
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ನಾನು ಭಾಗವಹಿಸಲಿದ್ದೇನೆ. ಇದು ಯಾವುದೇ ವ್ಯಕ್ತಿ ಪರ, ವಿರುದ್ಧ ಅಥವಾ ಪಕ್ಷದ ಪರ, ವಿರುದ್ಧ ನಡೆಯುವ ಸಮಾವೇಶವಲ್ಲ. ಇದು ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಸಭೆ ನಡೆಯಲಿದೆ. ಕನಿಷ್ಠ 25 ಸಾವಿರ ಹಿಂದೂಗಳು, ದೇಶಭಕ್ತರು ಭಾಗವಹಿಸಲಿದ್ದಾರೆ. ಈಗಾಗಲೇ ಕನ್ಹೇರಿ ಸ್ವಾಮೀಜಿಗಳು ಒಂದೆಡೆಯಾದರೆ ಮತ್ತೊಂದೆಡೆ ಇನ್ನೊಂದಿಷ್ಟು ಸ್ವಾಮೀಜಿಗಳು ಇದ್ದಾರೆ. ಈ ಎರಡೂ ಬಣಗಳ ಸ್ವಾಮೀಜಿಗಳು ಕಚ್ಚಾಡುವುದು ಬೇಡ. ಎರಡು ಕಡೆ ಸ್ವಾಮೀಜಿಗಳು ಆಗಿಹೋಗಿರುವ ಘಟನೆ ಮರೆಯಬೇಕು. ಹಿಂದೂಗಳನ್ನು ಒಡೆದು ಆಳುವ ನೀತಿಗೆ ಬಲಿಯಾಗಬಾರದು. ಸ್ವಾಮೀಜಿಗಳು ಒಂದಾಗಬೇಕು ಎಂದರು.
ಬಾಂಗ್ಲಾದೇಶದಲ್ಲಿ ಹಿಂದೂಗಳು ಎಂಬ ಕಾರಣಕ್ಕೆ ಇಬ್ಬರನ್ನು ಕೊಲೆ ಮಾಡಿದ್ದಾರೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಕೊಲೆ ಮಾಡಿದ್ದಾರೆ. ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ ಪ್ರವಾಸಕ್ಕೆ ಹೋದವರ ಧರ್ಮ ಕೇಳಿ ಕೇಳಿ 26 ಜನರನ್ನು ಜಿಹಾದಿಗಳು ಕೊಲೆ ಮಾಡಿದರು. ಅದೇ ರೀತಿ ದೆಹಲಿಯಲ್ಲಿ ವೈದ್ಯ ಜಿಹಾದಿಗಳು ಡಿಡೊನೆಟರ್ ಬಳಸಿ ಬ್ಲಾಸ್ಟ್ ಮಾಡಿದರು. ಈ ಎಲ್ಲ ವಿಚಾರಗಳನ್ನು ಸೇರಿಸಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ಸಲ್ಲಿಸಿದ್ದೇನೆ. ದೇಶದಲ್ಲಿ ತಕ್ಷಣ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿ ಮಾಡಬೇಕು. ಯುನಿಫಾರ್ಮ್ ಸಿವಿಲ್ ಕೋಡ್ ಜಾರಿ ಮಾಡಬೇಕು ಎಂದು ಪತ್ರ ಬರೆದಿದ್ದೇನೆ. ಈ ಮೂಲಕ ಭಯೋತ್ಪಾದಕರನ್ನು ಮಟ್ಟಹಾಕಬಹುದಾಗಿದೆ ಎಂದು ತಿಳಿಸಿದರು.ಭಾರತದಲ್ಲಿರುವ 28 ರಾಜ್ಯಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆ ಇದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಲೀಪರ್ ಸೆಲ್‌ಗಳು ಆಕ್ಟಿವ್ ಆಗಿವೆ. ತಕ್ಷಣ ಮುಖ್ಯಮಂತ್ರಿಗಳ ಸಭೆ ಕರೆದು ಈ ಎರಡೂ ಬಿಲ್ ಪಾಸ್ ಮಾಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ 1500 ದೇಶವಿರೋಧಿ ಸಂಘಟನೆಗಳು ತಲೆಯೆತ್ತಿವೆ. 2040 ರಲ್ಲಿ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಈ ಸಂಘಟನೆಗಳು ಪಣ ತೊಟ್ಟಿವೆ. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಉಗ್ರವಾದಿಗಳನ್ನು ಹತ್ತಿಕ್ಕಿ, ಅವರ ಹೆಣಗಳನ್ನು ಹೂತು ಅದರ ಮೇಲೆ ಶೌಚಾಲಯ ಕಟ್ಟಬೇಕು. ಈ ವಿಚಾರಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು.ನನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನ ರಾಷ್ಟ್ರಪ್ರೇಮದ ಬಗ್ಗೆ ಪ್ರಶ್ನಿಸಿರುವ ಸರ್ಕಾರದ ಸಂವಿಧಾನಿಕ ಹುದ್ದೆಯಲ್ಲಿರುವ ಎಸ್.ಎಸ್.ಖಾದ್ರಿ ವಕೀಲ ತಕ್ಷಣ ಕ್ಷಮೆ ಕೇಳಬೇಕು. ಹಿಂದೂ ಮಹಿಳೆಯರಿಗೆ, ಭಗವದ್ಗೀತೆಗೆ, ಕನ್ನಡಕ್ಕೆ ಆತ ಅಪಮಾನ ಮಾಡಿದ್ದಾನೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಸೇವಕ ವಿವೇಕ ಸಜ್ಜನ ಇದ್ದರು.