ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ ೨೦೨೦ ಜಾರಿಯಲ್ಲಿದ್ದು ಎಲ್ಲಾ ವಯಸ್ಸಿನ ಹಸು ಕರು, ಗೂಳಿ, ಎತ್ತು ಮತ್ತು ೧೩ ವರ್ಷದೊಳಗಿನ ಎಮ್ಮೆ, ಕೋಣ ವಧೆ ನಿಷೇಧಿಸಲಾಗಿದ್ದು ಬಕ್ರೀದ್ ಹಬ್ಬ ಹಾಗೂ ಇತರೆ ಸಂದರ್ಭಗಳಲ್ಲಿ ಸದರಿ ಜಾನುವಾರುಗಳ ಹತ್ಯೆ ಕಾನೂನುಬಾಹಿರ.
ಕನ್ನಡಪ್ರಭ ವಾರ್ತೆ ಕೋಲಾರಜೂ.7ರಂದು ನಡೆಯುವ ಬಕ್ರೀದ್ ಹಬ್ಬದ ನೆಪದಲ್ಲಿ ಗೋವು ಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬಕ್ರೀದ್ ಅಕ್ರಮ ಒಂಟೆ ಮತ್ತು ಗೋವುಗಳ ಹತ್ಯೆ ತಡೆಗಟ್ಟಲು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯಲ್ಲಿ ಮಾತನಾಡಿದರು.ಜಾನುವಾರು ಹತ್ಯೆ ನಿಷೇಧ
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ ೨೦೨೦ ಜಾರಿಯಲ್ಲಿದ್ದು ಎಲ್ಲಾ ವಯಸ್ಸಿನ ಹಸು ಕರು, ಗೂಳಿ, ಎತ್ತು ಮತ್ತು ೧೩ ವರ್ಷದೊಳಗಿನ ಎಮ್ಮೆ, ಕೋಣ ವಧೆ ನಿಷೇಧಿಸಲಾಗಿದ್ದು ಬಕ್ರೀದ್ ಹಬ್ಬ ಹಾಗೂ ಇತರೆ ಸಂದರ್ಭಗಳಲ್ಲಿ ಸದರಿ ಜಾನುವಾರುಗಳ ಅನಧಿಕೃತ ಸಾಗಾಣಿಕೆ ವಧೆ ತಡೆಯುವ ಕೆಲಸ ಅಧಿಕಾರಿಗಳು ಮಾಡಬೇಕಿದೆ ಎಂದರು.ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಸ್ಥಳೀಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಪರಿಸರ ಇಲಾಖೆಯ ಮೂಲಕ ಧ್ವನಿವರ್ಧಕ ಬಳಸಿ ಪ್ರಚಾರ ನೀಡುವುದು ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನಪ್ರತಿನಿಧಿಗಳು ಹಾಗೂ ಮಸೀದಿ ಮುಖಂಡರು ಮತ್ತು ನಗರದ ಎಲ್ಲಾ ವಾರ್ಡ್‌ಗಳ ನಗರಸಭೆ ಸದಸ್ಯರೊಂದಿಗೆ ಸಭೆ ನಡೆಸಿ, ಸದರಿ ಕಾಯ್ದೆ ಬಗ್ಗೆ ಅರಿವು ಮೂಡಿಸಿ ಗೋಹತ್ಯೆ ತಡೆಗಟ್ಟುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.ಚಕ್‌ಪೋಸ್ಟ್‌ಗಳಲ್ಲಿ ತಪಾಸಣೆ
ಗ್ರಾಪಂ ಪಿಡಿಒ, ಪಶು ವೈದ್ಯಕೀಯ ಅಧಿಕಾರಿರೊಂದಿಗೆ ಸಾರಿಗೆ ಇಲಾಖೆಯಿಂದ ಜಿಲ್ಲೆಯ ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸುವಂತೆ ಹಾಗೂ ಒಂದು ವೇಳೆ ಜಾನುವಾರುಗಳ ಸಾಗಣೆ ಕಂಡುಬಂದಲ್ಲಿ ಕಾನೂನು ಕ್ರಮವಹಿಸಿ ಜಾನುವಾರುಗಳನ್ನು ರಕ್ಷಿಸಿ ಪೊಲೀಸ್ ಹಾಗೂ ಪಶುಸಂಗೋಪನೆ ಇಲಾಖೆಯಿಂದ ಗೋಶಾಲೆಗಳಿಗೆ ಸೇರಿಸುವಂತೆ ತಿಳಿಸಿದರು.
ಜಿಪಂ ಸಿಇಓ ಪ್ರವೀಣ್.ಪಿ.ಬಾಗೇವಾಡಿ, ಕೋಲಾರ ಎಸ್‌ಪಿ ಡಾ.ನಿಖಿಲ್.ಬಿ, ಕೆಜಿಎಫ್ ಡಿವೈಎಸ್ಪಿ ಪಾಂಡುರಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ನಟೇಶ್, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಮಧುಸೂಧನ್ ರೆಡ್ಡಿ, ನಗರಸಭಾ ಆಯುಕ್ತ ಪ್ರಸಾದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನಮ್ಮ, ಪಶು ಸಂಗೋಪನಾ ಇಲಾಖೆ ಕೆಜಿಎಫ್ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ತ್ರಿಮೂರ್ತಿ ನಾಯಕ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.