ಶಿಕ್ಷಣ ನೀತಿ ಬದಲಾಗದೆ ದೇಶಬದಲಾಗದು: ಡಾ. ಬಿಳಿಮಲೆ

KannadaprabhaNewsNetwork |  
Published : Sep 24, 2026, 03:45 AM IST
purushottam bilimale | Kannada Prabha

ಸಾರಾಂಶ

ಶಿಕ್ಷಣ ನೀತಿ ಬದಲಾಗದೆ ರಾಜ್ಯ ಮತ್ತು ದೇಶದ ಸಾಮಾಜಿಕ ವ್ಯವಸ್ಥೆ ಬದಲಾಗುವುದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರುಶಿಕ್ಷಣ ನೀತಿ ಬದಲಾಗದೆ ರಾಜ್ಯ ಮತ್ತು ದೇಶದ ಸಾಮಾಜಿಕ ವ್ಯವಸ್ಥೆ ಬದಲಾಗುವುದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ, ಸಂಸ್ಕೃತಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತೀಯ ಸಮಾಜ ಇಂದು ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಊಳಿಗಮಾನ್ಯ ಪದ್ಧತಿಯ ಕಡೆಗೆ ಕೊಂಡೊಯ್ಯುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶಿಕ್ಷಣ, ಉದ್ಯೋಗ ಕ್ರಾಂತಿ ನಡೆಯುತ್ತಿದ್ದರೂ ಭಾರತ ಈ ವಿಷಯದಲ್ಲಿ ಕೈಕಟ್ಟಿ ಕುಳಿತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಲೋಹಿಯಾ ನಾಡಿನಲ್ಲಿ ಮೌಢ್ಯದ ಜಾಡು ಬಿತ್ತರವಾಗುತ್ತಿದೆ. ಗಾಂಧಿ, ಅಂಬೇಡ್ಕರ್ ಎಂಬ ದಾರ್ಶನಿಕರು ಬೇಡವಾಗುತ್ತಿದ್ದಾರೆ. ಚುನಾವಣೆ ಎನ್ನುವುದು ಇವತ್ತು ಶ್ರೀಸಾಮಾನ್ಯರ ಕೈಗೆಟುಕದೆ ಶ್ರೀಮಂತರ, ಬಂಡವಾಳಶಾಹಿಗಳ ಆಡೊಂಬೊಲವಾಗಿದೆ ಎಂದರು.

ಇದೇ ವೇಳೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಡಾ.ರಾಮಲಿಂಗೇಶ್ವರ್(ಸಿಸಿರಾ), ಬಿ.ಶೃಂಗೇಶ್ವರ್, ಶಾಂತಿ ವಾಸು ಸಂಪಾದಿಸಿರುವ ನೂರಾರು ಲೇಖಕರು ಬರೆದಿರುವ ರೇವಣ್ಣ ಅವರ ‘ಆನು ಒಲಿದಂತೆ ಹಾಡುವೆ’ ಅಭಿನಂದನೆ ಗ್ರಂಥ ಲೋಕಾರ್ಪಣೆ ಮಾಡಿದರು.

ಗಾಂಧಿ ಭವನದ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ಅವರು ಕುವೆಂಪು ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಬೇಲಿಮಠದ ಶಿವರುದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸುಮಂಗಲಿ ಸೇವಾಶ್ರಮದ ಪದ್ಮಶ್ರೀ ಡಾ.ಎಸ್.ಜಿ.ಸುಶೀಲಮ್ಮ ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸಿಸಿರಾ, ಕಾರ್ಯದರ್ಶಿ ಸಿ.ಹೇಮಾವತಿ, ಸಂಚಾಲಕರಾದ ಡಾ.ಕೃಷ್ಣ ಹಾನ್ ಬಾಳ್, ಅರಬಗಟ್ಟ ನಾಗರಾಜ್, ಎಲ್.ಬಸವಲಿಂಗ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ದಾಖಲೆ ಸೃಷ್ಟಿಸಿ ಕಾರು ಮಾರ್ತಿದ್ದ ಗ್ಯಾಂಗ್‌ನ ಬಂಧನ
ಟ್ರಾಫಿಕಲ್ಲಿ ನಿತ್ಯ 2 ತಾಸು ಕಳೆವ ಶಾಲಾ ಮಕ್ಕಳು!