ಪ್ರಸ್ತುತ ಸಮಾಜಕ್ಕೆ ಜಗಜೀವನ್‌ರಾಂ ಆದರ್ಶಗಳ ಅಗತ್ಯವಿದೆ

KannadaprabhaNewsNetwork |  
Published : Apr 07, 2025, 12:32 AM IST
6ಎಚ್ಎಸ್ಎನ್8 : ಅರಕಲಗೂಡಿನ ಅರಸು ಭವನದಲ್ಲಿ ಶನಿವಾರ ನಡೆದ ಜಗಜೀವನ ರಾಮ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸೌಮ್ಯ ಮಾತನಾಡಿದರು. | Kannada Prabha

ಸಾರಾಂಶ

ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದ ಬಾಬು ಜಗಜೀವನ ರಾಮ್ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ತಹಸೀಲ್ದಾರ್‌ ಸೌಮ್ಯ ಅವರು ತಿಳಿಸಿದರು. ಅಂದು ಉಂಟಾಗಿದ್ದ ಬರಗಾಲದ ಸಮಯದಲ್ಲಿ ತೀವ್ರ ಆಹಾರ ಬಿಕ್ಕಟ್ಟನ್ನು ಪರಿಹರಿಸುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಜಗಜೀವನ್ ರಾಮ್ ಅವರು ನಿರ್ವಹಿಸಿದ್ದಾರೆ. ಇದರ ಫಲವಾಗಿ ಇಂದು ಆಹಾರದ ಸಮಸ್ಯೆ ಉಲ್ಬಣಗೊಳ್ಳದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದ ಬಾಬು ಜಗಜೀವನ ರಾಮ್ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ತಹಸೀಲ್ದಾರ್‌ ಸೌಮ್ಯ ಅವರು ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಪಟ್ಟಣದ ಅರಸು ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಗಜೀವನರಾಮ್ ಅವರ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಗಜೀವನರಾಮ್ ಅವರು ದೇಶದ ಉಪ ಪ್ರಧಾನಿ, ಹಲವು ಖಾತೆಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಇವರ ಅವಧಿಯಲ್ಲಿ ಪ್ರಮುಖವಾಗಿ ಅನುಷ್ಠಾನಗೊಂಡ ಆಹಾರ ಭದ್ರತಾ ಕಾಯಿದೆ, ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ಬಣ್ಣಿಸಿದರು.

ವಿಶೇಷವಾಗಿ ಅಂದು ಉಂಟಾಗಿದ್ದ ಬರಗಾಲದ ಸಮಯದಲ್ಲಿ ತೀವ್ರ ಆಹಾರ ಬಿಕ್ಕಟ್ಟನ್ನು ಪರಿಹರಿಸುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಜಗಜೀವನ್ ರಾಮ್ ಅವರು ನಿರ್ವಹಿಸಿದ್ದಾರೆ. ಇದರ ಫಲವಾಗಿ ಇಂದು ಆಹಾರದ ಸಮಸ್ಯೆ ಉಲ್ಬಣಗೊಳ್ಳದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಉಪನ್ಯಾಸಕ ರವಿಕುಮಾರ್ ಮಾತನಾಡಿ, ಬಾಬುಜೀ ಎಂದು ಜನಪ್ರಿಯವಾಗಿರುವ ಜಗಜೀವನ ರಾಮ್ ಅವರ ಆದರ್ಶ ವ್ಯಕ್ತಿತ್ವ ನಮ್ಮ ಸಮಾಜಕ್ಕೆ ಇಂದಿಗೂ ಪ್ರಸ್ತುತವಾಗಿದೆ. ಭಾರತೀಯ ಸ್ವಾತಂತ್ರ್ಯಕಾರ್ಯಕರ್ತ ಮತ್ತು ರಾಜಕಾರಣಿ. ವಿವಿಧ ಖಾತೆಗಳೊಂದಿಗೆ ಸಚಿವರಾಗಿ ಮತ್ತು ಉಪ ಪ್ರಧಾನಿಯಾಗಿಯೂ ಸಹ ಸೇವೆ ಸಲ್ಲಿದ್ದಾರೆ. ಭಾರತೀಯ ಕೃಷಿಯ ಆಧುನೀಕರಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಿದ್ದಾರೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿ, ಸ್ವಾತಂತ್ರ್ಯ ಚಳವಳಿ, ರಾಜಕಾರಣದಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಜಗಜೀವನ ರಾಮ್ ಅವರನ್ನು ಅತ್ಯಂತ ಸಂಭ್ರಮದಿಂದ ಆರಾಧಿಸಿ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಪ್ರದೀಪ್‌ ಕುಮಾರ್, ಸದಸ್ಯರಾದ ಹೂವಣ್ಣ, ಇಒ ಪ್ರಕಾಶ್, ಬಿಇಒ ನಾರಾಯಣ, ಆರ್‌ಎಫ್‌ಒ ಯಶ್ಮಾ ಮಾಚಮ್ಮ, ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಸಮಾಜದ ಮುಖಂಡರಾದ ದೊರೆಬಾಬು, ಗಣೇಶ್ ವೇಲಾಪುರಿ, ನಿಂಗರಾಜು, ಚಂದ್ರ, ಕೃಷ್ಣ, ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನಾ ತಾಲೂಕು ಕಚೇರಿ ಆವರಣದಿಂದ ಬೆಳ್ಳಿ ಸಾರೋಟಿನಲ್ಲಿ ಜಗಜೀವನರಾಮ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ