ಮೋದಿ ಪ್ರಧಾನಮಂತ್ರಿಯಾಗದಿದ್ದರೆ ದೇಶದ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲವಾಗಿತ್ತು: ಬೊಮ್ಮಾಯಿ

KannadaprabhaNewsNetwork |  
Published : Jun 21, 2024, 01:03 AM IST
ಫೋಟೊ ಶೀರ್ಷಿಕೆ: 20ಆರ್‌ಎನ್‌ಆರ್5ರಾಣಿಬೆನ್ನೂರಿನ ಸಿದ್ಧೇಶ್ವರ ಕಲ್ಯಾಣಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನೂತನ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಅತಿಥಿಗಳು ಉದ್ಘಾಟಿಸಿದರು. ಫೋಟೊ ಶೀರ್ಷಿಕೆ: 20ಆರ್‌ಎನ್‌ಆರ್5ಎರಾಣಿಬೆನ್ನೂರಿನ ಸಿದ್ಧೇಶ್ವರ ಕಲ್ಯಾಣಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೂತನ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ಮೋದಿಯವರು ಮೂರನೇಯ ಬಾರಿ ಪ್ರಧಾನಮಂತ್ರಿಯಾಗದೇ ಹೋಗಿದ್ದರೆ ದೇಶದ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲವಾಗಿತ್ತು ಎಂದು ಹಾವೇರಿ-ಗದಗ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಾಣಿಬೆನ್ನೂರು: ಮೋದಿಯವರು ಮೂರನೇಯ ಬಾರಿ ಪ್ರಧಾನಮಂತ್ರಿಯಾಗದೇ ಹೋಗಿದ್ದರೆ ದೇಶದ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲವಾಗಿತ್ತು ಎಂದು ಹಾವೇರಿ-ಗದಗ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಸಿದ್ಧೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೆಲವು ಶಕ್ತಿಗಳು ಮೋದಿ ಪ್ರಧಾನಿಯಾಗಲು ಬಿಡದೇ ದೇಶದಲ್ಲಿ ಆತಂಕವನ್ನು ನಿರ್ಮಿಸಿ ಅಡ್ಟಿಯಾಗಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದರು.ರಾಜ್ಯದಲ್ಲಿ ಜನ ಸಂಪೂರ್ಣವಾಗಿ ಭ್ರಮನಿರಸಗೊಂಡಿದ್ದು ಒಂದು ವರ್ಷದಲ್ಲಿ ಅಧಿಕಾರ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಅಧಿಕಾರಕ್ಕಾಗಿ ಗ್ಯಾರಂಟಿಗಳನ್ನು ನೀಡುತ್ತಿದ್ದು ಖಜಾನೆ ಸಂಪೂರ್ಣ ಖಾಲಿಯಾಗಿದೆ. ನೀವು ಹೆಚ್ಚಿನ ಸ್ಥಾನ ನೀಡಿ ಅವರಿಗೆ ತಕ್ಕಪಾಠ ಕಲಿಸಿದ್ದಿರಿ. ಇವರು ಅಭಿವೃದ್ಧಿಯಲ್ಲಿ ದೊಡ್ಡ ಶೂನ್ಯ. ಕಳೆದ ವರ್ಷ 15ಸಾವಿರ ಕೋಟಿ ರು. ಹೊಸ ತೆರಿಗೆ ಮಾಡಿದರು. ಅಬಕಾರಿ, ವಿದ್ಯುತ್, ಹಾಲು, ಪೆಟ್ರೋಲ್ ತೆರಿಗೆ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಬೆಲೆ ಹೆಚ್ಚಳವಾದರೆ ರೈತರಿಗೆ ತೊಂದರೆ ಎದುರಿಸಬೇಕಾಗುತ್ತದೆ. ಶೀಘ್ರದಲ್ಲೇ ಬಸ್ ದರ ಕೂಡ ಹೆಚ್ಚಾಗಲಿದೆ. ಬಡವರ ಹೆಸರು ಹೇಳಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಿಸಬೇಕಿದೆ. ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಅಭಿವೃದ್ಧಿ ಕೆಲಸ ಮಾಡುತ್ತೇನೆ. ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದು ಮೆಗಾಮಾರುಕಟ್ಟೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿರುವೆ. ಮುಂದಿನ ದಿನಗಳಲ್ಲಿ ರಾಣಿಬೆನ್ನೂರು ವಾಣಿಜ್ಯ ಕೇಂದ್ರವಾಗಿ ಬೆಳೆಯಬೇಕಿದೆ. ಟೆಕ್ಸಟೈಲ್ಸ ಪಾರ್ಕ ಮಾಡುವ ಮೂಲಕ ಹೆಚ್ಚಿನ ಕೆಲಸ ಮಾಡಲಾಗುವುದು. ರೈಲು ಯೋಜನೆಯ ಸೌಲಭ್ಯಗಳನ್ನು ಹೆಚ್ಚಿಸಲು ಪ್ರಯತ್ನ ಮಾಡಲಾಗುವುದು.ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಬೊಮ್ಮಾಯಿಯವರು ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಸಲುವಾಗಿ ಅವರು ಸಚಿವರಾಗಬೇಕಾಗಿತ್ತು. ಮುಂದಿನ ದಿನಗಳಲ್ಲಿ ಕೇಂದ್ರ ಸಚಿವರಾಗಿ ಆಯ್ಕೆಯಾಗುವರೆಂಬ ವಿಶ್ವಾಸವಿದೆ. ಬೊಮ್ಮಾಯಿಯವರ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ಚುನಾವಣಾ ಟಿಕೆಟ್ ಘೋಷಣೆಯಾದಾಗಿನಿಂದ ಹಿಡಿದು ಮತದಾನ ದಿನದವರೆಗೂ ಶ್ರಮ ಪಟ್ಟಿದ್ದಾರೆ. ಈ ಚುನಾವಣೆ ವಿಭಿನ್ನವಾಗಿದೆ. ನಿಮ್ಮ ಶ್ರಮದಿಂದ ಬೊಮ್ಮಾಯಿ ಅವರು ಆಯ್ಕೆಯಾಗಿದ್ದಾರೆ. ಸಿಎಂ ಅವಧಿಯಲ್ಲಿ ನೀಡಿರುವ ಯೋಜನೆಗಳಿಗೆ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿದ್ದ ಮತಗಳಿಗಿಂತ ಅಧಿಕ ಮತಗಳು ಲಭಿಸಿವೆ. ಬೊಮ್ಮಾಯಿಯವರು ಲೋಕಸಭಾ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದರು.ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಶಹರ ಘಟಕ ಅಧ್ಯಕ್ಷ ರಮೇಶ ಗುತ್ತಲ, ಗ್ರಾಮೀಣ ಘಟಕ ಅಧ್ಯಕ್ಷ ಪರಮೇಶಪ್ಪ ಗೂಳಣ್ಣನವರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಭಾರತಿ ಜಂಬಗಿ, ಕೆ.ಶಿವಲಿಂಗಪ್ಪ, ಗವಿಸಿದ್ದಪ್ಪ ದ್ಯಾಮಣ್ಣನವರ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ಮಂಗಳಗೌರಿ ಪೂಜಾರ, ಚೋಳಪ್ಪ ಕಸವಾಳ, ಜಿ.ಜಿ.ಹೊಟ್ಟಿಗೌಡ್ರ, ಜಟ್ಟೆಪ್ಪ ಕರೇಗೌಡರ, ಮುರಿಗೆಪ್ಪ ಶೆಟ್ಟರ, ವ್ಹಿ.ಪಿ. ಲಿಂಗನಗೌಡ್ರ, ಅಮೋಘ ಬದಾಮಿ ಹಾಗೂ ಪಕ್ಷದ ನಗರಸಭಾ ಸದಸ್ಯರುಗಳು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.ಬೊಮ್ಮಾಯಿ ಲೇವಡಿ: ಒಂದು ಕುಟುಂಬದಲ್ಲಿ ಬರಿ ಹೆಣ್ಣು ಹುಟ್ಟಿದವರು ಗಂಡು ಮಗು ಜನಿಸಿದರೆ ಪೇಡೆ ಹಂಚಲು ಬಯಸಿದ್ದರು. ಆದರೆ ಅವರ ಆಸೆ ಕೈಗೂಡದಾದಾಗ ಪಕ್ಕದ ಮನೆಯವರಿಗೆ ಗಂಡು ಮಗು ಜನಿಸಿದಾಗ ಪೇಡೆ ಹಂಚಿದ್ದರು. ಅದೇ ರೀತಿ ಕಾಂಗ್ರೆಸ್ ಪಕ್ಷದವರು ಕೇವಲ 99 ಸ್ಥಾನಗಳು ಲಭಿಸಿದರೂ ಮಿತ್ರ ಪಕ್ಷಗಳು ಹೆಚ್ಚಿನ ಸ್ಥಾನ ಗಳಿಸಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ ಎಂದು ಬೊಮ್ಮಾಯಿ ಲೇವಡಿ ಮಾಡಿದರು. ಶಾಸಕರಿಗೆ ಟಾಂಗ್‌: ಬೊಮ್ಮಾಯಿ ಅವರನ್ನು ಕುಂಟ ಎತ್ತು ಎಂದು ಜರಿದಿದ್ದ ಶಾಸಕರೇ ಈಗ ನಿಮ್ಮ ಹೋರಿ ಎಲ್ಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಕಿಚಾಯಿಸಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ