಮ ಮನೆಯ ಹಬ್ಬವಿದ್ದಂತೆ. ಜಾತ್ರೆಗೆ ₹೧೫ ಲಕ್ಷ ಅನುದಾನ ಹಾಗೂ ದಾಸೋಹಕ್ಕೆ ೨೫ ಕ್ವಿಂಟಾಲ್ ಅಕ್ಕಿ ಕೊಡುವುದಲ್ಲದೆ, ಜಾತ್ರೆಯ ಅಡ್ಡ ಪಲ್ಲಕ್ಕಿ ಮಯೋತ್ಸವಕ್ಕೆ ನನ್ನ ಇಲಾಖೆಯಿಂದ ೧೫ ಕಲಾ ತಂಡಗಳನ್ನು ಸಹ ಕಳಿಸುವೆ ಎಂದು ತಿಳಿಸಿದರು.
ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿರೂರಿನ ಡಾ.ಬಸವಲಿಂಗ ಶ್ರೀಗಳು, ಅಥಣಿ ಶ್ರೀಗಳು, ಬೀದರದ ಮಹೇಶ ಮಾಶೆಟ್ಟಿ ಇತರರು ಇದ್ದರು. ಇದೇ ವೇಳೆ ಬಸವ ಪಬ್ಲಿಕ್ ಶಾಲೆಯ ಮಕ್ಕಳಿಂದ ಮಕ್ಕಳ ಕವಿ ಗೋಷ್ಠಿ ನಡೆಯಿತು.