ಸೈನಿಕರ ತ್ಯಾಗ, ಬಲಿದಾನದಿಂದ ದೇಶ ಸುರಕ್ಷಿತ

KannadaprabhaNewsNetwork |  
Published : Aug 04, 2024, 01:21 AM IST
ಸಿಂದಗಿ ಪಟ್ಟಣದ ಶ್ರೀ ಭುವನೇಶ್ವರಿ ವಿದ್ಯಾವರ್ಧಕ ಸಂಘದ ಕಾವ್ಯಾ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಹಾಗೂನಿವೃತ್ತ ಮಾಜಿ ಸೈನಿಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭವನ್ನು ಸಿಂದಗಿ ತಾ.ಶಿ.ಪ ಮಂಡಳಿಯ ನಿರ್ದೇಶಕ ವಿಶ್ವನಾಥ ಕುರಡೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಕಾರ್ಗಿಲ್ ಕೇವಲ ಭೂಮಿಯಲ್ಲ, ನೂರಾರು ವೀರಯೋಧರು ತಮ್ಮ ರಕ್ತದ ಮೂಲಕ ಭಾರತ ಮಾತೆಗೆ ಅಭಿಷೇಕ ಮಾಡಿದ ಸ್ಥಳ ಎಂದು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ವಿಶ್ವನಾಥ ಕುರಡೆ ಹೇಳಿದರು. ಪಟ್ಟಣದ ಭುವನೇಶ್ವರಿ ವಿದ್ಯಾವರ್ಧಕ ಸಂಘದ ಕಾವ್ಯಾ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಹಾಗೂ ನಿವೃತ್ತ ಮಾಜಿ ಸೈನಿಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು.

ಕನ್ನಡಪ್ರಭ ವಾರ್ತೆ ಸಿಂದಗಿ

ಕಾರ್ಗಿಲ್ ಕೇವಲ ಭೂಮಿಯಲ್ಲ, ನೂರಾರು ವೀರಯೋಧರು ತಮ್ಮ ರಕ್ತದ ಮೂಲಕ ಭಾರತ ಮಾತೆಗೆ ಅಭಿಷೇಕ ಮಾಡಿದ ಸ್ಥಳ ಎಂದು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ವಿಶ್ವನಾಥ ಕುರಡೆ ಹೇಳಿದರು. ಪಟ್ಟಣದ ಭುವನೇಶ್ವರಿ ವಿದ್ಯಾವರ್ಧಕ ಸಂಘದ ಕಾವ್ಯಾ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಹಾಗೂ ನಿವೃತ್ತ ಮಾಜಿ ಸೈನಿಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಸುರಕ್ಷತೆಯಿಂದ ಇರಬೇಕಾದರೇ ಸೈನಿಕರ ತ್ಯಾಗ, ಬಲಿದಾನವೇ ಕಾರಣ. ಸೈನಿಕರು ನಮಗೆ ಸಂರಕ್ಷಣೆ ನೀಡದರೇ, ರೈತ ಅನ್ನದಾತ ಇವರಿಬ್ಬರನ್ನೂ ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ, ಎಂ.ಎಂ.ಹಂಗರಗಿ, ಚಲನಚಿತ್ರ ನಟ ವಿಶ್ವಪ್ರಕಾಶ ಮಲಗೊಂಡ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಯು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಯುವಕರು ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ದೇಶ ಸೇವೆಯಂತಹ ಪುಣ್ಯ ಕಾರ್ಯ ಮತ್ತೊಂದಿಲ್ಲ. ಇಂದಿನ ಯುವಕರು ದೇಶಕ್ಕೆ ಸಲ್ಲಿಸುವ ಸೇವೆ ಅಮೂಲ್ಯವಾಗಿರುತ್ತದೆ. ಕಾರ್ಗಿಲ್ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಲು ಶ್ರಮಿಸಿದ ನಮ್ಮ ಯೋಧರ ಪರಾಕ್ರಮ ಮೆಚ್ಚುವಂತಹದ್ದು, ಜೊತೆಗೆ ಆ ಸಮಯದಲ್ಲಿ ವೀರ ಮರಣ ಹೊಂದಿದ ವೀರ ಯೋಧರಿಗೆ ಇಂದು ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಸೈನಿಕರ ಸಂಘದ ತಾಲೂಕಾಧ್ಯಕ್ಷ ಶ್ರೀಶೈಲ ಯಳಮೇಲಿ ಹಾಗೂ ನಿವೃತ್ತ ಸೈನಿಕ ಬಸವರಾಜ ಕೋಟರಗಸ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂತಹ ಶಿಕ್ಷಣ ಸಂಸ್ಥೆಗಳು ಕಾರ್ಗಿಲ್ ವಿಜಯೋತ್ಸವ ಆಚರಿಸುವ ಮೂಲಕ ನಮ್ಮನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ. ಎರಡು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಅನೇಕ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿನ ದೇಶಪ್ರೇಮ ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕು. ಅನೇಕರ ತ್ಯಾಗ, ಶ್ರಮದಿಂದ ಈ ದೇಶ ಕಟ್ಟಲಾಗಿದೆ. ಇದನ್ನು ಉಳಿಸಿಕೊಂಡು ಹೋಗುವುದು ಈ ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದರು.ಆದಿಶೇಷ ಸಂಸ್ಥಾನ ಮಠದ ರಾಜಯೋಗಿ ನಾಗರತ್ನ ವೀರರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಅಧ್ಯಕ್ಷೀಯ ನುಡಿಗಳನ್ನಾಡಿದರು.ಈ ವೇಳೆ ನಿವೃತ್ತ ಸೈನಿಕರಿಗೆ ಹಾಗೂ ಕಾನಿಪಾ ಜಿಲ್ಲಾ ಪ್ರಶಸ್ತಿಗೆ ಪಡೆದ ಸುದರ್ಶನ ಜಂಗಣ್ಣಿ ಹಾಗೂ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದುಕೊಂಡ ವಿಶ್ವಪ್ರಕಾಶ ಮಲಗೊಂಡ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಪ್ರಕಾಶ ಲೋಣಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಭೋಜರಾಜ ದೇಸಾಯಿ, ಶಾಂತವೀರ ಹಿರೇಮಠ, ಸುದರ್ಶನ ಜಂಗಣ್ಣಿ, ನಿವೃತ್ತ ಸೈನಿಕರಾದ ಭಾಗಪ್ಪ ಬಂಡಗಾರ, ಕಾಶಿನಾಥ ಚಾಂದಕವಟೆ, ಎಸ್.ಎಂ.ಬಡಾನೂರ, ಎಸ್.ಎ.ಬಿರಾದಾರ, ಎಸ್.ಎಸ್.ಪತ್ತಾರ, ಬಾಬು ಸೂರ್ಯವಂಶಿ, ಈರಣ್ಣ ತಳವಾರ, ರವೀಂದ್ರ ಬಿರಾದಾರ ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕ ಮಹಾಂತೇಶ ನೂಲಾನವರ ನಿರೂಪಿಸಿದರು. ಪಂಡಿತ ಯಂಪುರೆ ಸ್ವಾಗತಿಸಿದರು. ಆನಂದ ಶಾಬಾದಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಣ್ಮಗು ಹುಟ್ಟಿದರೆ ಹೊನ್ನಕ್ಕೆ ಸಮಾನ
ಪ್ರಪಂಚಕ್ಕೆ ಕೊಟ್ಟಿರುವ ಶ್ರೇಷ್ಠ ಕೊಡುಗೆ ರಾಮಾಯಣ: ಗಂಗಾಧರ ಗೌಡ