ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ನಡೆಯುತ್ತಿರುವ ನಾಟಕೋತ್ಸವದ ಗುರುಕುಲ ರಂಗಾ ಕಲಾವಿದರ ಸಂಘದ ಕುರುಕ್ಷೇತ್ರ ಅಥವಾ ಛಲದೊಳ್ ದುರ್ಯೋಧನ ನಾಟಕೋತ್ಸವದಲ್ಲಿ ಮಾತನಾಡಿ, ಇಷ್ಟಿದ್ದರೂ ರಂಗಮಂದಿರದ ಕೊರತೆ ಇದೆ. ಇದರಿಂದ ಆರ್ಥಿಕ ಕೊರತೆ ಹಾಗೂ ತೊಂದರೆ ಕಲಾವಿದರಿಗೆ ಆಗುತ್ತದೆ ಎಂದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಣ್ಣ ವಹಿಸಿ ಮಾತನಾಡಿ, ಮೊಬೈಲ್ ಹಾಗೂ ದೃಶ್ಯ ಮಾಧ್ಯಮಗಳಿಂದ ನಾಡಿನ ಸಂಸ್ಕೃತಿ ಕಲೆ ಆಸಕ್ತಿ ಕಡಿಮೆಯಾಗುತ್ತಿದೆ. ಕಲೆ ಉಳಿಯಬೇಕು ಬೆಳೆಯಬೇಕು ಪಟ್ಟಣದಲ್ಲಿ ರಂಗಮಂದಿರ ಬೇಕೇಬೇಕು ಎಂದರು. ನಾಟಕೋತ್ಸವದ ರೂವಾರಿಗಳು ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಮೀನ ರಾಜಣ್ಣನವರು ಜಿಲ್ಲೆಯಲ್ಲಿ ಅತಿ ಹೆಚ್ಚು ನಾಟಕಗಳನ್ನು ಪ್ರದರ್ಶನ ಈ ತಾಲೂಕಿನಲ್ಲಿ ನಡೆಯುತ್ತಿದೆ. ಆಕರ್ಷಣೀಯ ಸುಸಜ್ಜಿತ ಸೀನರಿಗಳೊಂದಿಗೆ ಕಲೆಯನ್ನು ಪ್ರದಶಿಸಿ ಕಲಾವಿದರು ನೀಡುತ್ತಿದ್ದಾರೆ. ಇದಕ್ಕೆ ಸಾಕಷ್ಟು ಖರ್ಚು ಭರಿಸಲಾಗುತ್ತಿದೆ ರಂಗಮಂದಿರ ಇದ್ದಲ್ಲಿ ಸಂಸ್ಕೃತಿ ಉಳಿಯುವಿಕೆಗೆ ವ್ಯವಸ್ಥಿತವಾಗುತ್ತದೆ ಎಂದರು. ಸಮನ್ವಯ ಅಧಿಕಾರಿ ಕೆ. ಎಲ್ .ಅನಿಲ್, ಉಮಾಶಂಕರ್, ಸಾಹಿತಿ ಬರಾಳು ಶಿವರಾಂ, ಹಿರಿಯ ಪತ್ರಕರ್ತ ಪುಟ್ಟಣ್ಣ, ರೈತ ಸಂಘದ ಅಧ್ಯಕ್ಷ ಸೊಪ್ಪಿನಹಳ್ಳಿ ಶಿವಣ್ಣ, ಕಲಾವಿದರಾದ ಮಹಾದೇವ್, ಮಿಲ್ಟ್ರಿಮಂಜು, ಮಾಸ್ಟರ್ ವೆಂಕಟ ಸುಬ್ಬಯ್ಯ, ಜಯಪ್ರಕಾಶ್, ರವಿಕುಮಾರ್, ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು.