ಮೋದಿ ಸಾರಥ್ಯದಲ್ಲಿ ಅಭಿವೃದ್ಧಿ ಪಥದತ್ತ ದೇಶ: ರಾಜಾ ಅಮರೇಶ್ವರ ನಾಯಕ

KannadaprabhaNewsNetwork |  
Published : Mar 30, 2024, 12:45 AM ISTUpdated : Mar 30, 2024, 12:46 AM IST
ಹುಣಸಗಿ ಪಟ್ಟಣದ ಸುಬ್ಬಮ್ಮಗೌಡತಿ ಕಲ್ಯಾಣ  ಮಂಟಪದಲ್ಲಿ ನಡೆದ ಬಿಜೆಪಿ ಪಕ್ಷದ ಹುಣಸಗಿ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಲೋಕಸಭಾ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಭಿವೃದ್ಧಿ ಹೊಂದಿದ 5 ರಾಷ್ಟ್ರಗಳಲ್ಲಿ ಭಾರತವೂ ಒಂದು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಾ, ಬಂದರೂ ಜನಪರ ಯೋಜನೆಗಳು ಜಾರಿ ತಂದಿಲ್ಲ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು. ಹುಣಸಗಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಹುಣಸಗಿ

ದೇಶದ ಪ್ರಧಾನಿ ನರೇಂದ್ರ ಮೋದಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡ್ಯೊಯುವ ಕಾರ್ಯಮಾಡುತ್ತಿದ್ದಾರೆ ಎಂದು ರಾಯಚೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹೇಳಿದರು.

ಪಟ್ಟಣದ ಸುಬ್ಬಮ್ಮಗೌಡತಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಹುಣಸಗಿ ಮಂಡಲ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಐದು ವರ್ಷದ ಅವಧಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿ ಜತೆಗೆ ದೇಶದ ರಕ್ಷಣೆ, ಆರ್ಥಿಕತೆ ಸುಧಾರಣೆಗೆ ಶ್ರಮವಹಿಸಿದ ಫಲವಾಗಿ ಅಭಿವೃದ್ಧಿ ಹೊಂದಿದ ಐದು ರಾಷ್ಟ್ರಗಳಲ್ಲಿ ಭಾರತ ದೇಶವು ಕೂಡ ಒಂದಾಗಿದೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿಜೆಪಿ ಅಭ್ಯರ್ಥಿ ನರಸಿಂಹನಾಯಕ (ರಾಜೂಗೌಡ) ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿಯಿಂದ ಜನರು ಮೋಸ ಹೋಗುತ್ತಿದ್ದಾರೆ‌, ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಾ, ಬಂದರೂ ಜನಪರ ಯೋಜನೆಗಳು ಜಾರಿ ತಂದಿಲ್ಲ ಎಂದು ಹೇಳಿದರು.

ಬಿಜೆಪಿ ಪಕ್ಷದ ತತ್ವ ಸಿದ್ಧಾಂತದೊಂದಿಗೆ ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಸರ್ವ ಜನಾಂಗಕ್ಕೂ ರಾಜಕೀಯ ಪ್ರಾತಿನಿಧ್ಯ ಕೊಟ್ಟಿದ್ದೇನೆ. ಇದು ನನ್ನ ರಾಜಕೀಯ ಧರ್ಮ. ಯಾವತ್ತೂ ಯಾರನ್ನು ದ್ವೇಷಿಸಿಲ್ಲ. ಕಾಂಗ್ರೆಸ್‌ನ ಕೆಲವರು ಆಗದೇ ಇರುವವರು ಇಲ್ಲ, ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ ಅವರು ಮತ್ತೊಮ್ಮೆ ನನಗೆ ಹಾಗೂ ಬಿಜೆಪಿ ಲೋಕಸಭಾ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಗೆ ಬೆಂಬಲಿಸಬೇಕು ಎಂದು ಜನರಲ್ಲಿ ಬೇಡಿಕೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪೂರ, ಜಿಲ್ಲಾ ವಕ್ತಾರ ಎಚ್.ಸಿ. ಪಾಟೀಲ್, ಬಸನಗೌಡ ಯಡಿಯಾಪುರ ಮಾತನಾಡಿದರು.

ಈ ವೇಳೆ ಹುಣಸಗಿ ಮಂಡಲ ಬಿಜೆಪಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂಗಣ್ಣ ಸಾಹು ವೈಲಿ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ, ಬಸವರಾಜ ಸ್ವಾಮಿ ಸ್ಥಾವರಮಠ, ರಾಜಾ ಹನುಮಪ್ಪನಾಯಕ, ವಿರೇಶ ಸಾಹು ಚಿಂಚೋಳಿ, ರಾಜಾ ರಾಜಾ ವೇಣುಮಾಧವನಾಯಕ, ವೇಣುಗೋಪಾಲನಾಯಕ ಜೇವರ್ಗಿ, ಕೆಂಚಪ್ಪ ಪೂಜಾರಿ, ಸಿದ್ದನಗೌಡ ಕರಿಭಾವಿ, ಗುರುಲಿಂಗಪ್ಪ ಸಜ್ಜನ್, ಡಾ. ವೀರಭದ್ರಗೌಡ, ಬಸವರಾಜ ವಿಭೂತಿಹಳ್ಳಿ, ಗುರುಕಾಮ, ಬಸಣ್ಣ ಬಾಲಗೌಡ್ರು, ದುರಗಪ್ಪ ಗೋಗಿಕೇರಾ, ವೆಂಕಟೇಶ ಸಾಹುಕಾರ, ರಾಜು ಹವಾಲ್ದಾರ ಇತರರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಪ್ಪ ಗುಳಗಿ ಸ್ವಾಗತಿಸಿ, ನಿರೂಪಿಸಿದರು. ಪ್ರಕಾಶ ಅಂಗಡಿ ವಂದಿಸಿದರು.

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌