ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ

KannadaprabhaNewsNetwork |  
Published : Apr 25, 2025, 12:31 AM IST
ಪಪಪಪ | Kannada Prabha

ಸಾರಾಂಶ

ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಒಗ್ಗಟ್ಟಿನಿಂದ ಗ್ರಾಮದ ಅಭಿವದ್ಧಿಗೆ ಆದ್ಯತೆ ನೀಡುವುದು ಅಗತ್ಯ

ಕನ್ನಡಪ್ರಭ ವಾರ್ತೆ ಅಥಣಿ

ಗ್ರಾಮಗಳ ಅಭಿವದ್ಧಿಯಿಂದ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯ. ಆ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಒಗ್ಗಟ್ಟಿನಿಂದ ಗ್ರಾಮದ ಅಭಿವದ್ಧಿಗೆ ಆದ್ಯತೆ ನೀಡುವುದು ಅಗತ್ಯ ಎಂದು ಹುಲಿಜಂತಿಯ ಮಾಳಿಂಗರಾಯ ಮಹಾರಾಜರು ಹೇಳಿದರು.

ತಾಲೂಕಿನ ಅರಟಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಗ್ರಾಪಂ ಕಾರ್ಯಾಲಯದ ಕಟ್ಟಡ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಹಳಷ್ಟು ಜನರ ಶ್ರಮದಿಂದ ಈ ಕಟ್ಟಡ ನಿರ್ಮಾಣವಾಗಿದೆ. ಸರ್ಕಾರದ ಹಲವಾರು ಯೋಜನೆಗಳು ಗ್ರಾಪಂಗೆ ಸಿಕ್ಕು ಜನರಿಗೆ ಅನುಕೂಲವಾಗಲಿ. ಗ್ರಾಪಂಗಳು ಹಳ್ಳಿಯ ವಿಧಾನಸೌಧಗಳಿದ್ದಂತೆ, ಮಹಾತ್ಮರು ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುವ ನಿಟ್ಟಿನಲ್ಲಿ ಗ್ರಾಪಂ ಜನಪ್ರತಿನಿಧಿಗಳು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

ಕೌಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಗ್ರಾಮದ ಪ್ರಥಮ ಪ್ರಜೆ ಅಂದರೆ ಗ್ರಾಪಂ ಅಧ್ಯಕ್ಷರು. ಗ್ರಾಮದ ಮಹಿಳೆ ಗ್ರಾಪಂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಾ ನೂತನವಾದ ಗ್ರಾಪಂ ಕಟ್ಟಡ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆ ಪಡಬೇಕು. ಹೆಣ್ಣು ಅಬಲೆ ಅಲ್ಲಾ ಸಬಲೇ ಎನ್ನುವುದು ನಿಮ್ಮ ಪಂಚಾಯತಿಯಲ್ಲಿ ಕಂಡಾಗ ಇಷ್ಟು ಜನ ಹೆಣ್ಣು ಮಕ್ಕಳು ವೇದಿಕೆ ಅಲಂಕರಿಸಿದ್ದು ನೋಡಿದರೆ ಸಂತೋಷವಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಶಂಕರ ಕೆಂಚಗೊಂಡ, ಬಾಡಗಿ ಬನಸಿದ್ಧ ಮಹಾರಾಜರು, ಸಂಗಯ್ಯ ಹಿರೇಮಠ, ತಾಪಂ ಇಒ ಶಿವಾನಂದ ಕಲ್ಲಾಪೂರ, ತಾಪಂ ಸಹಾಯಕ ನಿದೇಶಕ ಎಂ.ಆರ್.ಕೋತವಾಲ, ಕಾರ್ಯದರ್ಶಿ ಆನಂದ ಗಿರಿಜಾಗೋಳ, ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಶಿವಾನಂದ ಖ್ಯಾಡಿ, ಮಹಾದೇವ ಡಂಗಿ, ಸಿದ್ದು ಹಳ್ಳಿ, ಶಿವಾನಂದ ನೇಮಗೌಡ, ರೇವಪ್ಪ ತೇಲಿ, ಏಕನಾಥ ಕಾಂಬಳೆ, ಶಿವಾನಂದ ಪಾಟೀಲ, ಸದಾಶಿವ ಹೊನಗೌಡ, ಚನ್ನಪ್ಪ ಕಾಗವಾಡ, ಅನ್ನಪೂರ್ಣಾ ಮುಧೋಳ, ಸರಸ್ವತಿ ಕಾಂಬಳೆ, ಗಂಗವ್ವ ಅರ್ಜುಣಗಿ, ಮಹಾದೇವಿ ಪಾಟೀಲ, ಜಯಶ್ರೀ ಡಂಗಿ, ಭಾರತಿ ನಾಯಿಕ, ಲಕ್ಷ್ಮೀಬಾಯಿ ಮಮದಾಪೂರ, ಕಾಸವ್ವ ಹೊನಗೌಡ, ಬಂಗಾರೇವ್ವ ಐಗಳಿ, ಯಲ್ಲವ್ವ ನಾಟಿಕರ ಸೇರಿ ಇತರರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಎ.ಜಿ.ಎಡಕೆ ಸ್ವಾಗತಿಸಿದರು.

ನಮ್ಮ ಭಾರತ ದೇಶ ಹಳ್ಳಿಗಳಿಂದ ಕೂಡಿದ ರಾಷ್ಟ್ರ. ಪ್ರತಿ ಹಳ್ಳಿಗಳು ಸುಧಾರಣೆಯಾದಾಗ ದೇಶದ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮಸ್ಥರು ಆ ಯೋಜನೆಗಳ ಸದುಪಯೋಗ ಪಡೆದುಕೊಂಡು ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು.

ಶಿವಾನಂದ ಕಲ್ಲಾಪೂರ, ತಾಪಂ ಇಒ ಅಥಣಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ