ವಿಜ್ಞಾನ ತಂತ್ರಜ್ಞಾನ ಸೇರಿ ಎಲ್ಲಾ ರಂಗದಲ್ಲೂ ದೇ ಶದ ಪ್ರಗತಿ: ಸವಿತಾರಮೇಶ್

KannadaprabhaNewsNetwork |  
Published : Aug 17, 2026, 01:45 AM IST
16 ಬೀರೂರು 1ಬೀರೂರಿನ ಕೆ.ಎಸ್.ಆರ್.ಟಿ.ಸಿ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ಯ ದಿನಾಚರಣೆ ಕಾರ್ಯಕ್ರಮದಲ್ಲಿ ಟ್ಯಾಕ್ಸಿ ನಿಲ್ದಾಣಕ್ಕೆ ಕುಡಿಯುವ ನೀರಿನ ಟ್ಯಾಂಕರ್ ನ್ನು ಪುರಸಭೆ ಮಾಜಿ ಅಧ್ಯಕ್ಷೆ ಸವಿತಾರಮೇಶ್ ಉಚಿತವಾಗಿ ನೀಡಿದರು. | Kannada Prabha

ಸಾರಾಂಶ

ಬೀರೂರುದೇಶಕ್ಕೆ ಸ್ವಾತಂತ್ರ ಬಂದು ಹಲವು ದಶಕಗಳು ಕಳೆದಿವೆ. ದೇಶ ಎಲ್ಲ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ವಿಜ್ಞಾನ, ಕೃಷಿ, ಶಿಕ್ಷಣ, ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲ ರಂಗಗಳಲ್ಲಿ, ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಹೇಳಿದರು.

- ಡಾ.ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಕನ್ನಡಪ್ರಭ ವಾರ್ತೆ,ಬೀರೂರು

ದೇಶಕ್ಕೆ ಸ್ವಾತಂತ್ರ ಬಂದು ಹಲವು ದಶಕಗಳು ಕಳೆದಿವೆ. ದೇಶ ಎಲ್ಲ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ವಿಜ್ಞಾನ, ಕೃಷಿ, ಶಿಕ್ಷಣ, ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲ ರಂಗಗಳಲ್ಲಿ, ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಹೇಳಿದರು.

ಪಟ್ಟಣದ ಕೆ.ಎಸ್.ಆರ್.ಟಿ.ಸಿ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು. ಸಂವಿಧಾನದ ಮೌಲ್ಯ ಗಳನ್ನು ಎತ್ತಿಹಿಡಿ ಯುವುದು ದೇ ಶದ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ. ದೇ ಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ,ಬಲಿದಾನ ಮಾಡಿದ ಮಹ ನೀಯರನ್ನು ಸ್ಮರಿಸುವುದು ಎಲ್ಲ ಪ್ರಜೆಗಳ ಕರ್ತವ್ಯ. ದೇ ಶ ಅನೇಕ ಏಳು-ಬೀಳು ಗಳನ್ನು ಕಂಡರು ಸಹ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಾಧಿಸಿದೆ. ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶ್ವವೇ ದೇಶದತ್ತ ನೋಡುವ ಸಾಧನೆ ಮಾಡಿದೆ ಎಂದರು.

ಧ್ವಜಾರೋಹಣ ನಡೆಸಿ ಸಂಘದ ಅಧ್ಯಕ್ಷ ಸುನೀಲ್ ಮಾತನಾಡಿ, ದೇಶದಲ್ಲಿ ವಿದ್ಯಾವಂತರ ಪ್ರಮಾಣ ಹೆಚ್ಚಾಗುತ್ತಿದ್ದರೂ ಸಹ ಅದಕ್ಕೆ ಪ್ರತಿಯಾಗಿ ಉದ್ಯೋಗ ಸೃಷ್ಠಿಯಾಗದೇ ಇಂದಿಗೂ ನಿರುದ್ಯೋಗ ಜ್ವಲಂತ ಸಮಸ್ಯೆಯಾಗಿ ದೇ ಶದ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ. ನಮ್ಮ ಯುವ ಜನರು ನೌಕರಿಗಾಗಿ ಹಾರೋರೆಯುವ ಬದಲು ಸ್ವಯಂ ಉದ್ಯೋಗ ಪ್ರಾರಂಭಿಸಲು ಮುಂದಾಗಬೇಕು. ಅದಕ್ಕಾಗಿ ಸರ್ಕಾರ ನೀಡುವ ಸೌಲಬ್ಯ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಉಪಾಧ್ಯಕ್ಷ ರಮೇಶ್ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ನಮಗೆ ಯಾವುದೇ ಸವಾಲು ಎದುರಿಸಲು ಪ್ರೇರಣೆ ನೀಡುವ ಜೊತೆಗೆ ಭವ್ಯ ಭಾರತ ನಿರ್ಮಾಣದ ಕರ್ತವ್ಯ ನೆನಪಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಸದಾಶಿವ, ಗೋವಿಂದ, ಪೂಜರಾಮು, ಆನಂದ, ಸಂದೀಪ, ಗಣಪ, ಚಿಂಗಿ ಅಶೋಕ್ ಗಜಸತೀಶ ,ಕುಮಾರ್, ಸೇರಿದಂತೆ ಮತ್ತಿತರಿದ್ದರು.

16 ಬೀರೂರು 1

ಬೀರೂರಿನ ಕೆ.ಎಸ್.ಆರ್.ಟಿ.ಸಿ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಟ್ಯಾಕ್ಸಿ ನಿಲ್ದಾಣಕ್ಕೆ ಕುಡಿಯುವ ನೀರಿನ ಟ್ಯಾಂಕರ್ ನ್ನು ಪುರಸಭೆ ಮಾಜಿ ಅಧ್ಯಕ್ಷೆ ಸವಿತಾರಮೇಶ್ ಉಚಿತವಾಗಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ
ಏತ ನೀರಾವರಿಗೆ ಶಾಸಕ ಮಂಜು ಚಾಲನೆ