ಮೋದಿ ಆಡಳಿತವನ್ನು ದೇಶವೇ ಒಪ್ಪಿದಂತಾಗಿದೆ

KannadaprabhaNewsNetwork |  
Published : May 05, 2026, 01:15 AM IST
 ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ  ವಿಜಯೋತ್ಸವ ಆಚರಿಸಿದರು. | Kannada Prabha

ಸಾರಾಂಶ

ಮೋದಿ ಆಡಳಿತವನ್ನು ದೇಶವೇ ಒಪ್ಪಿದಂತಾಗಿದೆ

ಕನ್ನಡಪ್ರಭ ವಾರ್ತೆ ಗುಬ್ಬಿ

ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿರುವಂತಹ ಇಡೀ ದೇಶವು ಪಂಚ ರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚರಿಯನ್ನು ಬಿಜೆಪಿ ಗೆಲ್ಲುವ ಮೂಲಕ ನರೇಂದ್ರ ಮೋದಿ ಅವರ ಆಡಳಿತವನ್ನು ಇಡೀ ದೇಶವೇ ಒಪ್ಪಿದೆ ಎಂಬುದು ಸಾಬೀತಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮಯ್ಯ ಹೇಳಿದರು. ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಮಾತನಾಡಿದರು. ಬಿಜೆಪಿ ಸರ್ಕಾರವನ್ನ ಮತ್ತಷ್ಟು ಗಟ್ಟಿಗೊಳಿಸಿದಂತಹ ರಾಜ್ಯದ ಎಲ್ಲಾ ಮತಬಾಂಧವರಿಗೆ ಕಾರ್ಯಕರ್ತರಿಗೆ ಧನ್ಯವಾದಗಳು ನನ್ನ ತಿಳಿಸಿದರು. ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ, ಎರಡು ದಶಕಗಳಿಂದ ಆಡಳಿತ ಮಾಡುತ್ತಿದ್ದಂತಹ ವಿರೋಧ ಪಕ್ಷವನ್ನು ಮಣಿಸಿ ಪಶ್ಚಿಮ ಬಂಗಾಳವನ್ನು ಗೆಲ್ಲುವ ಮೂಲಕ ಹೊಸ ಇತಿಹಾಸವನ್ನು ಬಿಜೆಪಿ ಬರೆದಿದೆ ನರೇಂದ್ರ ಮೋದಿಯವರು ಮಾಡಿರುವಂತಹ ಅಭಿವೃದ್ಧಿಯ ಕೆಲಸಗಳೇ ಶ್ರೀರಕ್ಷೆಯಾಗಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದ್ದು , ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ ಎಂದು ತಿಳಿಸಿದರು.

ಮುಖಂಡ ಚಂದ್ರಶೇಖರ ಬಾಬು ಮಾತನಾಡಿ, ಬಿಜೆಪಿಯ ಗೆಲುವು ದೇಶದ ಗೆಲುವಾಗಿದ್ದು ರಾಜ್ಯದ ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳನ್ನು ಅಲ್ಪಂತರದಲ್ಲಿ ಸೋತಿದ್ದೇವೆ ಬಿಟ್ಟರೆ ಅಲ್ಲಿಯೂ ಸಹ ಮತದಾರರು ಕಾರ್ಯಕರ್ತರು ಪಕ್ಷವನ್ನು ಕೈಹಿಡಿದಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತ ಇಡೀ ದೇಶವೇ ಮತ್ತೊಮ್ಮೆ ಮೆಚ್ಚಿರುವುದು ನಿಜವಾಗಿಯೂ ಖುಷಿ ಕೊಟ್ಟಿದೆ ಎಂದು ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಭೈರಪ್ಪ ಮಾತನಾಡಿ ಯಾವ ರಾಜ್ಯಗಳಲ್ಲಿ ಹಿಂದುತ್ವವನ್ನು ಹಿಂದೆ ಇಡಲು ಹೋಗಿದ್ದರೋ ಅಂತಹ ರಾಜ್ಯಗಳು ಭಾರತ ದೇಶ ಹಿಂದುತ್ವದ ದೇಶ ಎಂಬುದನ್ನು ಸಾರಿದೆ. ಇನ್ನು ಮುಂದಿನ ದಿನದಲ್ಲಿ ಭಾರತದ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿಯ ಬಾವುಟ ಹಾರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಂಜೇಗೌಡ, ಜಿಲ್ಲಾ ಉಪಾಧ್ಯಕ್ಷ ಪಂಚಾಕ್ಷರಿ, ಚೇತನ್ ನಾಯಕ್,ಬಸವರಾಜು, ಕೃಷ್ಣಮೂರ್ತಿ ಬಿಎಸ್ಎನ್ಎಲ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ, ರೇಣುಕ ಲೋಕೇಶ್,ಪ್ರಸಾದ್, ಪ್ರಮೋದ್, ಕವಿತಾ, ಸೇರಿದಂತೆ ಇನ್ನಿತರರು ಹಾಜರಿದ್ದರು.

ಫೋಟೋ :

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರಷ್ಟಾಚಾರ, ತುಷ್ಠೀಕರಣ ರಾಜಕಾರಣಕ್ಕೆ ತಕ್ಕ ಪಾಠ
ಪಿಡಿಒಗಳಿಗೆ ಸೂಕ್ತ ಸೇವಾ ಭದ್ರತೆ ಒದಗಿಸಿ