ಕನ್ನಡಪ್ರಭ ವಾರ್ತೆ ಗದಗ
ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಬಳಿಕ ಸತತ ಮೂರನೇ ಬಾರಿ ವಿಶ್ವಗುರು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿ ನಾಯಕತ್ವವನ್ನು ವಿಶ್ವವೇ ಒಪ್ಪಿಕೊಂಡಿದ್ದು, ಅವರ ನಾಯಕತ್ವದಲ್ಲಿ ಮುಂದಿನ ದಿನಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಲಿದೆ ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದರು.ಬೆಟಗೇರಿಯ ಬಸ್ ನಿಲ್ದಾಣದ ಹತ್ತಿರ ವಾರ್ಡ್ ನಂ. 7 ಹಾಗೂ ವಾರ್ಡ್ ನಂ. 4ರ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆ ಹಮ್ಮಿಕೊಂಡ ವಿಜಯೋತ್ಸವದಲ್ಲಿ ಮಾತನಾಡಿದರು.
ನರೇಂದ್ರ ಮೋದಿ ಸೋಲಿಸಲು ಇಂಡಿ ಮೈತ್ರಿಕೂಟ ರಚಿಸಲಾಯಿತು. ಆದರೆ, ದೇಶದ ಪ್ರಭುದ್ಧ ಜನತೆ ಅದನ್ನು ತಿರಸ್ಕರಿಸಿದರು. ಮತ್ತೊಮ್ಮೆ ಕಾಂಗ್ರೆಸ್ ದೇಶಾದ್ಯಂತ ನೆಲಕಚ್ಚಿದರೂ ಗೆದ್ದವರಂತೆ ಸಂಭ್ರಮಿಸಿದರು. ಕಳೆದ 10 ವರ್ಷದಿಂದ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಅವರು ಅನರ್ಹವಾಗಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ವಲ್ಪ ಜೀವ ಬಂದಿದ್ದು, 10 ವರ್ಷದ ಬಳಿಕ ವಿರೋಧ ಪಕ್ಷದ ಸ್ಥಾನ ಪಡೆದಿದ್ದಾರೆ. ವಿರೋಧ ಪಕ್ಷದ ಸ್ಥಾನದಲ್ಲಿದ್ದು, ಸರ್ಕಾರಕ್ಕೆ ಒಳ್ಳೆಯ ಸಲಹೆ-ಸೂಚನೆ ನೀಡಿ, ಅಭಿವೃದ್ಧಿ ಪರ ಕಾರ್ಯಗಳಿಗೆ ಸರ್ಕಾರದ ಜೊತೆ ಸಹಕರಿಸಲಿ ಎಂದರು.ಈ ವೇಳೆ ಯಲ್ಲಪ್ಪ ಕಾಂಬ್ಳೇಕರ, ಎಸ್.ಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ ತಳವಾರ ಹಾಗೂ ಪ್ರಧಾನ ಕಾರ್ಯದರ್ಶಿ ದೇವಪ್ಪ ಗೋಟರ್ ಮಾತನಾಡಿದರು.
ಬಿಜೆಪಿ ಮುಖಂಡರಾದ ಚಿನ್ನಪ್ಪ ನೆಗಳೂರ, ರಾಜು ಕೋಚಿ, ಲಕ್ಷ್ಮಣ ನೀಲಗುಂದ, ಪರಶುರಾಮ ಶ್ಯಾಮಿ, ಕೃಷ್ಣಾ ಲಕ್ಕುಂಡಿ, ಶಿವು ಪೂಜಾರ, ಮಾಯಪ್ಪ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಗ್ಯಾನೋಬ ಪತಂಗಿ, ಪ್ರಭು ಶ್ಯಾಗಾವಿ, ರಾಜು ಲಕ್ಕುಂಡಿ, ಅಭಿಷೇಕ ಮಡಿವಾಳರ, ಕಾಬ್ಳೇಕರ, ಶಿವು ಗೋಟೂರ್, ಮೈಲಾರಿ ತುರಕಾಣಿ, ಈರಣ್ಣ ಬ್ಯಾಹಟ್ಟಿ, ಗೌರೀಶ ಬೇಲೇರಿ, ಮಲ್ಲಿಕಾರ್ಜುನ ಬೇಲೇರಿ, ಶ್ರೀಕಾಂತ್ ದೇಸಾಯಿ, ಕೃಷ್ಣಾ ಚಿಂತಾ ಸೇರಿದಂತೆ ಕಾರ್ಯಕರ್ತರು ಇದ್ದರು.